Moving text

Mandya District Police

Press Note - Mandya Rural PS Murder Case

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 08-02-2016

ಪತ್ರಿಕಾ ಪ್ರಕಟಣೆ

ಕೊಲೆಯಾಗಿರುವ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕೋರಿ.

       ಪಿರ್ಯಾದುದಾರರಾದ ಚಿಕ್ಕಣ್ಣ ಬಿನ್ ಕಾಳೇಗೌಡರವರು ದಿವಸ ದಿನಾಂಕ: 08-02-2016 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಕೋಣನಹಳ್ಳಿ ಕೆರೆ ಕಡೆಗೆ ಹೋಗುವ ಗಾಡಿ ಜಾಡಿನಲ್ಲಿ ಊರಿನ ಜನರು ಗುಂಪು ಕಟ್ಟಿಕೊಂಡು ನಿಂತಿದ್ದು, ಸದರಿ ಸ್ಥಳಕ್ಕೆ ಹೋಗಿ ಪಿರ್ಯಾದಿಯವರು ಹೋಗಿ ನೋಡಲಾಗಿ ಒಬ್ಬ ಅಪರಿಚಿತ ಗಂಡಸಿನ ಶವ ಬಿದ್ದಿದ್ದು, ಮೃತ ಅಪರಿಚಿತನಾಗಿರುತ್ತಾನೆ. ಮೃತನ ಬಲ ಭಾಗದ ಮುಖದ ಮೇಲೆ ಕಲ್ಲು ದಿಂಡು ಎತ್ತಾಕಿ ಕೊಲೆ ಮಾಡಿರುವುದು ಕಂಡುಬಂದಿರುತ್ತೆದಿನಾಂಕ: 07-02-2016 ರಂದು ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು, ಯಾವುದೋ ದ್ವೇಷದಿಂದಲೋ ಅಥವಾ ಯಾವುದೋ ಕಾರಣದಿಂದಲೋ ಕೊಲೆ ಮಾಡುವ ಉದ್ದೇಶದಿಂದ ಮೃತನ ಮುಖ ಮತ್ತು ತಲೆಯ ಭಾಗಕ್ಕೆ ಕಲ್ಲು ದಿಂಡು ಎತ್ತಾಕಿ ಕೊಲೆ ಮಾಡಿ ಶವವನ್ನು ಬಿಟ್ಟು ಹೋಗಿರುತ್ತಾರೆ. ಮೃತನು ಅಪರಿಚಿತನಾಗಿದ್ದು ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಮೃತ ಅಪರಿಚಿತ ಗಂಡಸಿನ ಹೆಸರು ವಿಳಾಸ ಮತ್ತು ಈತನನ್ನು ಕೊಲೆ ಮಾಡಿರುವ ದುರಾತ್ಮರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಡೆದುಕೊಂಡು ಠಾಣಾ ಮೊ.ಸಂ: 100/2016, ಕಲಂ: 302, 201 .ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಗೊಂಡಿರುತ್ತದೆ.
-:  ಕೊಲೆಗೀಡಾಗಿರುವ ಗಂಡಸಿನ  ಚಹರೆ :-

ಮೃತನ ಹೆಸರು & ವಿಳಾಸ ಗೊತ್ತಿಲ್ಲ, 5.5  ಅಡಿ ಎತ್ತರ, ಸುಮಾರು 30-35 ವರ್ಷ ವಯಸ್ಸಿನವನಾಗಿರುತ್ತಾನೆ. ಮೃತನ ಬಲ ಕೈಯಲ್ಲಿ ಪವಿತ್ರ ಎಂದು ಹಸಿರು ಹಚ್ಚೆ ಗುರುತು ಇರುತ್ತೆ. ಸಿಮೆಂಟ್  ಬಣ್ಣದ ತುಂಬುತೋಳಿನ ಷರಟು, ಬಿಳಿ ಬಣ್ಣದ ಬನಿಯನ್, ಕೆಂಪು ಬಣ್ಣದ ಅಂಡರ್ವೇರ್ ಧರಿಸಿರುತ್ತಾನೆ. ಕೆಂಪು ಬಣ್ಣದ ಅಂಡರ್ ವೇರ್ ಮಂಡಿಯ ಕೆಳಗಿರುತ್ತೆ.

ಕೊಲೆಯಾಗಿರುವ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗಾಗಲಿ ಅಥವಾ ಮಂಡ್ಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಗಾಗಲಿ ಮಾಹಿತಿ ನೀಡಿ ಆರೋಪಿಗಳ ಪತ್ತೆ ಬಗ್ಗೆ ಸಹಕರಿಸಬೇಕೆಂದು ಮೂಲಕ ಕೋರಿದೆ.

No comments:

Post a Comment