Moving text

Mandya District Police

Press Note on J.K. Tyre Theft Case Detected

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 09-04-2016
ಪತ್ರಿಕಾ ಪ್ರಕಟಣೆ

ದಿ-17-02-16 ರಂದು  ಮೈಸೂರು ನಗರದ ಜೆ.ಕೆ. ಟೈರ್ ಫ್ಯಾಕ್ಟರಿಯಿಂದ AP-29-V-5848 ಕಂಟೈನರ್ ಲಾರಿಯಲ್ಲಿ  ತುಂಬಿಕೊಂಡು ಹೋಗುತ್ತಿದ್ದ 150 ಜೆ.ಕೆ ಕಂಪನಿಯ ಟೈರ್ಗಳನ್ನು ಕಳುವು ಮಾಡಿಕೊಂಡು ಹೋಗಿದ್ದ ಆರೋಪಿ ಮತ್ತು ಮಾಲುಗಳನ್ನು ಶ್ರೀರಂಗಪಟ್ಟಣ ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ.

                ದಿ: 17-02-16 ರಂದು ಬೆಳಗ್ಗಿನ ಜಾವ 04-00 ಗಂಟೆಯ ಸಮಯದಲ್ಲಿ ಮೈಸೂರು ನಗರದ ಜೆ.ಕೆ. ಟೈರ್ ಫ್ಯಾಕ್ಟರಿಯಿಂದ AP-29-V-5848 ಕಂಟೈನರ್ ಲಾರಿಯಲ್ಲಿ 33,00,000/- ರೂ ಬೆಲೆ ಬಾಳುವ 150 ಜೆ.ಕೆ ಕಂಪನಿಯ ರೇಡಿಯಲ್ ಟೈರ್ಗಳನ್ನು ತುಂಬಿಕೊಂಡು ಹೈದರಬಾದ್ಗೆ ಹೋಗುತ್ತಿದ್ದ ಸಮಯದಲ್ಲಿ ಬೆಳಗ್ಗಿನ ಜಾವ 04-00 ಗಂಟೆಯಲ್ಲಿ ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್ ಬಳಿ ಮಾಲು ತುಂಬಿದ್ದ AP-29-V-5848 ಕಂಟೈನರ್ ಲಾರಿಯನ್ನು ಮತ್ತೊಂದು ಲಾರಿ ಮತ್ತು ಒಂದು ಕಾರಿನಲ್ಲಿ ಬಂದ 5-6 ಜನ ವ್ಯೆಕ್ತಿಗಳು ಲಾರಿಯನ್ನು ಅಡ್ಡಹಾಕಿ ಲಾರಿಯಲ್ಲಿದ್ದ  ಹರಿಯಾಣ ರಾಜ್ಯದ ಡ್ರೈವರ್ ರಾಜ್ ಬೀರ್ ಎಂಬುವವರಿಗೆ ಹಲ್ಲೆ ಮಾಡಿ ಡ್ರೈವರ್ ಗೆ ಬಟ್ಟೆ ಕಟ್ಟಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಲಾರಿಯನ್ನು ಮಾಲಿನ ಸಮೇತ ತೆಗೆದುಕೊಂಡು ಹೋಗಿ ಟೈರ್ ಗಳನ್ನು ಅನ್ ಲೋಡ್ ಮಾಡಿ ಲಾರಿಯನ್ನು ಬೆಂಗಳೂರು ನಗರದ ನೆಲಮಂಗಲದ ಬಳಿ ನಿಲ್ಲಿಸಿ, ಡ್ರೈವರ್ನ್ನು ನೆಲೆಮಂಗಲದ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಬಗ್ಗೆ ಶ್ಯಾಂ ಸುಂದರ್ ಬಿನ್ ಲೇಟ್ ಎಸ್. ಬಸವರಾಜು, 42 ವರ್ಷ, ದೇವಾಂಗ ಜನಾಂಗ, ಮೈಸೂರು ಸಿಟಿಯ ಕಾಸ್ಮೋ ಕ್ಯಾರಿಂಗ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮ್ಯಾನೇಜರ್ ಕೆಲಸ, ವಾಸ- # 1373, 17ನೇ ಕ್ರಾಸ್, ರೂಪ ನಗರ, ಬೋಗಾದಿ, ಮೈಸೂರು ಸಿಟಿ ರವರು ದಿ-21-03-16 ರಂದು ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದರು.

                ಸದರಿ ಪ್ರಕರಣದ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ, ಟಿ.ಜೆ.ಉದೇಶ್ರವರ ಮಾರ್ಗದರ್ಶನದಲ್ಲಿ  ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ಹಾಗೂ ಮಂಡ್ಯ ಡಿ.ಸಿ..ಬಿ ಇನ್ಸ್ಪೆಕ್ಟರ್ ಕೆ.ರಾಜೇಂದ್ರರವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ಗಳಾದ ಎಸ್.ಪಿ. ಸುನೀಲ್, ಪಿ.ಎಸ್. ಅಜರುದ್ದೀನ್ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ-55 ಕೆ.ಟಿ.ನಾಗರಾಜು, ಸಿ.ಹೆಚ್.ಸಿ-342 ದೇವರಾಜು, ಸಿ.ಪಿ.ಸಿ-471-ಕೆ.ಶ್ರೀನಿವಾಸಮೂರ್ತಿ, ಸಿ.ಪಿ.ಸಿ-47 ಅರುಣ್ ಕುಮಾರ, ಸಿ.ಪಿ.ಸಿ-153 ಹರೀಶ, ಸಿ.ಪಿ.ಸಿ-144 ಕೆ.ಟಿ. ಅನಿಲ್ ಕುಮಾರ್, ಸಿ.ಪಿ.ಸಿ-746- ಮುತ್ತುರಾಜ, ಸಿ.ಪಿ.ಸಿ-59- ಪ್ರಶಾಂತ, ಸಿ.ಪಿ.ಸಿ-29 ಪ್ರಸನ್ನ, ವಿಜಯ್ ಕುಮಾರ್, ಶ್ರೀಧರ ಜಿಲ್ಲಾ ಪೊಲೀಸ್ ಕಚೇರಿಯ ರವಿಕಿರಣ, ಬಾಬು ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಅದರಂತೆ ದಿ-28-03-16 ರಂದು ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು, ಆರೋಪಿಗಳ ಬಗ್ಗೆ ಭಾತ್ಮೀಧಾರರಿಂದ ಮಾಹಿತಿ ಪಡೆದು ಬೆಂಗಳೂರಿನ ಚಿಕ್ಕಜಾಲದ ಬಳಿಯಿರುವ ತರಬನಹಳ್ಳಿ ಗ್ರಾಮದಲ್ಲಿ ಕೇಸಿನಲ್ಲಿ ಭಾಗಿಯಾಗಿದ್ದ ಕೆಳಕಂಡ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.
 1] ಪರ್ವೇಜ್ @ ಪರ್ವೇಶ್ @ ಪರ್ವೀಶ್ ಬಿನ್ ಸಜ್ಜನ್ ಸಿಂಗ್, 22 ವರ್ಷ, ಜಾಟ್ ಜನಾಂಗ, ಕ್ಲೀನರ್ ಕೆಲಸ, ವಾಸ- ಕಿಸರಂತಿ ಗ್ರಾಮ, ಶಹಪ್ಲಾ ತಾಲ್ಲೋಕು, ರೋತಕ್ ಜಿಲ್ಲೆ, ಹರಿಯಾಣ ರಾಜ್ಯ
2] ಸದ್ದಾಂ ಹುಸೇನ್ @ ಸದ್ದಾಂ ಬಿನ್ ಶಹಾಬುದ್ದೀನ್, 24 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ವಾಸ- ಚಹಲಕಾಗ್ರಾಮ, ತಾವೂರು ತಾಲ್ಲೋಕು, ಮೇವಾತ್ ಜಿಲ್ಲೆ, ಹರಿಯಾಣ ರಾಜ್ಯ.

            ಸದರಿ ಮೇಲ್ಕಂಡ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರುಗಳಿಂದ ಒಟ್ಟು 33,00,000/- ರೂ ಬೆಲೆ ಬಾಳುವ 150 ಜೆ.ಕೆ. ಕಂಪನಿಯ ರೇಡಿಯಲ್ ಟೈರ್ಗಳು, AP-29-V-5848 ಕಂಟೈನರ್ ಲಾರಿ, ಹತ್ತು ಚಕ್ರದ ಟಾರ್ಪಲ್ ಲಾರಿ ನಂ RJ-05-GA-4867 ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ ಹಾಗೂ ಮೇಲ್ಕಂಡ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಇನ್ನುಳಿಕೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ.


              ಆರೋಪಿಗಳ ಪತ್ತೆಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.

No comments:

Post a Comment