Moving text

Mandya District Police

Mandya District Daily Crime Report Date: 30-11-2017
Mandya District Daily Crime Report Date: 29-11-2017

Mandya District Daily Crime Report Date: 28-11-2017
ದಿನಾಂಕ:27-11-2017 ರಂದು “ಸಂವಿಧಾನ ದಿನ” ವನ್ನು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಆಚರಿಸಲಾಯಿತು.



ದಿನಾಂಕ:27-11-2017 ರಂದು “ಜನಸ್ನೇಹಿ ಪೊಲೀಸ್” ಕಾರ್ಯಾಗಾರವನ್ನು ಮಳವಳ್ಳಿ ಉಪ-ವಿಭಾಗದಲ್ಲಿ ಏರ್ಪಡಿಸಲಾಯಿತು.




ದಿನಾಂಕ:26-11-2017 ರಂದು “Police Image Building” ವಿಷಯದ ಬಗ್ಗೆ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಯಿತು. 






ಜನಸ್ನೇಹಿ ಪೊಲೀಸ್ ಕಾರ್ಯಗಾರವನ್ನು ದಿನಾಂಕ 24-11-2017 ಮತ್ತು 25-11-2017 ರಂದು ಮಂಡ್ಯ ಉಪ-ವಿಭಾಗ ಮತ್ತು ಶ್ರೀರಂಗಪಟ್ಟಣ ಉಪ-ವಿಭಾಗಗಳಲ್ಲಿ  ಏರ್ಪಡಿಸಲಾಯಿತು. 










Mandya District Daily Crime Report Date: 24-11-2017

Press Note on 22-11-2017

                                                                                              ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                                               ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ 22.11.2017

                                                             ಪತ್ರಿಕಾ ಪ್ರಕಟಣೆ

ವಿಷಯ:ದಿನಾಂಕ 20.11.2017 ರಂದು ರಾಜ್ಯದ  ಮಾನ್ಯ  ಮುಖ್ಯಮಂತ್ರಿಯವರ    ನಾಗಮಂಗಲ 
          ಟೌನ್‍ನ  ಪ್ರವಾಸ ಕಾರ್ಯಕ್ರಮದ  ಸಮಯದಲ್ಲಿ  ಓರ್ವ ಮಹಿಳೆ  ಚಿಕಿತ್ಸೆಗೆ    ತೆರಳುತ್ತಿದ್ದ
          ಆಂಬ್ಯೂಲೆನ್ಸ್ ಅನ್ನು ಪೊಲೀಸರು ತಡೆದು ತೊಂದರೆ ಉಂಟು ಮಾಡಿರುತ್ತಾರೆಂದು  ಇತ್ಯಾದಿ
          ಯಾಗಿ  ದೃಶ್ಯ/ಪತ್ರಿಕಾ ಮಾದ್ಯಮಗಳಲ್ಲಿ ಸುದ್ದಿ ವರದಿಯಾಗಿರುವ  ಬಗ್ಗೆ  ಸ್ಪಷ್ಟೀಕರಣ ಕುರಿತು.
                                                             
                                                                      ***

      ಮೇಲ್ಕಂಡ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಯವರಿಂದ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ.

ತೊಂದರೆಗೊಳಗಾಗಿದ್ದಾರೆ ಎನ್ನಲಾದ ಮಹಿಳೆ ಮತ್ತು ಈಕೆಯ ಪತಿ ಮತ್ತು ಸಹೋದರನ ಹೇಳಿಕೆ:
     ತೊಂದರೆಗೆ ಒಳಗಾದವರು ಎನ್ನಲಾದ ಮಹಿಳೆ, ಈಕೆಯ ಪತಿ ಮತ್ತು ಮಹಿಳೆಯ ಸಹೋದರನಿಂದ ಹೇಳಿಕೆ ನೀಡಿದ್ದು, ಹೇಳಿಕೆಯಲ್ಲಿ ಸದರಿ ಮಹಿಳೆ ಶ್ರೀಮತಿ ಯಶೋದಾ ಕೋಂ ಶಂಕರ, 35 ವರ್ಷ, ಕೊಣನೂರು ಗ್ರಾಮ,  ನಾಗಮಂಗಲ ತಾ|| ರವರು 5-6 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಪತಿ ಶ್ರೀ ಶಂಕರ ದಿನಾಂಕ 20.11.2017 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಚಿಕಿತ್ಸೆಗಾಗಿ  ಒಂದು ಆಟೋದಲ್ಲಿ ನಾಗಮಂಗಲ  ಟೌನ್‍ಗೆ ಬಂದಿಳಿದು, ನಂತರ ಅಲ್ಲಿಂದ ಬೇರೆ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಈ ಸಮಯದಲ್ಲಿ ಟ್ರಾಫಿಕ್ ಇರುತ್ತದೆ. ಆಗ ಆಟೋ ಡ್ರೈವರ್, ಆಸ್ಪತ್ರೆ ಹತ್ತಿರದಲ್ಲೇ ಇರುವುದರಿಂದ ನಡೆದುಕೊಂಡು ಹೋಗಬಹುದು ಎಂದು ತಿಳಿಸಿದ್ದು, ಅದರಂತೆ ಸದರಿ ಮಹಿಳೆ ತನ್ನ ಪತಿ ಮತ್ತು ಸಹೋದರನೊಡನೆ ನಡೆದುಕೊಂಡು ಹೋಗಿರುವುದಾಗಿದೆ. ಆದರೆ ಈ ವಿಚಾರ ಪೊಲೀಸರಿಗೆ ತಿಳಿದಿರುವುದಿಲ್ಲ ಹಾಗೂ ಪೊಲೀಸರು ತಮ್ಮ ಯಾವುದೇ ವಾಹನವನ್ನು ತಡೆದು ನಿಲ್ಲಿಸಿ ಯಾವುದೇ ತೊಂದರೆ ನೀಡಿಲ್ಲ, ಆಸ್ಪತ್ರೆ ಹತ್ತಿರವೆ ಇದ್ದುದ್ದರಿಂದ ತಾವೇ ಆಟೋದಿಂದ ಇಳಿದು ಆಸ್ಪತ್ರೆಗೆ ನಡೆದುಕೊಂಡು ಹೋಗಿರುತ್ತೇವೆಂದು ತಿಳಿಸಿರುವುದಾಗಿದೆ.

ಡಾ|| ಶಿವಕುಮಾರ್, ವೈದ್ಯಾಧಿಕಾರಿ, ನಾಗಮಂಗಲ ಸರ್ಕಾರಿ ಆಸ್ಪತ್ರೆ ರವರ ಹೇಳಿಕೆ:
   ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಮಧ್ಯಾಹ್ನ 12.45 ಗಂಟೆಗೆ ಶ್ರೀಮತಿ ಯಶೋದಮ್ಮ ಕೋಂ ಶಂಕರ, ಕೊಣನೂರು ಗ್ರಾಮ ಎಂಬುವರು ಸಾಮಾನ್ಯ ಸುಸ್ತಿಗೆಂದು ಚಿಕಿತ್ಸೆ  ಪಡೆಯಲು ಆಸ್ಪತ್ರೆಗೆ ಬಂದಿದ್ದು, ಇವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಮಧ್ಯಾಹ್ನ 03.30 ಗಂಟೆಯಲ್ಲಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ.

ಡಾ|| ಡಿ.ಎಸ್.ವೆಂಕಟೇಶ್, ಮುಖ್ಯ ವೈದ್ಯಾಧಿಕಾರಿ, ನಾಗಮಂಗಲ ಆಸ್ಪತ್ರೆ ರವರ ಹೇಳಿಕೆ:
     ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಯಾವುದೇ ಆಂಬ್ಯೂಲೆನ್ಸ್‍ನಲ್ಲಿ ಯಶೋಧ ಎಂಬುವರನ್ನು ಕರೆ ತಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. 

ಪೊಲೀಸ್ ಸೂಪರಿಂಟೆಂಡೆಂಟ್ ರವರ ಅಭಿಪ್ರಾಯ ಮತ್ತು ಸ್ಪಷ್ಟನೆ:
      ದಿನಾಂಕ 20.11.2017 ರಂದು ನಾಗಮಂಗಲದಲ್ಲಿನ ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಆಂಬ್ಯೂಲ್ಸ್‍ನಲ್ಲಾಗಲಿ ಅಥವಾ 108ರ ವಾಹನದಲ್ಲಾಗಲಿ ಶ್ರೀಮತಿ ಯಶೋಧ ಎಂಬ ಮಹಿಳೆಯನ್ನು ಕರೆದುಕೊಂಡು ಬಂದಿರುವುದಿಲ್ಲ. ಈಕೆಯನ್ನು ಚಿಕಿತ್ಸೆಗಾಗಿ ಆಕೆಯ ಮನೆಯವರು ಒಂದು ಆಟೋದಲ್ಲಿ ನಾಗಮಂಗಲ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದು, ಆ ಸಮಯದಲ್ಲಿ ಟ್ರಾಫಿಕ್ ಇದ್ದುದ್ದರಿಂದ  ಹತ್ತಿರದಲ್ಲಿಯೇ ಆಸ್ಪತ್ರೆಯ ಇದೆ ಎಂದು ತನ್ನ ಮನೆಯವರ ಜೊತೆ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆದು ನಂತರ ಮಧ್ಯಾಹ್ನ 3.30 ಗಂಟೆಗೆ  ವಾಪಸ್ ತೆರಳಿರುವುದಾಗಿದೆ.

     ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೆ ಆಂಬ್ಯೂಲೆನ್ಸ್‍ಅನ್ನು ಪೊಲೀಸರು ತಡೆದಿರುವುದಿಲ್ಲ. ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಿಂದ ವರದಿಯಾದ ನಂತರವಷ್ಟೆ ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದ್ದು, ತದ ನಂತರ ಈ ಬಗ್ಗೆ ಮೇಲ್ಕಂಡಂತೆ ವರದಿ ಪಡೆದು ಪರಿಶೀಲಿಸಲಾಗಿ, ಇದು ಸತ್ಯಕ್ಕೆ ದೂರವಾದ ವಿಚಾರವೆಂಬುದಾಗಿರುತ್ತದೆ.
Mandya District Daily Crime Report Date: 21-11-2017
Mandya District Daily Crime Report Date: 20-11-2017
Mandya District Daily Crime Report Date: 19-11-2017

Mandya District Daily Crime Report Date: 18-11-2017
Mandya District Daily Crime Report Date: 17-11-2017

Mandya District Daily Crime Report Date: 16-11-2017

Mandya District Daily Crime Report Date: 15-11-2017

Mandya District Daily Crime Report Date: 14-11-2017

Mandya District Daily Crime Report Date: 13-11-2017
ದಿನಾಂಕ: 13-11-2017 ರಂದು ಶ್ರೀ ಕುಣಿಗಲ್ ಶ್ರೀಕಂಠ, ನಿವೃತ್ತ ಪೊಲೀಸ್ ಅಧೀಕ್ಷಕರು ರವರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಇಲಾಖಾ ವಿಚಾರಣೆ, ತನಿಖೆ ಹಾಗೂ ಗೂಂಡಾ ಕಾಯ್ದೆ ವಿಷಯಗಳ ಬಗ್ಗೆ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.



Mandya District Daily Crime Report Date: 12-11-2017
Mandya District Daily Crime Report Date: 11-11-2017
Mandya District Daily Crime Report Date: 10-11-2017
Mandya District Daily Crime Report Date: 09-11-2017

Mandya District Daily Crime Report Date: 08-11-2017

Mandya District Daily Crime Report Date: 07-11-2017

Mandya District Daily Crime Report Date: 06-11-2017

ದಿನಾಂಕ: 05-11-2017 ರಂದು ಕೃಷಿಕ್ ಸರ್ವೋದಯ ಟ್ರಸ್ಟ್, ಮಂಡ್ಯ ರವರ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀಮತಿ ರಾಧಿಕಾ.ಜಿ, ಐಪಿಎಸ್ ರವರು ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಸಮಾರಂಭದಲ್ಲಿ ಡಾ|| ಹೆಚ್.ಡಿ.ಚೌಡಯ್ಯ, ಚೇರ್‍ಮನ್, ಪಿಇಟಿ ರವರು ಹಾಗು ಇತರೆ ಗಣ್ಯರು ಉಪಸ್ಥಿತರಿದ್ದರು.





Mandya District Daily Crime Report Date: 05-11-2017
Mandya District Daily Crime Report Date: 04-11-2017

Mandya District Daily Crime Report Date: 03-11-2017
Weekly Parade & Mob Operation Practice at DAR Parade Ground Mandya. Date:03-11-2017








Visit of Bavarian Police (Germany) Delegation headed by Prof.Wilhelm Schmidbauer, DG of Bavarian State Police to Mandya district.

Delegates :

Professor Wilhelm Schmidbauer ( Director General / Police President of Bavarian State Police
Professor Wolfgang Sommer ( Chief of Police/ Police President of the Bavarian Training and Special Response Police)
Mr. Markus Trebes (Senior Police Superintendent)






Mandya District Daily Crime Report Date: 02-11-2017

Mandya District Daily Crime Report Date: 01-11-2017
ಪ್ರತಿಕಾ ಪ್ರಕಟಣೆ
ಬ್ಯಾಂಕ್ ಸಿಬ್ಬಂದಿಗೆ ಹಲ್ಲೆ ಮಾಡಿ ನಗದು ಹಣವನ್ನು ದರೋಡೆ ಮಾಡಿದ್ದ ಆರೋಪಿಗಳ ಬಂಧನ ಮತ್ತು ಆರೋಪಿಗಳಿಂದ 15,25,800 ರೂ ನಗದು ಹಣ ವಶ


ದಿ:30-10-2017 ರಂದು ರಾತ್ರಿ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಮೊ.ಸಂ.146/2017 ಕಲಂ 454, 380 ಐಪಿಸಿ ಕೇಸಿನಲ್ಲಿ ಆರೋಪಿ ಮತ್ತು ಮಾಲು ಪತ್ತೆಯ ಬಗ್ಗೆ ಪೊಲೀಸ್ ಇನ್ಸ್‍ಪೆಕ್ಟರ್ ಎಸ್ ಗಂಗಾಧರ್ ಹಾಗೂ ಕ್ರೈಂ ಸಿಬ್ಬಂದಿಗಳಾದ ಠಾಣೆಯ ಹೆಚ್.ಸಿ.115 ಸಿದ್ದರಾಜು, ಹೆಚ್.ಸಿ.60 ಅಂಜನಮೂರ್ತಿ, ಹೆಚ್.ಸಿ.181 ಎಂ.ಡಿ.ಸತೀಶ್, ಪಿ.ಸಿ. 142 ಹರ್ಷವರ್ಧನ, ಪಿಸಿ 492 ಪ್ರಶಾಂತ್‍ಕುಮಾರ್, ಪಿಸಿ 306 ಭಾನುಪ್ರಕಾಶ್ ರವರೊಂದಿಗೆ ರಾತ್ರಿ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ 31-10-2017 ರಂದು ಬೆಳಗಿನ ಜಾವ 2-00 ಗಂಟೆಯ ಸಮಯದಲ್ಲಿ ಕೋಟೆ ಕಾಳಮ್ಮನ ಗುಡಿ ಬೀದಿಯಲ್ಲಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರವಿರುವ ಅಪೋಲೋ ಬಟ್ಟೆ ಅಂಗಡಿಯ ಸಂದಿಯ ಗೋಡೆಯ ಮರೆಯಲ್ಲಿ ಒಬ್ಬ ಆಸಾಮಿ ತನ್ನ ಮುಖವನ್ನು ಮಾರೆ ಮಾಚಿಕೊಂಡು ನಿಂತಿದ್ದವನೇ ಪೊಲೀಸ್ ಜೀಪನ್ನು ಕಂಡು ತನ್ನ ಹೆಗಲಿಗೆ ನೇತು ಹಾಕಿಕೊಂಡಿದ್ದ ಬ್ಯಾಗಿನ ಸಮೇತ ಓಡಿ ಹೋಗುತ್ತಿದ್ದವನ ಮೇಲೆ ಅನುಮಾನ ಬಂದು ಕೂಡಲೇ ಜೀಪನ್ನು ನಿಲ್ಲಿಸಿ ಆತನನ್ನು ಹಿಂಬಾಲಿಸಿ ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ವಿಚಾರ ಮಾಡಲಾಗಿ ಆತನು ತನ್ನ ಹೆಸರು ನೀತೀಶ್ ತಂದೆ ವೆಂಕಟೇಶ ವಯಸ್ಸು 21 ವರ್ಷ ವಕ್ಕಲಿಗರು ಕೇಬಲ್ ಕೆಲಸ ವಾಸ ನಂದಿನಿ ಲೇ ಔಟ್ ಡಾ: ರಾಜಕುಮಾರ್  ಸಮಾಧಿ ಹತ್ತಿರ, ಬೆಂಗಳೂರು ಸ್ವಂತ ಸ್ಥಳ  ಬಾಣಗÀಹಳ್ಳಿ ಗ್ರಾಮ ಮಳವಳ್ಳಿ ತಾಲ್ಲೋಕು ಎಂತಲು ತಿಳಿಸಿದ್ದು ಆತನ ಬಳಿ ಇದ್ದ ಬ್ಯಾಗ್ ಅನ್ನು ಪರಿಶೀಲಿಸಿ ನೋಡಲಾಗಿ ನಗದು ಹಣವಿದ್ದು ಸದರಿ ಹಣದ ಬಗ್ಗೆ ವಿಚಾರ ಮಾಡಲಾಗಿ 10 ಲಕ್ಷ ಇದೆ ಎಂತಲೂ, ಮತ್ತೊಮ್ಮೆ 12 ಲಕ್ಷ ಇದೆ ಎಂತಲೂ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಪೊಲೀಸ್ ಇನ್ಸ್‍ಪೆಕ್ಟರ್‍ರವರಿಗೆ ಅನುಮಾನ ಬಂದು ಪಂಚರ ಸಮಕ್ಷಮ ಬ್ಯಾಗಿನಲ್ಲಿದ್ದ ನಗದು ಹಣ ಎಣಿಕೆ ಮಾಡಿ ನೋಡಲಾಗಿ 15,25,800 ರೂಗಳು ಇದ್ದು, ಜೊತೆಯಲ್ಲಿ ಒಂದು ಬಟನ್ ಚಾಕು ಸಹ ಇದ್ದು ಸದರಿ ಆಸಾಮಿಯನ್ನು ನಗದು ಹಣವಿದ್ದ ಬ್ಯಾಗ್‍ನ ಸಮೇತ ಮುಂದಿನ ಕಾನೂನು ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಆತನು ನೀಡಿದ ಮಾಹಿತಿಯ ಮೇರೆಗೆ ಬೆಂಗಳೂರು ನಗರದ ಭಾಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ದಿನಾಂಕ 30-10-2017 ರಂದು ನಡೆದಿದ್ದ ಎ.ಟಿ.ಎಂ. ಯಂತ್ರಕ್ಕೆ ಹಣ ತುಂಬುವ ಸಿಬ್ಬಂದಿಗೆ ಹಲ್ಲೆ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಸದರಿ ಆರೋಪಿಯ ಕೃತ್ಯಕ್ಕೆ ಬಳಸಿದ ಬೈಕ್ ನೀಡಿ ಸಹಕರಿಸಿದ ಮತ್ತೊಬ್ಬ ಆರೋಪಿ ರಾಕೇಶ ಎಂಬಾತನನ್ನು ಸಹ ಪತ್ತೆ ಮಾಡಿ ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಅನ್ನು ಸಹ ವಶಕ್ಕೆ ಪಡೆದುಕೊಂಡಿರುತ್ತದೆ. ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಮೇಲ್ಕಂಡ ಕೃತ್ಯದ ಆರೋಪಿಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗು ಸಿಬ್ಬಂಧಿರವರ ಬಗ್ಗೆ  ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರು ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ. 
ದಿನಾಂಕ: 01-11-2017 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ “ಜನಸ್ನೇಹಿ ಪೊಲೀಸ್”  ಸ್ತಬ್ಧ ಚಿತ್ರವನ್ನು ಆಯೋಜಿಸಲಾಯಿತು.





Mandya District Daily Crime Report Date: 31-10-2017