Moving text

Mandya District Police

PRESS NOTE

   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
    ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 02-05-2014

ಪತ್ರಿಕಾ ಪ್ರಕಟಣೆ

       ದಿನಾಂಕಃ 01-05-2014 ರಂದು ಮಂಡ್ಯ ನಗರದ ಮಹಾವೀರ ಚಿತ್ರಮಂದಿರದಲ್ಲಿ ಮಾಣಿಕ್ಯ ಎಂಬ ಸುದೀಪ್ ಅಭಿನಯದ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಈ ಸಮಯದಲ್ಲಿ ಸುದೀಪ್ರವರು ಮಾತನಾಡುವ ಧ್ವನಿಯು ಅಸ್ಪಷ್ಟವಾಗಿ ಕೇಳುತ್ತಿದೆ ಎಂದು ಪ್ರೇಕ್ಷಕರು ಈ ಬಗ್ಗೆ ಚಿತ್ರಮಂದಿರದ ಮೇಲ್ವಿಚಾರಕರನ್ನು ಪ್ರಶ್ನಿಸುತ್ತಿದ್ದ ಸಮಯದಲ್ಲಿ ರೊಚ್ಚಿಗೆದ್ದ ಕೆಲವು ಕಿಡಿಗೇಡಿಗಳು ಚಿತ್ರಮಂದಿರದ ಪೀಠೋಪಕರಣಗಳು ಮತ್ತು ಗ್ಲಾಸುಗಳನ್ನು ಹೊಡೆದು ಗಲಾಟೆ ಮಾಡಿದ್ದು, ನಂತರ ಚಲನಚಿತ್ರ ಪ್ರದರರ್ಶಿಸಲು ಸಾಧ್ಯವಾಗದ ಕಾರಣ ಪ್ರೇಕ್ಷಕರಿಗೆ ಬೆಳಗ್ಗಿನ ಪ್ರದರ್ಶನ ಮತ್ತು ಮದ್ಯಾಹ್ನದ ಪ್ರದರ್ಶನದ ಎರಡು ವೇಳೆಯ ಹಣವನ್ನು ವಾಪಸ್ ನೀಡಿ ಕಳುಹಿಸಿರುತ್ತಾರೆ. ಗಲಾಟೆ ಸಮಯದಲ್ಲಿ ಚಿತ್ರಮಂದಿರ ಹಾನಿಗೊಳಗಾಗಿದ್ದ ಸಂಬಂಧವಾಗಿ ಚಿತ್ರಮಂದಿರದ ಮ್ಯಾನೇಜರ್ ಆದ ರಾಮು ಎಂಬುವವರು ಮಂಡ್ಯ ಪೂರ್ವ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಕೇಸಿನ ಆರೋಪಿಗಳಾದ 1] ವಿನಿಲ್ಕುಮಾರ್ ಬಿನ್ ರಾಮಚಂದ್ರ, 24 ವರ್ಷ, ಒಕ್ಕಲಿಗರು, ವ್ಯವಸಾಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೂಕು. 2] ಹೆಚ್.ಎನ್.ದೀಪು ಬಿನ್ ನಾಗರಾಜು 27 ವರ್ಷ, ಒಕ್ಕಲಿಗರು, ಕ್ಲಬ್ನಲ್ಲಿ ಸಪ್ಲೈಯರ್ ಕೆಲಸ, ಸ್ವಂತ ಊರು ಹುಚ್ಚಲಗೆರೆ ಮಂಡ್ಯ ತಾಲ್ಲೂಕು. 3] ರಮೇಶ ಬಿನ್ ಲೇಟ್ ಸವಡೆ ಉರುಗಯ್ಯ, 26 ವರ್ಷ, ಗಂಗಾಮತಸ್ತರು, ವ್ಯವಸಾಯ, ವಾಸ ಚೀರನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. 

No comments:

Post a Comment