Moving text

Mandya District Police

PRESS NOTE OF K R PETE CIRCLE DTD : 06-02-2014

         ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
    ಮಂಡ್ಯ ಜಿಲ್ಲೆ, ಮಂಡ್ಯ 
      ದಿನಾಂಕಃ 06-02-2014

ಪತ್ರಿಕಾ ಪ್ರಕಟಣೆ 


     
ಕೆ.ಆರ್.ಪೇಟೆ ತಾಲ್ಲೂಕಿನ ಕೊಟಗಹಳ್ಳಿ ಗ್ರಾಮದ ಬಳಿ ದುಗ್ಗನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಈಗ್ಗೆ ಏಳು ತಿಂಗಳ ಹಿಂದೆ ಸರಗಳ್ಳತನವಾಗಿದ್ದು ಹಾಗೂ ಈಗ್ಗೆ 4 ತಿಂಗಳ ಹಿಂದೆ ಕೆ.ಅರ್.ಪೇಟೆ ಟೌನ್ನ ಜಯನಗರ ಬಡಾವಣೆಯಲ್ಲಿ ಸರಗಳ್ಳತನವಾಗಿದ್ದು ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ದಿನಾಂಕ: 05-04-2014 ರಂದು ಕೆ.ಆರ್.ಪೇಟೆ ಸಿ.ಪಿ.ಐರವರಾದ ಶ್ರೀ.ಕೆ.ರಾಜೇಂದ್ರರವರು ಗಸ್ತಿನಲ್ಲಿದ್ದಾಗ ಮೈಸೂರು ಕಡೆಯಿಂದ ಒಂದು ಮೋಟಾರ್ ಸೈಕಲನಲ್ಲಿ ಬರುತ್ತಿದ್ದ ಮೋಟಾರ್ ಸವಾರರನ್ನು ತಡೆದು ಪರಿಶೀಲಿಸಲಾಗಿ, ಸದರಿ ಆಸಾಮಿಗಳು ಸಮರ್ಪಕವಾದ ಉತ್ತರವನ್ನು ಮತ್ತು ವಾಹನದ ದಾಖಲಾತಿಗಳನ್ನು ಹಾಜರ್ಪಡಿಸದೆ ಅನುಮಾನಸ್ಪದವಾಗಿ ಕಂಡು ಬಂದಿದ್ದರಿಂದ, ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಮೇಲ್ಕಂಡ ಪ್ರಕರಣಗಳನ್ನು ಎಸಗಿರುವ ಸ್ವ-ಇಚ್ಚಾ ಹೇಳಿಕೆಯಲ್ಲಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಗಳಿಂದ ಒಟ್ಟು 56 ಗ್ರಾಂನ ಎರಡು ಚಿನ್ನದ ಚೈನುಗಳನ್ನು ಅಮಾನತ್ಪಡಿಸಿರುತ್ತೆ. ಇವುಗಳ ಬೆಲೆ 1,57,000/- ರೂ ಆಗಿರುತ್ತೆ.

        ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ    ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಎಂ.ಶಿವಕುಮಾರ್ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ಶತ್ರುಜ್ಞಾ, ರವಿ, ಚಾಲಕ ಕೆ.ಜೆ. ಲೋಕೇಶ್ ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

No comments:

Post a Comment