Moving text

Mandya District Police

DAILY CRIME REPORT DATED : 24-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಗತ್ಯ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  2 ಕಳ್ಳತನ ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ನಾಗೇಶ ಬಿನ್. ಜವರೇಗೌಡ, 40 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸಃ ರೈಸ್ಮಿಲ್ ಪಕ್ಕ ಮಹದೇವಪುರ ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:24-06-2013ರಂದು ಹಿಂದಿನ ದಿನಗಳಲ್ಲಿ ಮಹದೇವಪುರ ಗ್ರಾಮದ ಸ್ನಾನಘಟ್ಟದ ಬಳಿ ಲಕ್ಷ್ಮಮ್ಮ ಕೊಂ. ಜವರೇಗೌಡ, 60 ವರ್ಷ, ಒಕ್ಕಲಿಗರು, ಮನೆಕೆಲಸ, ಮಂಡ್ಯಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ22-06-2013ರಂದು ಬೆಳಿಗ್ಗೆ 06-00 ಗಂಟೆಯ ಸಮಯದಲ್ಲಿ ನಮ್ಮ ತಾಯಿ ಲಕ್ಷ್ಮಮ್ಮ ರವರು ತನ್ನ ಮಗಳ ಮನೆ ಮಂಡ್ಯದಕೊಪ್ಪಲಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ದಿನಾಂಕ:24-06-2013 ರಂದು ಬೆಳಿಗ್ಗೆ ಸ್ನಾನಘಟಗಟದ ಬಳಿ ಒಂದು ಹೆಣ ನೀರಿನಲ್ಲಿ ತೇಲುತ್ತಿದೆ ಎಂದು ವಿಚಾರ ಗೊತ್ತಾಗಿ ಹೋಗಿ ನೋಡಲಾಗಿ ಇದು ನಮ್ಮ ತಾಯಿ ಲಕ್ಷ್ಮಮ್ಮ ರವರದಾಗಿರುತ್ತದೆ ತನ್ನ ಮಗಳ ಮನೆಗೆ ಹೋಗುವಾಗ ಮಲ ಮೂತ್ರ ಮಾಡಿ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲುಜಾರಿ ನೀರುಕುಡಿದು ಮೃತಪಟ್ಟಿರುವುದಾಗಿರುತ್ತದೆ ಈ ಬಗ್ಗೆ ಕ್ರಮ ಜರುಗಿಸಬೇಕಾಗಿ ಪ್ರಾರ್ಥನೆ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ.09/13 ಕಲಂ.174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ನಾಗರಾಜು ಬಿನ್. ಮನಿಯಯ್ಯ, ಗೋಪನಹಳ್ಳಿ ಗ್ರಾಮ ಸಿ.ಎ.ಕೆರೆ ಹೋಬಳಿ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಮುನಿಯಯ್ಯ ಬಿನ್. ಲೇಟ್.ಚನ್ನಯ್ಯ, 52ವರ್ಷ, ಗಂಗಮತ ಜನಾಂಗ, ವ್ಯವಸಾಯ, ಗೋಪನಹಳ್ಳಿ. ಗ್ರಾಮ, ಸಿ..ಎ.ಕೆರೆ ಹೋಬಳಿ. ಮದ್ದೂರು ತಾ. ರವರು ದಿನಾಂಕ:20-06-2012ರ ರಾತ್ರಿ ವೇಳೆಯಲ್ಲಿ ಪಿರ್ಯಾದಿಯವರ ತಂದೆ ಮನಿಯಪ್ಪ ಎಂಬುವರು ಹೊಟ್ಟನೋವಿನ ಔಷದಿಯನ್ನು ಕುಡಿಯುವ ಬದಲು ಪಕ್ಕದಲ್ಲಿದ್ದ ಇಲಿ ಔಷಧಿಯನ್ನು ಕುಡಿದಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:24-06-2013ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆಂದು ಈ ಬಗ್ಗೆ ಕ್ರಮ ಜರುಗಿಸಿಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಕುಮಾರಿ ಕೊಂ. ಶಿವಣ್ಣಶೆಟ್ಟಿ, ಮೋದೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಿವಣ್ಣಶೆಟ್ಟಿ ಬಿನ್. ಹಾಲಶೆಟ್ಟಿ, ಗಾಣಿಗಶೆಟ್ಟರು, ಮೋದೂರು ಗ್ರಾಮ, ಕೆ.ಆರ್.ಪೇಟೆ ತಾ. ಮಂಡ್ಯ ಜಿಲ್ಲೆರವರಿಗೆ ಸುಮಾರು ಮೂರು ವರ್ಷಗಳಿಂದಲೂ ಎದೆನೋವು ಮತ್ತು ಅಸ್ತಮ ಕಾಯಿಲೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಅವರು ದಿನಾಂಕ:23-06-2013ರ ರಾತ್ರಿ ಊಟ ಮಾಡಿ 09-00 ಗಂಟೆ ಸಮಯದಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಹಾಗೇ ಎದೆನೋವು ಕಾಣಿಸಿಕೊಂಡು ನಂ.108 ವಾಹನದ ಮೂಲಕ ಕೆ.ಆರ್.ಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1.ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 194/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 24-06-2013 ರಂದು ಪಿರ್ಯಾದಿ ಸೌಮ್ಯ ಬಿನ್. ಬೋರೇಗೌಡ, ಅರೆಚಾಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಬಸವರಾಜು ಬಿನ್. ಕರೀಗೌಡ, 5.1/2 ಅಡಿ ಎತ್ತರ, 31ವರ್ಷ, ಕಂದು ಬಣ್ಣ ರವರು ದಿನಾಂಕ:02-06-2013ರ ಬೆಳಿಗ್ಗೆ ಕಾಫಿ ಕುಡಿದು ತನ್ನ ಗಂಡ ಬಸವರಾಜು ರವರು ಮನೆಯಿಂದ ಹೋದವರು ಈವರೆವಿಗೂ ಬಂದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ ಇವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2.ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 196/13 ಕಲಂ. ಹೆಂಗಸು ಕಾಣಿಯಾಗಿದ್ದಾಳೆ.

      ದಿನಾಂಕ: 24-06-2013 ರಂದು ಪಿರ್ಯಾದಿ ಮಂಜು ಬಿನ್. ಗೂಳೇಗೌಡ, ಅರೆಚಾಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಅವರ ತಾಯಿ ಮಾದಮ್ಮ ಬಿನ್. ಗೂಳೀಗೌಡ, 5.5ಅಡಿ ಎತ್ತರ, 66 ವರ್ಷ, ಗೋದಿ ಮೈ ಬಣ್ಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:22-06-2013ರ ಬೆಳಿಗ್ಗೆ ತನ್ನ ತಾಯಿಯವರಾದ ಮಾದಮ್ಮರವರು ಮನೆಯಿಂದ ಹೋದವರು ಈವರೆವಿಗೂ ಬಂದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಇವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 182/13 ಕಲಂ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ. 

 ದಿನಾಂಕ: 24-06-2013 ರಂದು ಪಿರ್ಯಾದಿ ವೆಂಕಟರಾಮಶೆಟ್ಟಿ ಬಿನ್. ಲೇಟ್, ನರಸಶೆಟ್ಟಿ, ಬಣ್ಣನಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಪುಣ್ಯವತಿ ಕೋಂ. ಸೋಮಶೆಟ್ಟಿ, 29 ವರ್ಷ, ಹಾಗು ಮಗು ಪೂಜಾ, 3ವರ್ಷ ರವರುಗಳು ಅವರ ತವರು ಮನೆ ಬಣ್ಣನಕೆರೆ ಗ್ರಾಮಕ್ಕೆ ಹಬ್ಬದ ಪ್ರಯುಕ್ತ ಬಂದಿದ್ದು ದಿನಾಂಕ:07-04-2013ರಂದು ಬೆಳಗ್ಗೆ 12-00 ಗಂಟೆಯಲ್ಲಿ ಗಂಡನ ಮನೆ ಚಿಟ್ಟನಹಳ್ಳಿ ಗ್ರಾಮಕ್ಕೆ ಹೋಗುತ್ತೇನೆಂದು ಮನೆಗೆ ತಿಳಿಸಿ  ಜೊತೆಯಲ್ಲಿ ಹೆಣ್ಣುಮಗಳಾದ ಪೂಜಾಳನ್ನು ಜೊತೆಯಲ್ಲಿ ಕರೆದುಕೊಂಡು ಹೋದವಳು ತನ್ನ ಗಂಡನ ಮನೆಗೆ ಹೋಗಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅಗತ್ಯ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :


ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಕೆರೋಸಿನ್ ಆರ್ಡರ್ 1993, 3 ಕೆ.ಇ. ಆರ್ಡರ್. 1989 ಮತ್ತು 18(4) ಪಿ.ಡಿ.ಎಸ್. ಆರ್ಡರ್ 1992 ಕೂಡ 3 ಮತ್ತು 7 ಇ.ಸಿ. ಆಕ್ಟ್. 

ದಿನಾಂಕ: 24-06-2013 ರಂದು ಪಿರ್ಯಾದಿ ಎ.ಕೆ.ರಾಜೇಶ್, ಪಿ.ಐ. ಮಳವಳ್ಳಿ ಪುರ ಪೊಲೀಸ್ ಠಾಣೆ, ಮಳವಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಪಂಚಾಯಿತಿದಾರರನ್ನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-614 ಮತ್ತು ಸಿಪಿಸಿ-292ರವರುಗಳನ್ನು ಜೊತೆಯಲ್ಲಿ ಕರೆದುಕೊಂಡು, ಗಂಗಾಬೀದಿಯ ಚೌಡಮ್ಮ ಕೋಂ. ಲೇಟ್. ನಂಜಯ್ಯ, 45 ವರ್ಷ, ಲಕ್ಕಿದಾಸಯ್ಯನಕೇರಿ, ಗಂಗಾಬೀದಿ, ಮಳವಳ್ಳಿ ಟೌನ್ ರವರ ಮನೆಯ ಹತ್ತಿರ ಹೋದಾಗ, 45 ಲೀಟರ್ನ 04 ಕ್ಯಾನ್ಗಳು, ಸುಮಾರು 15ಲೀಟರ್ನ 1 ಕ್ಯಾನ್, 5  ಲೀಟರ್ನ 1 ಕ್ಯಾನ್, 1 ಅಳತೆಯ ಮಾಪನ, 1 ಆಲಿಕೆ, ಒಂದು ಪ್ಲಾಸ್ಟಿಕ್ ಪೈಪ್ನ್ನು ಇಟ್ಟುಕೊಂಡಿದ್ದು ಅವುಗಳ ಬಗ್ಗೆ ಲೈಸೆನ್ಸ್ನ್ನು ಕೇಳಲಾಗಿ ಇಲ್ಲವೆಂದು ತಿಳಿಸಿದ ಮೇರೆಗೆ ಸಕರ್ಾರದ ಪರವಾಗಿ ಸ್ವಯಂ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 145/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.

ದಿನಾಂಕ: 24-06-2013 ರಂದು ಪಿರ್ಯಾದಿ ಎ.ಅಂಕೇಗೌಡ ಬಿನ್. ಲೇಟ್. ಅಂಕೇಗೌಡ, 48 ವರ್ಷ, ವ್ಯವಸಾಯ, ನೆಲ್ಲೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಟ್ರಾಕ್ಟರ್ ಚಾಲಕ ಶಿವಕುಮಾರ್ ಬಿನ್. ಲೇಟ್ ಕರೀಪುಟ್ಟೇಗೌಡ, ನೆಲ್ಲೂರು ಗ್ರಾಮ ರವರು ತಮ್ಮ ಟ್ರಾಕ್ಟರ್ & ಟ್ರೈಲರ್ ನಂ. ಕೆ.ಎ.-11-ಟಿ-3248 ಮತ್ತು ಟ್ರೈಲರ್ ನಂ. ಕೆ.ಎ.-11-ಟಿ-7777 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ತಂಗಿ ನಿಂಗಮ್ಮಳಿಗೆ ಡಿಕ್ಕಿ ಹೊಡೆಸಿದ್ದರಿಂದ ನಿಂಗಮ್ಮಳನ ತಲೆಗೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಸಾವನ್ನಪ್ಪಿರುತ್ತಾಳೆ ಅಪಘಾತ ಮಾಡಿದ ಮೇಲ್ಕಂಡ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಕೊಟ್ಟ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 252/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಬಿ.ಸಂತೋಷ್ ಕುಮಾರ್ ಶೆಟ್ಟಿ ಬಿನ್. ಬಿ. ಆನಂದ ಶೆಟ್ಟಿ, ಶ್ರೀ ವಿನಾಯಕ ಜನರಲ್ ಸ್ಟೋರ್ ಅಂಗಡಿಯ ಮಾಲೀಕರು, ಎಸ್.ಎಫ್. ಸರ್ಕಲ್, ಎಂ.ಸಿ. ರಸ್ತೆ, ಮಂಡ್ಯ. ಭೋವಿ ಕಾಲೋನಿ, 8 ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 22/23-06-2013ರ ರಾತ್ರಿ ವೇಳೆ ಯಾರೋ ಕಳ್ಳರು ಎಸ್.ಎಫ್. ಸರ್ಕಲ್, ಎಂ.ಸಿ. ರಸ್ತೆ  ಮಂಡ್ಯ ಸಿಟಿ ಶ್ರೀ.ವಿನಾಯಕ ಜನರಲ್ ಸ್ಟೋರ್ ಅಂಗಡಿಯಲ್ಲಿ ಬೀಗ ಮೀಟಿ ಒಳ ಹೋಗಿ ಕ್ಯಾಶ್ ಕೌಂಟರ್ನಲ್ಲಿ ಪಕ್ಕಇರುವ ಬಾಕ್ಸ್ನಲ್ಲಿ ಒಂದು ಬ್ಯಾಗ್ನ ಒಳಗೆ ಪೇಮೆಂಟ್ ಮಾಡಲು ಒಂದು ವಾರದ ವ್ಯಾಪಾರದ ಹಣ ಸುಮಾರು 4 ಲಕ್ಷ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಂದು ಪತ್ತೆಗಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

2. ಕಿರಗಾವಲು ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಬಿ.ಆರ್. ಪುಟ್ಟಸ್ವಾಮಿ, ಕಂದಾಯ ಪರಿವೀಕ್ಷಕರು, ಕಿರುಗಾವಲು ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ದಿನಾಂಕ: 23-06-2013ರಂದು ರಾತ್ರಿ  ವೀರಭದ್ರಸ್ವಾಮಿ ದೇವಸ್ಠಾನದ ಮುಂಬಾಗದ ಬೀಗ ಹಾಗೂ ಹುಂಡಿಯ ಬೀಗವನ್ನು ಮುರಿದು ಸುಮಾರು 8000/ ರೂಗಳನ್ನು ಕಳವು ಮಾಡಿರುತ್ತಾರೆ ಈ ಬಗ್ಗೆ ಸೂಕ್ರ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment