Moving text

Mandya District Police

PRESS NOTE MADDUR PS DATED 28-11-2013



                                              ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
                                             ಮಂಡ್ಯ ಜಿಲ್ಲೆ, ಮಂಡ್ಯ
                                                       ದಿನಾಂಕಃ 28-11-2013

ಪತ್ರಿಕಾ ಪ್ರಕಟಣೆ



ಸರಗಳ್ಳರ ಬಂಧನ


      ಮದ್ದೂರು ಮಳವಳ್ಳಿ ಕಡೆಗಳಲ್ಲಿ ಬೈಕ್ಗಳಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಮದ್ದೂರು ಪೊಲೀಸರುದಸ್ತಗಿರಿ ಮಾಡಿರುತ್ತಾರೆ ಬಂಧಿತರಿಂದ ಸುಮಾರು 5 ಲಕ್ಷ ಬೆಲೆ ಬಾಳುವ ಚಿನ್ನದ ವಡಡೆಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 4 ಬೈಕ್ಗಳನ್ನು ವಶಪಡಿಸಿ ಕೊಂಡಿರುತ್ತಾರೆ. ಬಂಧಿತರೆಲ್ಲರೂ ರಾಮನಗರ ತಾಲ್ಲೋಕು ಬಿಡದಿ ಹೋಬಳಿ ಭೈರಮಂಗಲ ಮತ್ತು ಸುತ್ತಮುತ್ತಲಿನ ಗ್ರಾಮದವಾಗಿರುತ್ತಾರೆ.

      ಆರೋಪಿಗಳು ಬೈಕ್ಗಳಲ್ಲಿ ಬಂದು ಒಂಟಿ ಮಹಿಳೆಯರು ತಿರುಗಾಡುವ ಸ್ಥಳದಲ್ಲಿ ಹೂಂಚು ಹಾಕಿ ಹೊರಟು ಅವರಿಂದ ಚಿನ್ನದಸರಗಳನ್ನು ಕಳ್ಳತನ ಮಾಡುತ್ತಿದ್ದರು

ಬಂಧಿತರ ವಿವರ

1] ಭೈರ @ ಸೂರಿ ಬಿನ್ ಮುನಿಸಿದ್ದಯ್ಯ, 27 ವರ್ಷ, ಗಂಗಾಮತಸ್ಥರು, ಏಲೆಕ್ಟ್ರಿಕಲ್ ಕೆಲಸ, ವಾಸ ಸ್ವಂತ ಊರು ಬನ್ನಗಿರಿ ಗ್ರಾಮ, ಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ ರಾಮನಗರ ತಾ ಮತ್ತು ಜಿಲ್ಲೆ.
2] ಶ್ರೀಧರ್ @ ಹಲ್ಲುಕರೆ ಬಿನ್ ನಾಗಣ್ಣ, 22 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ ಮೇರವೇಗೌಡನದೊಡ್ಡಿ ಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
3] ಶಿವಲಿಂಗಯ್ಯ @ ಅಯ್ಯಪ್ಪ ಬಿನ್ ಶಿವಣ್ಣ 2 ವರ್ಷ, ಒಕ್ಕಲಿಗರು, ವ್ಯವಸಾಯ, ಪೇಟಿಂಗ್ ಕೆಲಸ, ವಾಸ ಮೇರವೇಗೌಡನದೊಡ್ಡಿಭೈರಮಂಗಲ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
4] ಮಂಜು ಬಿನ್ ವೆಂಕಟಗಿರಿಯಪ್ಪ, 24 ವರ್ಷ, ಗಂಗಮತಸ್ಥರು, ವ್ಯವಸಾಯ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
5] ಮಾದೇಶ ಬಿನ್ ನಂಜುಂಡಪ್ಪ 25 ವರ್ಷ, ಗಂಗಮತಸ್ಥರು, ವ್ಯವಸಾಯ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರತಾ ಮತ್ತು ಜಿಲ್ಲೆ.
6] ಶಿವು @ ಜೋಗುರು ಶಿವು ಬಿನ್ ಲೇಟ್ ಗಂಗಾಧರ್ 23 ವರ್ಷ, ಪ/ಜಾತಿ, ಕೂಲಿ ಕೆಲಸ, ವಾಸ ಭೈರಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
7] ನವೀನ್ @ ಪಟಾಕಿ ಬಿನ್ ಲೇಟ್ ಕೃಷ್ಣಪ್ಪ, 21 ವರ್ಷ, ಬೋವಿ ಜನಾಂಗ, ವ್ಯವಸಾಯ, ವಾಸ ರಾಮನಹಳ್ಳಿ ಗ್ರಾಮ, ಉರುಗಪುರಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.
8] ಮಾಧವ ಬಿನ್ ಲೇಟ್ ವರದರಾಜು 23 ವರ್ಷ, ಒಕ್ಕಲಿಗರು, ಕ್ಯಾಡಿ ಬಾಯ್ ಕೆಲಸ, ವಾಸ # 35 ಮಾರುತಿ ನಗರ, ಮಂಚನಾಯ್ಕನಹಳ್ಳಿ ಪೋಸ್ಟ್, ಬಿಡದಿ ಹೋಬಳಿ, ರಾಮನಗರ ತಾ ಮತ್ತು ಜಿಲ್ಲೆ.

      ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿಲಾಗಿದೆ.

      ಮದ್ದೂರು ಸಿಪಿಐ ಶ್ರೀ ಎಂ.ಎಂ. ಯೋಗೇಂದ್ರನಾಥ ಪಿಎಸ್ಐ ಕೆ.ಎನ್. ಚಂದ್ರಶೇಖರ್. ಪಿಎಸ್ಐ ಶ್ರೀ ಎನ್.ವಿ. ಮಹೇಶ್ , ಎಎಸ್ಐ ಶ್ರೀನಿವಾಸ ಸಿಬ್ಬಂದಿಯವರಾದ ವಿ. ನಟರಾಜು, ಪ್ರೇಮ್ಕುಮಾರ, ಜಗಲಿಸಿದ್ದಯ್ಯ, ಕುಮಾರಸ್ವಾಮಿ ಗೋಪಾಲ್,ಚಿಕ್ಕಮಲ್ಲು ದೇವರಾಜು ರವರುಗಳು ಆರೋಪಿಗಳನ್ನು ಬಂದಿಸಿ ಮಾಲು ಪತ್ತೆ ಮಾಡಲು ಯಶಸ್ವಿಯಾಗಿರುತ್ತಾರೆ. ಇವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 

No comments:

Post a Comment