Moving text

Mandya District Police
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 03-02-2017

ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ಹಾಗೂ ಸುತ್ತಮುತ್ತಲ ಕೆಲವು ಗ್ರಾಮಗಳ ಮನೆಗಳ ಬೀಗಗಳನ್ನು ಹೊಡೆದು ಕಳ್ಳತನ ಮಾಡುತ್ತಿದ್ದ ಜಗ್ಗಣ್ಣ @ ಜಗದೀಶ್ ಬಿನ್ ಬಸವರಾಜು, ಚಿಕ್ಕಬಿಳತಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ಎಂಬುವವನನ್ನು ದಸ್ತಗಿರಿ ಮಾಡಿ ಆತನಿಂದ 4,40,000 ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿರುವ ಬಗ್ಗೆ.


                ದಿನಾಂಕಃ 30-01-2017 ರಂದು ಶ್ರೀ ವೆಂಕಟೇಶಯ್ಯ.ಹೆಚ್.ಬಿ, ಸಿಪಿಐ, ಕೆ.ಆರ್.ಪೇಟೆ ವೃತ್ತ, ಸಿದ್ದರಾಜು.ಆರ್, ಪಿಎಸ್, ಕಿಕ್ಕೇರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್ಸಿ.245 ಪ್ರಕಾಶ್, ಪಿಸಿ.52 ಆನಂದಕುಮಾರ್, ಪಿಸಿ.445 ಅಶೋಕ್ಕುಮಾರ್, ಜೀಪ್ ಚಾಲಕ ಎಹೆಚ್ಸಿ.117 ರಜಿತ್ ರವರುಗಳು ಕಿಕ್ಕೇರಿಯಿಂದ ಹೇಮಗಿರಿ ಜಾತ್ರಾ ಬಂದೋಬಸ್ತ್ಗೆ ಮಂದಗೆರೆ ಗ್ರಾಮದ ರೈಲ್ವೆ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಅನುಮಾನದಿಂದ ತಿರುಗಾಡುತ್ತಿದ್ದ ಜಗ್ಗಣ್ಣ @ ಜಗದೀಶ್ ಎಂಬುವವನನ್ನು ವಿಚಾರಣೆ ಮಾಡಿ ಕೂಲಂಕುಷವಾಗಿ ಮಾಹಿತಿ ಪಡೆಯಲಾಗಿ ತನ್ನ ಪೂರ್ಣ ಹೆಸರು ವಿಳಾಸ ಜಗದೀಶ @ ಜಗ್ಗ ಬಿನ್ ಬಸವರಾಜು, 20 ವರ್ಷ, ಚಿಕ್ಕಬಿಳತಿ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೊಕು, ಹಾಸನ ಜಿಲ್ಲೆ ಎಂದು ತಿಳಿಸಿರುತ್ತಾನೆ. ಆತನನ್ನು ಠಾಣೆಗೆ ಕರೆತಂದು ಪೂರ್ಣ ವಿಚಾರಣೆಗೆ ಒಳಪಡಿಸಲಾಗಿ ತಾನು ಒಂದು ತಿಂಗಳ ಹಿಂದೆ ಕಿಕ್ಕೇರಿಯ ಲಕ್ಷ್ಮಿಪುರದಲ್ಲಿ ಅಕ್ಕಪಕ್ಕದ ಎರಡು ಮನೆಗಳು ಬೀಗ ಹಾಕಿದ್ದನ್ನು ನೋಡಿಕೊಂಡು ಅದೇ ದಿನ ರಾತ್ರಿ ನಾನು ಮನೆಗಳ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಹೋಗಿ ಬೀರುವನ್ನು ಜಖಂ ಮಾಡಿ ಅದರಲ್ಲಿದ್ದ ಚಿನ್ನದ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿ ವಡವೆಗಳನ್ನು ದಿವಸ ಸದರಿ ವಡವೆಗಳನ್ನು ಮಾರಾಟ ಮಾಡಲು ಹೊಳೆನರಸಿಪುರಕ್ಕೆ ಹೋಗಲು ಬಂದಿದ್ದಾಗಿ ತಿಳಿಸಿದ್ದು, ಆತನ ಬ್ಯಾಗಿನಲ್ಲಿ ವಡವೆಗಳು ಹಾಗೂ 2000-00 ರೂ ನಗದು ಹಣ ದೊರೆತಿದ್ದು, ನಂತರ ಈತನ್ನು ಪೂರ್ಣ ಪ್ರಮಾಣದಲ್ಲಿ ವಿಚಾರ ಮಾಡಲಾಗಿ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ಕೆಳಕಂಡ ಒಂಟಿ ಮನೆಗಳ ಹೆಂಚುಗಳನ್ನು ತೆಗೆದು ರಾತ್ರಿ ಕಳ್ಳತನ ಹಾಗೂ ಅಂಗಡಿ ಕಳ್ಳತನ ಮಾಡಿದ್ದ ಬಗ್ಗೆ ಹೇಳಿಕೆ ನೀಡಿದ್ದು ಆತನ ಹೇಳಿಕೆಯಂತೆ ಕೆ.ಆರ್.ಪೇಟೆ ವೃತ್ತ ವ್ಯಾಪ್ತಿಯಲ್ಲಿನ ಕಿಕ್ಕೇರಿ ಪೊಲೀಸ್ ಠಾಣಾ ಮೊ.ಸಂ.287/16, 284/16, 178/16, 187/16, 199/16, 223/16, 231/16, 245/16, 269/16, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 250/16, 346/16, 345/2016, 357/16, 358/16, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ಮೊ.ನಂ. 353/16, ಒಟ್ಟು 15 ಕಳವು ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಯಿಂದ 3,90,000-00 ರೂ ಮೌಲ್ಯದ 130 ಗ್ರಾಂ ಚಿನ್ನದ ಆಭರಣಗಳು ಹಾಗೂ 50,000-00 ರು ಮೌಲ್ಯದ 1 ¼ ಬೆಳ್ಳಿ ವಡವೆಗಳು, ಒಟ್ಟು 4,40,000-00 ರೂ ಮೌಲ್ಯದ ಚಿನ್ನದ ಆಭರಣಗಳು ಹಾಗೂ ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತಾರೆ.

     ಮೇಲ್ಕಂಡ ಆರೋಪಿ ಪತ್ತೆಗೆ ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.

No comments:

Post a Comment