Moving text

Mandya District Police

DAILY CRIME REPORT DATED : 18-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅನಾಥ ಮಗುವಿನ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಪ್ರಕರಣ,  1 ಅಪಹರಣ ಪ್ರಕರಣ,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ ಹಾಗು 6 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ. 

ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 3, 42, 44, ಕೆ.ಎಂ.ಎಂ.ಸಿ.ಆರ್. 1994, ಹಾಗೂ 41(1ಎ) 21(1-5) ಎಂ.ಎಂ.ಆರ್.ಡಿ 1957 ಆಕ್ಟ್ ಕೂಡ 379 ಐ.ಪಿ.ಸಿ.

ದಿನಾಂಕ: 18-06-2013 ರಂದು ಪಿರ್ಯಾದಿ ಮಹದೇವ, ಗ್ರಾಮಲೆಕ್ಕಿಗರು, ಹೊನ್ನಾವರ ವೃತ್ತ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1.ಕೆಎ. 11 / 7535 ರ ಟ್ರ್ಯಾಕ್ಟರ್ ಚಾಲಕ, ರಂಗಸ್ವಾಮಿ ಸಿದ್ದಯ್ಯ, ಹೆಚ್.ಕ್ಯಾತನಹಳ್ಳಿ ಗ್ರಾಮ ಹಾಗು 2. ಕೆ.ಎ 33 ಟಿ 587 ರ ಟ್ರ್ಯಾಕ್ಟರ್ ಚಾಲಕ ಸಂದೀಪ ಬಿನ್. ಮಂಜುಬೋವಿ, ಅದ್ದೀಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 18-06-13 ರಂದು ಹೊನ್ನಾವರ ಗ್ರಾಮದ ಕಂಚಿನಕಲ್ಲು ಜಮೀನಿನ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದರೆಂದು ಫಿರ್ಯಾದಿಯವರಿಗೆ ಬಂದ ಖಚಿತ ಮಾಹಿತಿ ಮತ್ತು ರಾಜಸ್ವ ನಿರೀಕ್ಷಕರವರ ಆದೇಶದ ಮೇರೆಗೆ ಮಧ್ಯಾಹ್ನ 12-30 ಗಂಟೆಗೆ ಸ್ಥಳಕ್ಕೆ ಬೇಟಿ ನೀಡಿದಾಗ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ, ಮತ್ತು ಕಳ್ಳತನದಿಂದ ಮರಳು ತುಂಬುತ್ತಿದ್ದ ಆರೋಪಿಗಳು ಮತ್ತು ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 18-06-2013 ರಂದು ಪಿರ್ಯಾದಿ ಮೇರಿ ಕೋಂ. ಲೇಟ್. ಮುರುಗ, 28 ವರ್ಷ, ತಮಿಳು ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಮುರುಗ ಬಿನ್. ಪಂಜಮೂತರ್ಿ, 36 ವರ್ಷ, ತಮಿಳು ಕಾಲೋನಿ, ಮಂಡ್ಯ ರವರು ಹಾಗು ಜೊತೆಯಲ್ಲಿದ್ದ ಶ್ರೀನಿವಾಸ ಇಬ್ಬರೂ ಎಸ್,ಎಫ್,ಸರ್ಕಲ್ ನ ಪದ್ಮ ಸಾಗರ ಹೋಟೆಲ್ ನ ಪಕ್ಕ ಆದಂತೆ ಬಂದು ಇಳಿದಾಗ ತಕ್ಷಣ ಮೃತ ಕುಸಿದು ಬಿದ್ದು ಮೃತಪಟ್ಟಿದ್ದಾಗಿ ಹಾಗೂ ಮೃತ ಸಕ್ಕರೆ ಕಾಯಿಲೆಯಿಂದ ಜೊತೆಗೆ ಕುಡಿಯುವ ಅಭ್ಯಾಸವಿದ್ದು ಇದರಿಂದ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಕಂಡುಬಂದಿದ್ದು ತಾವುಗಳು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬೇಕಾಗಿ ಅಂತ ಕೊಟ್ಟ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಎ.ಎಸ್ ಕುಮಾರ್ ಸ್ವಾಮಿ ಬಿನ್. ಶಿವಣ್ಣ, ಅಂತರವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕು.ರಾಣಿ ಬಿನ್. ಮಹದೇವಪ್ಪ, 15 ವರ್ಷ ರವರು ಹೊಟ್ಟೆನೋವು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೂಂಡು ಮನೆಯ ಹಿಂಭಾಗದ ಕೊಟ್ಟಿಗೆಯ ಗುಡಿಸಲಿನ ಸರಕ್ಕೆ ಬಟ್ಟೆ ಹಗ್ಗದಿಂದ ಕುತ್ತಿಗೆ ಬಿಗಿದುಕೊಂಡು, ಒದ್ದಾಡುತ್ತಿರುವುದನ್ನು ಪಿರ್ಯಾದಿಯವರು ಕಂಡು ತಕ್ಷಣವೆ 108 ರ ವಾಹನದಲ್ಲಿ ಇವರ ಸಂಬಂಧಿಕರು ಸೇರಿ ಮಳವಳ್ಳಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈ ದಿವಸ ದಿನಾಂಕ:18-6-2013 ರಂದು  ಮದ್ಯಾಹ್ನ 12-30 ಗಂಟೆಯಲ್ಲಿ ಮೃತ ಹೊಂದಿರುತ್ತಾರೆ ಹಾಗೂ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 132/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 18-06-2013ರಂದು ಪಿರ್ಯಾದಿ ಶಿವಮ್ಮ ಕೊಂ. ಲೇಟ್. ಚಿಕ್ಕಮರಿಯಯ್ಯ, ಕೊನ್ನಾಪುರ ರವರು ನೀಡಿದ ದೂರು ಏನೆಂದರೆ ಹಿಂದಿನ 45 ದಿನಗಳಲ್ಲಿ ಕೊನ್ನಾಪುರ ಗ್ರಾಮದಲ್ಲಿ ಪುಷ್ಪ ಕೋಂ. ಬೋರಯ್ಯ, 35ವರ್ಷ ರವರಿಗೆ ಬುದ್ದಿಭ್ರಮಣೆಯಿಂದ ತಲೆಕೆಟ್ಟುದ್ದರಿಂದ ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಏನು ಪ್ರಯೋಜನವಾಗಿಲ್ಲ ಆದ್ದರಿಂದ ಕೊನ್ನಾಪುರದಲ್ಲಿ ಪಿರ್ಯಾದಿಯವರ ವಶದಲ್ಲಿದ್ದು ಪಿರ್ಯಾದಿಯವರು ಮನೆಯಲ್ಲಿ ಇಲ್ಲದಿರುವಾಗ ಮನೆಯಿಂದ ಹೊರಟು ಹೋಗಿದ್ದಾಳೆ. ನಾವು ತುಂಬಾ ಕಡೆ ಹುಡುಕಾಡಿದರು ಪ್ರಯೋಜನವಾಗಿಲ್ಲ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 134/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

      ದಿನಾಂಕ: 18-06-2013ರಂದು ಪಿರ್ಯಾದಿ ಸುರೇಶ ಬಿನ್. ಬಿ.ಜವರೇಗೌಡ, 35ವರ್ಷ, ವಕ್ಕಲಿಗರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ದೊಡ್ಡಪ್ಪನ ಮಗಳು ರಾಧಾ ಬಿನ್. ಲೇಟ್. ಕೆಂಚೇಗೌಡ, ದೊಡ್ಡ ಗಂಗವಾಡಿ ಗ್ರಾಮದ ರವರು ದಿನಾಂಕ:12-06-2013 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅನಾಥ ಮಗುವಿನ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 133/13 ಕಲಂ. 317 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಸಣ್ಣಮ್ಮ ಕೊಂ. ಲೇಟ್. ಬೊಮ್ಮರಾಯಿಗೌಡ, 40ವರ್ಷ, ವಕ್ಕಲಿಗರು, ಮನೆಕೆಲಸ, ಗೆಜ್ಜೆಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 18-06-13ರಂದು ಬೆಳಿಗ್ಗೆ 10-00ಗಂಟೆ ಸಮಯದಲ್ಲಿ ಮಂಚಪಟ್ಟಣದ ಕಾಲುವೆಯ ಏರಿಯ ಮೇಲೆ ಪಿರ್ಯಾದಿಯವರ ಹೋಗುತ್ತಿದ್ದಾಗ ಯಾರೋ ದುರಾತ್ಮರು ಒಂದು ಹೆಣ್ಣು ಮಗುವನ್ನು ಕಾಲುವೆಯಲ್ಲಿ ಇಟ್ಟು ಹೊರಟು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 212/13 ಕಲಂ. 494-506-498(ಎ)-504-149 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ರೇಣುಕ ಕೋಂ. ರವಿ, ದೇಶವಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಪಿರ್ಯಾದಿಯವರ ಗಂಡ 1] ರವಿ ಹಾಗು 2]ಸುರೇಶ, 3]ಅರುಣ, (ಛತ್ರನಹಳ್ಳಿ ಗ್ರಾಮ) 4]ಚಿಕ್ಕತಾಯಿ, 5]ಪುಟ್ಟಚನ್ನ ಹಾಗು 6]ಲಕ್ಷ್ಮಿ, ಎಲ್ಲರೂ ದೇಶವಳ್ಳಿ ಗ್ರಾಮ ರವರುಗಳು ದಿನಾಂಕ: 24-05-2013 ರಂದು 12-00 ಗಂಟೆಯಲ್ಲಿ ಮೇಲ್ಕಂಡವರುಗಳು ನನಗೆ ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡಿ ಕಿರುಕುಳ ನೀಡಿ ನನ್ನ ಗಂಡನಿಗೆ ಬೇರೆ ಹುಡುಗಿಯ ಜೊತೆ ಮದುವೆಯಾಗಿರುತ್ತಾರೆ ಅದ್ದರಿಂದ ನನ್ನ ಗಂಡ ರವಿ, ಹಾಗು ಇತರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 186/13 ಕಲಂ. 143-365 ಕೂಡ 149 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಜಗದೀಶ ಬಿನ್. ಲೇಟ್. ರಾಮಕೃಷ್ಣ, ಮುರುಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಕೆಎ-05-ಎಂ.ಎಂ-5160, ಇನ್ನೋವಾ ಸಿಲ್ವರ್ ಕಾರ್ನಲ್ಲಿ ಬಂದ ಯಾರೋ 5 ರಿಂದ 6 ಜನ ಅಪರಿಚಿತ ಜನರ ತಂಡವೊಂದು ಬಂದು ನಮ್ಮ ಅಣ್ಣ ಸಂಪತ್ಕೃಷ್ಣ ರವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಆಗ ಸ್ಥಳದಲ್ಲಿ ನಾನು ಅಂದರೆ ಜಗದೀಶ ಮತ್ತು ನಮ್ಮ ಸಹಾಯಕ ರಾಜು ಅವರನ್ನು ತಡೆಯಲು ಮುಂದೆ ಹೋದೆವು. ಅಷ್ಟರಲ್ಲಿ ಅವರು ತಮ್ಮ ಕಾರಿನಲ್ಲಿ ಸಂಪತ್ಕೃಷ್ಣ ಅವರನ್ನು ಕೂರಿಸಿಕೊಂಡು ಹೋಗಿರುತ್ತಾರೆ. ಕಾರಿನ ನಂ.ಕೆಎ-05-ಎಮ್ಎಮ್-5160 ಇನ್ನೋವಾ ಸಿಲ್ವರ್ ಕಲರ್ ಕಾರು ಆಗಿದ್ದು ಅಪಹರಣವಾಗಿರುವ ನಮ್ಮ ಅಣ್ಣನನ್ನು ಹುಡುಕಿಸಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 379-188 ಐ.ಪಿ.ಸಿ.

ದಿನಾಂಕ: 18-06-2013 ರಂದು ಪಿರ್ಯಾದಿ ಎಸ್ ರಾಜು, ಗ್ರಾಮ ಲೆಕ್ಕಿಗರು,  ಮಳವಳ್ಳಿ ತಾ|| ಕಛೇರಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 18-06-2013 ರಂದು   ಮದ್ಯಾಹ್ನ 01.30 ಗಂಟೆಯಲ್ಲಿ ಕ್ಯಾತೇಗೌಡನದೊಡ್ಡಿ ಹತ್ತಿರ  ಆರೋಪಿ ಟ್ರಾಕ್ಟರ್ ಸಂಖ್ಯೆ ಎಪಿ-26-ಡಬ್ಲ್ಯು-4608 ರ ಟ್ರಾಕ್ಟರ್/ಮಾಲೀಕರು ಅಕ್ರಮವಾಗಿ ಕಳ್ಳತನ ಮಾಡಿ ಮರಳನ್ನು ಸಾಗಿಸುತ್ತಿದ್ದ ಬಗ್ಗೆ ಪಿರ್ಯಾದು ನೀಡಿದ ಮೇರೆಗೆ ಕೇಸು ನೊಂದಾಯಿಸಲಾಗಿದೆ.

No comments:

Post a Comment