Moving text

Mandya District Police

PRESS NOTE


ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ
 ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 02-05-2014

ಪತ್ರಿಕಾ ಪ್ರಕಟಣೆ

ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀಯುತ ಕೆ.ರಾಜೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ರವರು ದಿನಾಂಕ 30-04-2014 ರಂದು ರಾತ್ರಿ ಗಸ್ತಿನಲ್ಲಿದ್ದು ಬೆಳಗಿನ ಜಾವ 05-00 ಗಂಟೆಯಲ್ಲಿ ತೆಂಡೆಕೆರೆ ಸರ್ಕಲ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಮೈಸೂರು ಕಡೆಯಿಂದ ಬಂದ ಒಂದು ಪ್ಯಾಸೆಂಜರ್ ಆಟೋ ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಕೆಎ-55-2893 ಆಟೋದಲ್ಲಿದ್ದ ಆರೋಪಿತರಾದ 1) ಯಲ್ಲಪ್ಪ @ ಯಲ್ಲಪ್ಪಬೋವಿ ಬಿನ್ ಚಿಕ್ಕಸುಬ್ಬಯ್ಯ @ ಚಿಕ್ಕಸುಬ್ಬಯ್ಯಬೋವಿ, 38 ವರ್ಷ, ಬೋವಿಜನಾಂಗ ಆಟೋ ಡ್ರೈವರ್ ನಂ 7, ರಿಂಗ್ರೋಡ್ ಸಾತಗಹಳ್ಳಿ ಇಂಜಿನೀಯರಿಂಗ್ ಕಾಲೇಜು ಪಕ್ಕ ಮೈಸೂರು ಮತ್ತು 2) ಸರೋಜ @ ರಾಧ ಕೊಂ ರಾಜು, 25 ವರ್ಷ, ಬೋವಿ ಜನಾಂಗ, ಗಂಧದಕಡ್ಡಿ ವ್ಯಾಪಾರ ಮಾಡುವ ಕೆಲಸ ನಂ 7, 1 ನೇ ಕ್ರಾಸ್, ಕುರಿಮಂಡಿ ಆಲದಮರದ ಪಕ್ಕ, ಕೆಸರೆ, ಮೈಸೂರು ಸಿಟಿ ಎಂದು ತಿಳಿಸಿದ್ದು  ಆಟೋ ಪರಿಶೀಲಿಸಿದಾಗ ಹಿಂಬಾಗದ ಸೀಟಿನಲ್ಲಿ ಪ್ಲಾಸ್ಟಿಕ್ ಕವರಿನ ಒಳಗೆ 18 ಜೊತೆ ಬೆಳ್ಳಿ ಕಾಲು ಚೈನುಗಳಿದ್ದು ವಿಚಾರಣೆಮಾಡಿದಾಗ ಸದರಿ ವಸ್ತುಗಳನ್ನು ಮದ್ದೂರಿನ ಬಜಾರ್ ಸ್ಟ್ರೀಟ್ ನಲ್ಲಿರುವ ಒಂದು ಜ್ಯೂಯಲರ್ಸ್ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋಗಿ ಅಂಗಡಿಯವರಿಗೆ ಗೊತ್ತಾಗದೇ 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ನಾವು ಮತ್ತು ನಮ್ಮ ಸಂಬಂದಿಕರಾದ 1) ಸುಬ್ಬಮ್ಮ @ ಸುಜಾತ ಮತ್ತು 2) ಮಂಜು @ ಮಂಜುಳ ಮೈಸೂರು ರವರು ಜೊತೆಗೂಡಿ ಕಳ್ಳತನ ಮಾಡಿದ್ದು ಗಿರಾಕಿಗಳು ಸಿಕ್ಕರೆ ಮಾರಾಟ ಮಾಡಿ ಬಂದ ಹಣವನ್ನು ನಾವೆಲ್ಲರೂ ಹಂಚಿಕೊಳ್ಳೋಣ ಎಂದು ಬರುತ್ತಿದ್ದೆವು ತಿಳಿಸಿದ್ದು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಆಟೋವನ್ನು ಮತ್ತು 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಅಮಾನತ್ತುಪಡಿಸಿಕೊಂಡು ಅರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಆರೋಪಿತರಿಂದ ಸುಮಾರು 60.000 ರೂಪಾಯಿ ಬೆಲೆ ಬಾಳುವ 1200 ಗ್ರಾಂ ತೂಕದ ಬೆಳ್ಳಿಯ 18 ಜೊತೆ ಕಾಲು ಚೈನುಗಳನ್ನು ಆರೋಪಿತರಿಂದ ವಶ ಪಡಿಸಿಕೊಂಡಿರುತ್ತೆ.

ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಡಿ.ಪಿ. ಧನರಾಜ್ ಮತ್ತು ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ. 

No comments:

Post a Comment