Moving text

Mandya District Police
DAILY CRIME REPORT OF MANDYA DISTRICT DTD : 28-02-2014
DAILY CRIME REPORT OF MANDYA DISTRICT DT D : 27-02-2014
MANDYA DISTRICT DAILY CRIME REPORT DATE 26-02-2014

PRESS NOTE DATE : 26-02-2014


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
                                                 ಮಂಡ್ಯ ಜಿಲ್ಲೆ, ದಿನಾಂಕಃ 26-02-2014

     ಪತ್ರಿಕಾ ಪ್ರಕಟಣೆ


ದಿನಾಂಕಃ 24-02-2014 ರಂದು ಪಿಎಸ್ಐ ಶ್ರೀ. ಧನರಾಜ್, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಸಮೇತ  ರಾತ್ರಿ ಗಸ್ತಿನಲ್ಲಿದ್ದಾಗ ರಾತ್ರಿ 1215 ಗಂಟೆಯಲ್ಲಿ ಬೂಕನಕೆರೆ ಗ್ರಾಮದಿಂದ ಬಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯ ಪೆಟ್ರೋಲ್ ಬಂಕ್ ಬಳಿ 1) ನಟ @ ನಟರಾಜು ಬಿನ್ ಲಕ್ಷ್ಮಯ್ಯ, 35 ವರ್ಷ, ಚಾಲಕ ವೃತ್ತಿ, ಐಚನಹಳ್ಳಿ ಗ್ರಾಮ, ಬೂಕನಕೆರೆ ಹೊಬಳಿ ಕೆ.ಆರ್.ಪೇಟೆ ತಾ 2) ಚಲುವರಾಜು ಬಿನ್ ನಾಗಯ್ಯ, 22 ವರ್ಷ, ವ್ಯವಸಾಯ, ಹೆರಗನಹಳ್ಳಿ ಗ್ರಾಮ ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರುಗಳು ಒಂದು ಗೂಡ್ಸ್ ಆಟೋವನ್ನು ತೆಗೆದುಕೊಂಡು ಹೋಗಲು ಪ್ರಯತ್ನಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅವರುಗಳನ್ನು  ಹಿಡಿದು ಆಟೋ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲಾಗಿ ಸದರಿ ಆಟೋ ಬಗ್ಗೆ ದಾಖಲಾತಿ ಇಲ್ಲದೇ ಇದ್ದು ನಕಲೀ ಕೀ ಬಳಸಿ ಮೈಸೂರು ಹತ್ತಿರ ಕಳ್ಳತನ ಮಾಡಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಅವರ ವಿರುದ್ದ ಪ್ರಕರಣ ದಾಖಲುಮಾಡಿ  ಆರೋಪಿತರನ್ನು ವಿಚಾರಣೆಗೊಳಪಡಿದಾಗ ಆರೋಪಿತರು ಈಗ್ಗೆ ಮೂರು ದಿವಸಗಳ ಹಿಂದೆ ಮೈಸೂರು ಹತ್ತಿರ ರಾತ್ರಿ ವೇಳೆಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂದು 407 ಗೂಡ್ಸ್ ಟೆಂಪೋ ಮತ್ತು ನಂತರ ಕೆ.ಆರ್.ಎಸ್. ಬಳಿ ಒಂದು ಪಲ್ಸರ್ ಮೋಟಾರ್ ಸೈಕಲ್ ನ  ಕೀ ಬಳಸಿ ಕಳ್ಳತನಮಾಡಿ ಆರೋಪಿತನಾದ ಚೆಲುವರಾಜು ರವರ ಹೆರಗನಹಳ್ಳಿ ಗ್ರಾಮದ ಮನೆಯಲ್ಲಿ ಮಾರಾಟಮಾಡಲು ನಿಲ್ಲಿಸಿರುತ್ತೇವೆಂದು ತಿಳಿಸಿರುತ್ತಾರೆ.

ಆರೋಪಿತರಿಂದ ಸುಮಾರು 7 ಲಕ್ಷ ರೂಪಾಯಿ ಬೆಲೆ ಬಾಳುವ 1) ನಂಬರ್ ಪ್ಲೇಟ್ ಇಲ್ಲದ ಗೂಡ್ಸ್ ಆಟೋ 2) ಕೆಎ-21-ಕೆ-72 ಪಲ್ಸರ್ ಮೋಟಾರ್ ಸೈಕಲ್ 3) ಕೆಎ-30-260 ನಂಬರಿನ 407 ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

       ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.


DAILY CRIME REPORT OF MANDYA DISRICT DTD : 25-02-2014
DAILY CRIME REPORT OF MANDYA DISTRICT DTD : 24-02-2014
DAILY CRIME REPORT OF MANDYA DISTRICT DTD : 23-02-2014
MANDYA DISTRICT DAILY CRIME REPORT DATE:22-02-2014
DAILY CRIME REPORT OF MANDYA DISTRICT DTD : 21-02-2014
DAILY CRIME REPORT OF MANDYA DISTRICT DATE:20-02-2014
DAILY CRIME REPORT OF MANDYA DISRITCT DTD : 19-02-2014
DAILY CRIME REPORT OF MANDYA DISTRICT DTD : 18-02-2014
DAILY CRIME REPORT OF MANDYA DISRICT DTD : 17-02-2014
DAILY CRIME REPORT OF MANDYA DISTRICT DTD : 16-02-2014
DAILY CRIME REPORT OF MANDYA DISTRICT DTD : 15-02-2014
DAILY CRIME REPORT OF MANDYA DISTRICT DTD : 14-02-2014

PRESS NOTE





      ಮಳವಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ರವರಾದ ಹೆಚ್.ಆರ್. ಧರಣೇಂದ್ರರವರ ಮಾರ್ಗದರ್ಶನದಲ್ಲಿ, ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರ ನೇತೃತ್ವದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಅಪರಾದ ಪತ್ತೆ ದಳ ರಚಿಸಿ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ದಿನಾಂಕಃ13-02-2014 ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ.ಶಿವಸ್ವಾಮಿ ರವರು ಮಳವಳ್ಳಿ ಪುರ ಠಾಣೆ ಪಿಎಸ್ಐ ಎಸ್.ಸಂತೋಷ, ಮಳವಳ್ಳಿ ಗ್ರಾಮಾಂತರ ಠಾಣೆ ಪಿ.ಎಸ್.ಐ ಸುಬ್ಬಯ್ಯ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ-145 ಕೆ.ಕಷ್ಣಶೆಟ್ಟಿ, ಸಿ.ಪಿ.ಸಿ 697 ವಿ.ಎಸ್. ಪ್ರಕಾಶ್, ಸಿಪಿಸಿ-441 ಆರ್.ಪ್ರಭುಸ್ವಾಮಿ, ಸಿ.ಪಿ.ಸಿ.465 ಎಂ.ವೆಂಕಟೇಶ್, ಸಿಪಿಸಿ 158 ಎಸ್ಡಿ ಪ್ರದೀಪ್ಕುಮಾರ್, ಸಿ.ಪಿ.ಸಿ.735 ಎಸ್.ಲೋಕೇಶ್, ಸಿ.ಪಿ.ಸಿ 15 ಎಸ್.ರಾಘವೇಂದ್ರ ಹಾಗೂ ಜೀಪ್ ಚಾಲಕ ಸಿದ್ದರಾಜು ರವರ ಜೊತೆಯಲ್ಲಿ ಕಾಯರ್ಾಚರಣೆ ಮಾಡಿ ಬನ್ನೂರಿನಿಂದ ಮುಂದೆ ಮೈಸೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಹತ್ತಿರ ಆರೋಪಿ ಮನು @ ಮನುಕುಮಾರ ಬಿನ್ ಲೇ:ವೆಂಕಟೇಶ್ @ ಹುಚ್ಚಯ್ಯ, ಗಣಂಗೂರು ಗ್ರಾಮ ಈತನನ್ನು ಹಾಗೂ ಈತನ ವಶದಲ್ಲಿದ್ದ ಬಜಾಜ್ ಪಲ್ಸರ್ ಮೋಟಾರ್ ಬೈಕ್ ನಂ ಕೆ.ಎ.11-ವೈ-8503 ಅನ್ನು ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ವಿಚಾರಣಾ ವೇಳೆಯಲ್ಲಿ ಈತ ಬಾಗಿಯಾಗಿದ್ದ ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ 3 ಘೋರ ಹಾಗೂ 5 ಅಘೋರ ಪ್ರಕರಣಗಳನ್ನು ಪತ್ತೆ ಹಚ್ಚಿ ಈತನಿಂದ ಸುಮಾರು 300 ಗ್ರಾಂ ತೂಕದ 8 ಚಿನ್ನದ ಸರಗಳನ್ನು ಹಾಗೂ ಒಂದು ಬಜಾಜ್ ಪಲ್ಸರ್ ಮೋಟಾರ್ ಬೈಕ್ನ್ನು ಅಮಾನತ್ತು ಪಡಿಸಿಕೊಂಡಿರುತ್ತದ.ೆ ಒಟ್ಟು ಅಂದಾಜು ಮೌಲ್ಯ ಸುಮಾರು 10 ಲಕ್ಷರೂಗಳಾಗಿರುತ್ತದೆ

   ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ .
DAILY CRIME REPORT OF MANDYA DISTRICT DTD : 13-02-2014
DAILY CRIME REPORT OF MANDYA DISTRICT DTD : 12-02-2014
DAILY CRIME REPORT OF MANDYA DISTRICT DTD : 11-02-2014
DAILY CRIME REPORT OF MANDYA DISTRICT DTD : 10-02-2014
DAILY CRIME REPORT OF MANDYA DISTRICT DTD : 09-02-2014
DAILY CRIME REPORT OF MANDYA DISTRICT DTD : 08-02-2014
DAILY CRIME REPORT OF MANDYA DISTRICT DTD : 07-02-2014

PRESS NOTE OF K R PETE CIRCLE DTD : 06-02-2014

         ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
    ಮಂಡ್ಯ ಜಿಲ್ಲೆ, ಮಂಡ್ಯ 
      ದಿನಾಂಕಃ 06-02-2014

ಪತ್ರಿಕಾ ಪ್ರಕಟಣೆ 


     
ಕೆ.ಆರ್.ಪೇಟೆ ತಾಲ್ಲೂಕಿನ ಕೊಟಗಹಳ್ಳಿ ಗ್ರಾಮದ ಬಳಿ ದುಗ್ಗನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಈಗ್ಗೆ ಏಳು ತಿಂಗಳ ಹಿಂದೆ ಸರಗಳ್ಳತನವಾಗಿದ್ದು ಹಾಗೂ ಈಗ್ಗೆ 4 ತಿಂಗಳ ಹಿಂದೆ ಕೆ.ಅರ್.ಪೇಟೆ ಟೌನ್ನ ಜಯನಗರ ಬಡಾವಣೆಯಲ್ಲಿ ಸರಗಳ್ಳತನವಾಗಿದ್ದು ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ದಿನಾಂಕ: 05-04-2014 ರಂದು ಕೆ.ಆರ್.ಪೇಟೆ ಸಿ.ಪಿ.ಐರವರಾದ ಶ್ರೀ.ಕೆ.ರಾಜೇಂದ್ರರವರು ಗಸ್ತಿನಲ್ಲಿದ್ದಾಗ ಮೈಸೂರು ಕಡೆಯಿಂದ ಒಂದು ಮೋಟಾರ್ ಸೈಕಲನಲ್ಲಿ ಬರುತ್ತಿದ್ದ ಮೋಟಾರ್ ಸವಾರರನ್ನು ತಡೆದು ಪರಿಶೀಲಿಸಲಾಗಿ, ಸದರಿ ಆಸಾಮಿಗಳು ಸಮರ್ಪಕವಾದ ಉತ್ತರವನ್ನು ಮತ್ತು ವಾಹನದ ದಾಖಲಾತಿಗಳನ್ನು ಹಾಜರ್ಪಡಿಸದೆ ಅನುಮಾನಸ್ಪದವಾಗಿ ಕಂಡು ಬಂದಿದ್ದರಿಂದ, ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಮೇಲ್ಕಂಡ ಪ್ರಕರಣಗಳನ್ನು ಎಸಗಿರುವ ಸ್ವ-ಇಚ್ಚಾ ಹೇಳಿಕೆಯಲ್ಲಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಗಳಿಂದ ಒಟ್ಟು 56 ಗ್ರಾಂನ ಎರಡು ಚಿನ್ನದ ಚೈನುಗಳನ್ನು ಅಮಾನತ್ಪಡಿಸಿರುತ್ತೆ. ಇವುಗಳ ಬೆಲೆ 1,57,000/- ರೂ ಆಗಿರುತ್ತೆ.

        ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ    ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಎಂ.ಶಿವಕುಮಾರ್ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ಶತ್ರುಜ್ಞಾ, ರವಿ, ಚಾಲಕ ಕೆ.ಜೆ. ಲೋಕೇಶ್ ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.

PRESS NOTE DTD : 06-02-2014

ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
 ಮಂಡ್ಯ ಜಿಲ್ಲೆ, ಮಂಡ್ಯ 
  ದಿನಾಂಕಃ 06-02-2014

ಪತ್ರಿಕಾ ಪ್ರಕಟಣೆ




ಮಂಡ್ಯ ಗ್ರಾಮಾಂತರ ಮತ್ತು  ಮಂಡ್ಯ ನಗರ ಪೊಲೀಸರ ಕಾರ್ಯಚರಣೆ, ದೇವಸ್ಥಾನ ಕಳವು ಹಾಗೂ ಸರಕಳ್ಳತನ ಸೇರಿದಂತೆ 52 ಪ್ರಕರಣಗಳ ಪತ್ತೆ. 

ಮಂಡ್ಯ ಜಿಲ್ಲೆಯ ಹೊಳಲು, ಮಂಡ್ಯ ಕೊಪ್ಪಲು ಹಾಗೂ ಮಂಡ್ಯ ನಗರ, ಅರಕೆರೆ, ಬೆಸಗರಹಳ್ಳಿ, ಮೇಲುಕೋಟೆ ವಿವಿದೆಡೆಗಳಲ್ಲಿ ವರದಿಯಾಗಿದ್ದ ಹಲವು ದೇವಸ್ಥಾನ ಹಾಗೂ ಸರಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಲೋಕೇಶ್ ಮತ್ತು ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ. ಹರೀಶ್ಬಾಬು ರವರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ಡಿಎಸ್ಪಿ, ಮಂಡ್ಯ ಉಪವಿಬಾಗ ರವರ ನೇತೃತ್ವದಲ್ಲಿ ನೇಮಿಸಲಾಗಿತ್ತು. ಸದರಿ ತಂಡಗಳ 2-3 ದಿನಗಳ ಸತತ ಪ್ರಯತ್ನದಿಂದ ಒಟ್ಟು 14 ಜನ ಆರೋಪಿಗಳನ್ನು ಬಂದಿಸಿದ್ದು, ಒಟ್ಟು 52 ಪ್ರಕರಣಗಳ ಪತ್ತೆಯಾಗಿರುತ್ತವೆ. ಸದರಿ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

1] 422.5 ಗ್ರಾಂ ಚಿನ್ನಾಬರಣಗಳು. 330 ಗ್ರಾಂ ಬೆಳ್ಳಿ. ಒಟ್ಟು ಮೌಲ್ಯ ಸುಮಾರು 13 ಲಕ್ಷ ರೂಗಳು.
3] ಎರಡು ನೋಕಿಯಾ ಕಂಪನಿಯ ಮೊಬೈಲ್ಗಳು
4] ದೇವಸ್ಥಾನ ಹುಂಡಿಯ ಸುಮಾರು 10, 000 ರೂ ಹಣ.
5] ಕೃತ್ಯಕ್ಕೆ ಬಳಸಿದ ನಾಲ್ಕು ದ್ವಿಚಕ್ರ ವಾಹನಗಳು

ಮೇಲ್ಕಂಡ 52 ಪ್ರಕರಣಗಳಲ್ಲಿ ಒಟ್ಟು ಹತ್ತು ಸರಗಳ್ಳತನ ಪ್ರಕರಣಗಳು, ಅರಕರೆ ಮತ್ತು ಹೊಳಲುವಿನಲ್ಲಿ ನಡೆದ 02 ಡಕಾಯಿತಿ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.

       ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
DAILY CRIME REPORT OF MANDYA DISTRICT DTD : 06-02-2014
DAILY CRIME REPORT OF MANDYA DISTRICT DTD : 05-02-2014
DAILY CRIME REPORT OF MANDYA DISTRICT DTD : 04-02-2014
DAILY CRIME REPORT OF MANDYA DISTRICT DTD : 03-02-2014
DAILY CRIME REPORT OF MANDYA DISTRICT DTD : 02-02-2014
DAILY CRIME REPORT OF MANDYA DISTRICT DTD : 01-02-2014