Moving text

Mandya District Police
ಪ್ರತಿಕಾ ಪ್ರಕಟಣೆ
ಬ್ಯಾಂಕ್ ಸಿಬ್ಬಂದಿಗೆ ಹಲ್ಲೆ ಮಾಡಿ ನಗದು ಹಣವನ್ನು ದರೋಡೆ ಮಾಡಿದ್ದ ಆರೋಪಿಗಳ ಬಂಧನ ಮತ್ತು ಆರೋಪಿಗಳಿಂದ 15,25,800 ರೂ ನಗದು ಹಣ ವಶ


ದಿ:30-10-2017 ರಂದು ರಾತ್ರಿ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಮೊ.ಸಂ.146/2017 ಕಲಂ 454, 380 ಐಪಿಸಿ ಕೇಸಿನಲ್ಲಿ ಆರೋಪಿ ಮತ್ತು ಮಾಲು ಪತ್ತೆಯ ಬಗ್ಗೆ ಪೊಲೀಸ್ ಇನ್ಸ್‍ಪೆಕ್ಟರ್ ಎಸ್ ಗಂಗಾಧರ್ ಹಾಗೂ ಕ್ರೈಂ ಸಿಬ್ಬಂದಿಗಳಾದ ಠಾಣೆಯ ಹೆಚ್.ಸಿ.115 ಸಿದ್ದರಾಜು, ಹೆಚ್.ಸಿ.60 ಅಂಜನಮೂರ್ತಿ, ಹೆಚ್.ಸಿ.181 ಎಂ.ಡಿ.ಸತೀಶ್, ಪಿ.ಸಿ. 142 ಹರ್ಷವರ್ಧನ, ಪಿಸಿ 492 ಪ್ರಶಾಂತ್‍ಕುಮಾರ್, ಪಿಸಿ 306 ಭಾನುಪ್ರಕಾಶ್ ರವರೊಂದಿಗೆ ರಾತ್ರಿ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ 31-10-2017 ರಂದು ಬೆಳಗಿನ ಜಾವ 2-00 ಗಂಟೆಯ ಸಮಯದಲ್ಲಿ ಕೋಟೆ ಕಾಳಮ್ಮನ ಗುಡಿ ಬೀದಿಯಲ್ಲಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರವಿರುವ ಅಪೋಲೋ ಬಟ್ಟೆ ಅಂಗಡಿಯ ಸಂದಿಯ ಗೋಡೆಯ ಮರೆಯಲ್ಲಿ ಒಬ್ಬ ಆಸಾಮಿ ತನ್ನ ಮುಖವನ್ನು ಮಾರೆ ಮಾಚಿಕೊಂಡು ನಿಂತಿದ್ದವನೇ ಪೊಲೀಸ್ ಜೀಪನ್ನು ಕಂಡು ತನ್ನ ಹೆಗಲಿಗೆ ನೇತು ಹಾಕಿಕೊಂಡಿದ್ದ ಬ್ಯಾಗಿನ ಸಮೇತ ಓಡಿ ಹೋಗುತ್ತಿದ್ದವನ ಮೇಲೆ ಅನುಮಾನ ಬಂದು ಕೂಡಲೇ ಜೀಪನ್ನು ನಿಲ್ಲಿಸಿ ಆತನನ್ನು ಹಿಂಬಾಲಿಸಿ ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ವಿಚಾರ ಮಾಡಲಾಗಿ ಆತನು ತನ್ನ ಹೆಸರು ನೀತೀಶ್ ತಂದೆ ವೆಂಕಟೇಶ ವಯಸ್ಸು 21 ವರ್ಷ ವಕ್ಕಲಿಗರು ಕೇಬಲ್ ಕೆಲಸ ವಾಸ ನಂದಿನಿ ಲೇ ಔಟ್ ಡಾ: ರಾಜಕುಮಾರ್  ಸಮಾಧಿ ಹತ್ತಿರ, ಬೆಂಗಳೂರು ಸ್ವಂತ ಸ್ಥಳ  ಬಾಣಗÀಹಳ್ಳಿ ಗ್ರಾಮ ಮಳವಳ್ಳಿ ತಾಲ್ಲೋಕು ಎಂತಲು ತಿಳಿಸಿದ್ದು ಆತನ ಬಳಿ ಇದ್ದ ಬ್ಯಾಗ್ ಅನ್ನು ಪರಿಶೀಲಿಸಿ ನೋಡಲಾಗಿ ನಗದು ಹಣವಿದ್ದು ಸದರಿ ಹಣದ ಬಗ್ಗೆ ವಿಚಾರ ಮಾಡಲಾಗಿ 10 ಲಕ್ಷ ಇದೆ ಎಂತಲೂ, ಮತ್ತೊಮ್ಮೆ 12 ಲಕ್ಷ ಇದೆ ಎಂತಲೂ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಪೊಲೀಸ್ ಇನ್ಸ್‍ಪೆಕ್ಟರ್‍ರವರಿಗೆ ಅನುಮಾನ ಬಂದು ಪಂಚರ ಸಮಕ್ಷಮ ಬ್ಯಾಗಿನಲ್ಲಿದ್ದ ನಗದು ಹಣ ಎಣಿಕೆ ಮಾಡಿ ನೋಡಲಾಗಿ 15,25,800 ರೂಗಳು ಇದ್ದು, ಜೊತೆಯಲ್ಲಿ ಒಂದು ಬಟನ್ ಚಾಕು ಸಹ ಇದ್ದು ಸದರಿ ಆಸಾಮಿಯನ್ನು ನಗದು ಹಣವಿದ್ದ ಬ್ಯಾಗ್‍ನ ಸಮೇತ ಮುಂದಿನ ಕಾನೂನು ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಆತನು ನೀಡಿದ ಮಾಹಿತಿಯ ಮೇರೆಗೆ ಬೆಂಗಳೂರು ನಗರದ ಭಾಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ದಿನಾಂಕ 30-10-2017 ರಂದು ನಡೆದಿದ್ದ ಎ.ಟಿ.ಎಂ. ಯಂತ್ರಕ್ಕೆ ಹಣ ತುಂಬುವ ಸಿಬ್ಬಂದಿಗೆ ಹಲ್ಲೆ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಸದರಿ ಆರೋಪಿಯ ಕೃತ್ಯಕ್ಕೆ ಬಳಸಿದ ಬೈಕ್ ನೀಡಿ ಸಹಕರಿಸಿದ ಮತ್ತೊಬ್ಬ ಆರೋಪಿ ರಾಕೇಶ ಎಂಬಾತನನ್ನು ಸಹ ಪತ್ತೆ ಮಾಡಿ ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಅನ್ನು ಸಹ ವಶಕ್ಕೆ ಪಡೆದುಕೊಂಡಿರುತ್ತದೆ. ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಮೇಲ್ಕಂಡ ಕೃತ್ಯದ ಆರೋಪಿಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗು ಸಿಬ್ಬಂಧಿರವರ ಬಗ್ಗೆ  ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರು ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ. 

No comments:

Post a Comment