Moving text

Mandya District Police

PRESS NOTE





      ಮಳವಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ರವರಾದ ಹೆಚ್.ಆರ್. ಧರಣೇಂದ್ರರವರ ಮಾರ್ಗದರ್ಶನದಲ್ಲಿ, ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರ ನೇತೃತ್ವದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಅಪರಾದ ಪತ್ತೆ ದಳ ರಚಿಸಿ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ದಿನಾಂಕಃ13-02-2014 ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರು ಮಳವಳ್ಳಿ ಪುರ ಠಾಣೆ ಪಿಎಸ್ಐ ಎಸ್.ಸಂತೋಷ, ಮಳವಳ್ಳಿ ಗ್ರಾಮಾಂತರ ಠಾಣೆ ಪಿ.ಎಸ್.ಐ ಸುಬ್ಬಯ್ಯ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ-145 ಕೆ.ಕಷ್ಣಶೆಟ್ಟಿ, ಸಿ.ಪಿ.ಸಿ 697 ವಿ.ಎಸ್. ಪ್ರಕಾಶ್, ಸಿಪಿಸಿ-441 ಆರ್.ಪ್ರಭುಸ್ವಾಮಿ, ಸಿ.ಪಿ.ಸಿ.465 ಎಂ.ವೆಂಕಟೇಶ್, ಸಿಪಿಸಿ 158 ಎಸ್ಡಿ ಪ್ರದೀಪ್ಕುಮಾರ್, ಸಿ.ಪಿ.ಸಿ.735 ಎಸ್.ಲೋಕೇಶ್, ಸಿ.ಪಿ.ಸಿ 15 ಎಸ್.ರಾಘವೇಂದ್ರ ಹಾಗೂ ಜೀಪ್ ಚಾಲಕ ಸಿದ್ದರಾಜು ರವರ ಜೊತೆಯಲ್ಲಿ ಕಾಯರ್ಾಚರಣೆ ಮಾಡಿ ಬನ್ನೂರಿನಿಂದ ಮುಂದೆ ಮೈಸೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಹತ್ತಿರ ಆರೋಪಿ ಮನು @ ಮನುಕುಮಾರ ಬಿನ್ ಲೇ:ವೆಂಕಟೇಶ್ @ ಹುಚ್ಚಯ್ಯ, ಗಣಂಗೂರು ಗ್ರಾಮ ಈತನನ್ನು ಹಾಗೂ ಈತನ ವಶದಲ್ಲಿದ್ದ ಬಜಾಜ್ ಪಲ್ಸರ್ ಮೋಟಾರ್ ಬೈಕ್ ನಂ ಕೆ.ಎ.11-ವೈ-8503 ಅನ್ನು ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ವಿಚಾರಣಾ ವೇಳೆಯಲ್ಲಿ ಈತ ಬಾಗಿಯಾಗಿದ್ದ ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ 3 ಘೋರ ಹಾಗೂ 5 ಅಘೋರ ಪ್ರಕರಣಗಳನ್ನು ಪತ್ತೆ ಹಚ್ಚಿ ಈತನಿಂದ ಸುಮಾರು 300 ಗ್ರಾಂ ತೂಕದ 8 ಚಿನ್ನದ ಸರಗಳನ್ನು ಹಾಗೂ ಒಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ನ್ನು ಅಮಾನತ್ತು ಪಡಿಸಿಕೊಂಡಿರುತ್ತದ.ೆ ಒಟ್ಟು ಅಂದಾಜು ಮೌಲ್ಯ ಸುಮಾರು 10 ಲಕ್ಷರೂಗಳಾಗಿರುತ್ತದೆ

   ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ .

No comments:

Post a Comment