Moving text

Mandya District Police
Mandya District Daily Crime Report Date: 31-03-2017
Mandya District Daily Crime Report Date: 30-03-2017
Mandya District Daily Crime Report Date: 29-03-2017
Mandya District Daily Crime Report Date: 28-03-2017
Mandya District Daily Crime Report Date: 27-03-2017

Press Note Dated: 27-03-2017

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 27-03-2017

ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ವೃತ್ತದ ವ್ಯಾಪ್ತಿಯ ಕೆಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ದಿನಾಂಕ 05.02.2017 ರಂದು ಕೆಎಂ ದೊಡ್ಡಿ ಟೌನಿನಲ್ಲಿರುವ ಆಲಭುಜನಹಳ್ಳಿ ರಸ್ತೆಯಲ್ಲಿರುವ  ವಿಶ್ವಕರ್ಮ ಜೂಯಿಲರಿ ಶಾಪನ್ನು ಯಾರೋ ಕಳ್ಳರು ಅಂಗಡಿ ಗ್ರಿಲ್ಗೇಟನ್ನು ಗ್ರಿಲ್ ಕಟರ್ನಿಂದ ಕಟ್ ಮಾಡಿ ಅಂಗಡಿಯ ಒಳಗಡೆ ಇದ್ದ 15 ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ 30 ಗ್ರಾಮ್ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಅಂಗಡಿ ಮಾಲಿಕ ರವಿರವರು ನೀಡಿದ ದೂರಿನ ಹಿನ್ನಲೆಯಲ್ಲಿ  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದರು.
       ಸದರಿ ಪ್ರಕರಣದ  ಆರೋಪಿ ಮತ್ತು ಮಾಲುಗಳ ಪತ್ತೆ ಸಂಬಂಧ ಮಳವಳ್ಳಿ ಉಪ ವಿಭಾಗದ ಡಿವೈಎಸ್.ಪಿ ಶ್ರೀ.ಕೆ.ಟಿ ಮ್ಯಾಥ್ಯೂಸ್ ಥಾಮಸ್ ರವರ ಮಾರ್ಗದರ್ಶನದಲ್ಲಿ  ಶ್ರೀ ಶಿವಮಲವಯ್ಯ ಸಿಪಿಐ ಕೆಎಂ ದೊಡ್ಡಿ ರವರ  ನೇತೃತವದಲ್ಲಿ ಹಲಗೂರು ಪೊಲೀಸ್ ಠಾಣಾ ಪಿ.ಎಸ್., ಶ್ರೀ.ಬಿ.ಎಸ್. ಶ್ರೀಧರ್. ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ಗಳಾದ ಮಹದೇವ, ಕೃಷ್ಣಶೆಟ್ಟಿ,  ಪೊಲೀಸ್ ಕಾನ್ಸ್ಟೇಬಲ್ಗಳಾದ ಜಯಕುಮಾರ, ಪ್ರೇಮ್ಕುಮರ್, ರಿಯಾಜ್ಪಾಷ, ಪ್ರಭು, ಮೋಹನ, ಬೆರಳಚ್ಚು ವಿಭಾಗದ ಸಿಬ್ಬಂದಿಗಳಾದ ಶ್ರೀರಾಜೇಂದ್ರ ಮತ್ತು ಮಂಜು ಹಾಗೂ ಚಾಲಕರಾದ ಹೆಡ್ಕಾನ್ಸ್ಟೇಬಲ್ ಮಂಜುನಾಥ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.

ಆರೋಪಿ-01 ಗಂಗಾ @ ರಮೇಶ ಬಿನ್ ವೆಂಕಟಯ್ಯ, ಕೊಪ್ಪ ಟೌನ್ ರವರನ್ನು  ವಶಕ್ಕೆ ಪಡೆಕೊಂಡು ವಿಚಾರಣೆಗೆ ಒಳಪಡಿಸಿದಾಗ ತನ್ನ  ಸಹಚರರಾದ
ಆರೋಪಿ-02  ಗುರುರಾಜ್ @ ಗುರು, ಕೊಡಿಯಾಲ ಗ್ರಾಮ, ಶ್ರೀರಂಗಪಟ್ಟಣ ತಾಃ
ಆರೋಪಿ-03  ಕುಮಾರ ಬಿನ್ ಲಕ್ಷ್ಮಣ ಕನಕಪುರ ಸರ್ಕಲ್ ರಾಮನಗರ ಟೌನ್,
ಆರೋಪಿ-04  ಮುನಿಯಪ್ಪ @ ಮುನಿಯ,   ಐಜೂರುಗುಡ್ಡೆ, ರಾಮನಗರ ಟೌನ್ರವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಕೆಳಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.
1]   2016 ನೇ ಸಾಲಿನ ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ರಾಮನಗರದ ತಿಮ್ಮಸಚಿದ್ರ ಗ್ರಾಮದಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸುಮಾರು 15 ಸಾವಿರ ಹಣವನ್ನು ಕಳ್ಳತನ ಮಾಡಿರುತ್ತಾರೆ.
2]   2016 ನೇ ಸಾಲಿನ ಡಿಸಂಬರ್ ತಿಂಗಳಲ್ಲಿ  ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಗಾರನಹಳ್ಳಿ ಗ್ರಾಮದ ಜೂಯಿಲರಿ ಶಾಪನ್ನು ಕನ್ನ ಕಳವು ಮಾಡಿ ಒಟ್ಟು 30 ಗ್ರಾಮ್ ಬಂಗಾರ ಮತ್ತು  5.7 ಕೆಜಿ ಬೆಳ್ಳಿ ಒಟ್ಟು 2,50,000 ರೂಪಾಯಿ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
3] 2017 ನೇ ಜನವರಿ ಕೊನೆಯ ವಾರದಲ್ಲಿ ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಬೀಗವನ್ನು ಹೊಡೆದು ಸುಮಾರು 5.5 ಕೆ.ಜಿ ಬೆಳ್ಳಿ ಪದಾರ್ಥಗಳು, 45 ಗ್ರಾಮ್  ಚಿನ್ನದ ವಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
4] 2017 ನೇ ಸಾಲಿನ ಜನವರಿಯ ಕೊನೆಯ ವಾರದಲ್ಲಿ ರಾಮನಗರ ತಾಲ್ಲೋಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದಲ್ಲಿ   ದೇವರ ವಿಗ್ರಹದ ಮೇಲಿದ್ದ ಒಂದು ಚಿನ್ನದ ತಾಳಿ ಹಾಗೂ ಒಂದು ಬೆಳ್ಳಿ ಕಿರೀಟವನ್ನು ಹಾಗೂ ಹುಂಡಿಯಲ್ಲಿದ್ದ 1,100 ರೂ ಚಿಲ್ಲರೆ ಹಣವನ್ನು ಕಳ್ಳತನ ಮಾಡಿರುತ್ತಾರೆ
5] 2017 ನೇ ಫೆಬ್ರವರಿ ಮೊದಲನೆ ವಾರದಲ್ಲಿ ಕೆಎಂ ದೊಡ್ಡಿ  ಆಲಭುಜನಹಳ್ಳೀ ರಸ್ತೆಯಲ್ಲಿರುವ ವಿಶ್ವಕರ್ಮ ಜೂಯಿಲರಿ ಶಾಪನ್ನು ಹೊಡೆದು ಸುಮಾರು 7 ಕೆಜಿ ಬೆಳ್ಳಿ ಪಧಾರ್ಥ, ಹಾಗೂ ಸಣ್ಣಪುಟ್ಟ ಚಿನ್ನದ ವಡವೆಗಳು ಒಟ್ಟು 30 ಗ್ರಾಂ ನಷ್ಟು ಚಿನ್ನದ ಪದಾರ್ಥ, ಹಾಗೂ 20 ಸಾವಿರ ನಗದು ಸೇರಿ ಒಟ್ಟು 6.50,000 ರೂ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
6] 2017 ನೇ ಫೆಬ್ರವರಿ ಎರಡನೆ ವಾರದಲ್ಲಿ ಚನ್ನಪಟ್ಟಣದ ಕಣ್ವ ಬಡಾವಣೆಯ ಮನೆಯಲ್ಲಿ  ಹೆಂಗಸು ಕಿಟಿಕಿಯ ಪಕ್ಕದಲ್ಲಿ ಮಲಗಿದ್ದಾಗ ಸುಮಾರು 20 ಗ್ರಾಮ್ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ.
7] 2017 ನೇ ಫೆಬ್ರವರಿ ಎರಡನೆ ವಾರದಲ್ಲಿ ಕೊಡಿಯಾಲದಲ್ಲಿ ಮುಖಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಿಕೊಂಡು ಒಂದು ಜ್ಯೂಯಲರಿ ಶಾಪನ್ನು ಮತ್ತು ದೇವಸ್ಥಾನವನ್ನು ಹೊಡೆಯಲು ಪ್ರಯತ್ನಪಟ್ಟಿದ್ದು ನಂತರ ದೇವಸ್ಥಾನದ ಪಕ್ಕದ ಮನೆಯ ಅಜ್ಜಿ ಮತ್ತು ಹೆಂಗಸಿನ ಕತ್ತಿನಲ್ಲಿದ್ದ 1.75,000 ಮೌಲ್ಯದ ಚಿನ್ನದ ಸರಗಳನ್ನು ಕಿತ್ತು ಕೊಂಡಿರುತ್ತಾರೆ.
8] 2017 ಪೆಬ್ರವರಿ ತಿಂಗಳ ಮೂರನೆ ವಾರದಲ್ಲಿ ಕಿರುಗಾವಲಿನಲ್ಲಿ ಉಂತೂರಮ್ಮನ ದೇವಸ್ಥಾನವನ್ನು ಕಳ್ಳತನ ಮಾಡಿ ಟ್ರಂಕ್ನಲ್ಲಿ ಇದ್ದ ಸುಮಾರು 45-50 ತಾಳಿಗಳು ಹಾಗೂ ಹುಂಡಿಯಲ್ಲಿದ್ದ 10, ಸಾವಿರ ನಗದು ಸೇರಿ 1.15,000 ರೂ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
9]  ಫೆಬ್ರವರಿ 2017 ಕೊನೆಯ ವಾರದಲ್ಲಿ ಚನ್ನಪಟ್ಟಣದ ಕೊಟಮಾರನಹಳ್ಳಿ ಗ್ರಾಮದಲ್ಲಿ ಬಾಳಾರದೇವಮ್ಮ ದೇವಸ್ಥಾನದಲ್ಲಿ ತಾಳಿ ಮತ್ತು ಕಾಸು, ಬೆಳ್ಳಿ ಪಧಾರ್ಥ ಹುಂಡಿಯ ಹಣ ಸೇರಿ  ಸುಮಾರು 80,000 ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
10] 2017 ನೇ ಜನವರಿ  ತಿಂಗಳ ಎರಡನೆ ವಾರದಲ್ಲಿ ರಾಮನಗರ ತಾಃ ಕೈಲಾಂಚ ಹೋಬಳಿ, ಜಕ್ಕನಹಳ್ಳಿ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಹುಂಡಿಯಲ್ಲಿದ್ದ 20000 ನಗದು ಹಣವನ್ನು ಕಳ್ಳತನ ಮಾಡಿರುತ್ತಾರೆ.
ಮೇಲ್ಕಂಡ 10 ಪ್ರಕರಣಗಳಲ್ಲಿ ಆರೋಪಿಗಳ ಸ್ವಇಚ್ಚಾ ಹೇಳಿಕೆ ಆಧಾರದ ಮೇಲೆ ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ಮಾಗಡಿ, ಮದ್ದೂರು ತಾಃ ಕೊಪ್ಪ ಹಾಗೂ ಚೈನ್ನೈ ಮತ್ತು ಕೊಯಮತ್ತೂರುಗಳಲ್ಲಿ 19 ಕೆಜಿ ಬೆಳ್ಳಿ ಒಟ್ಟು ಮೌಲ್ಯ 8,55,000 ಹಾಗೂ 200 ಗ್ರಾಮ್ ಚಿನ್ನ ಒಟ್ಟು ಮೌಲ್ಯ 5,00,000 ಒಟ್ಟು 13,55,000 ರೂಗಳ ಬೆಳ್ಳಿ ಮತ್ತು ಚಿನ್ನದ ಒಡವೆಗಳನ್ನು ಅಮಾನತ್ತಿ ಪಡಿಸಿರುತ್ತಾರೆ.
                 ಮೇಲ್ಕಂಡ  ಆರೋಪಿಗಳ ಪತ್ತೆಗೆ ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.
Mandya District Daily Crime Report Date: 26-03-2017
Mandya District Daily Crime Report Date: 25-03-2017
Mandya District Daily Crime Report Date: 24-03-2017
Mandya District Daily Crime Report Date: 23-03-2017
Mandya District Daily Crime Report Date: 22-03-2017
Mandya District Daily Crime Report Date: 21-03-2017
Mandya District Daily Crime Report Date: 20-03-2017
Mandya District Daily Crime Report Date: 19-03-2017
Mandya District Daily Crime Report Date: 17-03-2017
Mandya District Daily Crime Report Date: 16-03-2017
Mandya District Daily Crime Report Date: 15-03-2017
Mandya District Daily Crime Report Date: 14-03-2017
Mandya District Daily Crime Report Date: 13-03-2017
Mandya District Daily Crime Report Date: 12-03-2017
Mandya District Daily Crime Report Date: 11-03-2017
Mandya District Daily Crime Report Date: 10-03-2017
Mandya District Daily Crime Report Date: 09-03-2017
Mandya District Daily Crime Report Date: 08-03-2017
Mandya District Daily Crime Report Date: 07-03-2017
Mandya District Daily Crime Report Date: 06-03-2017
Mandya District Daily Crime Report Date: 05-03-2017
Mandya District Daily Crime Report Date: 04-03-2017
Mandya District Daily Crime Report Date: 03-03-2017
Mandya District Daily Crime Report Date: 02-03-2017
Mandya District Daily Crime Report Date: 01-03-2017
Mandya District Daily Crime Report Date: 28-02-2017
Mandya District Daily Crime Report Date: 27-02-2017
Mandya District Daily Crime Report Date: 26-02-2017
Mandya District Daily Crime Report Date: 25-02-2017