Moving text

Mandya District Police

DAILY CRIME REPORT DATED : 30-05-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-05-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು / ಸರ ಕಳವು ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.    


ವಾಹನ ಕಳವು ಸರ ಕಳವು ಪ್ರಕರಣ :

 1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 253/13 ಕಲಂ. 379 ಐ.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಹೆಚ್.ಬಿ. ಮಂಜುನಾಥ ಬಿನ್. ಲೇಟ್. ಹೆಚ್. ಬೀರಯ್ಯ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ಯಾರೂ ಕಳ್ಳರು ಪಿರ್ಯಾದಿಯವರ ಬಾಬ್ತು ನಂ. ಕೆಎ-54/ಇ-2872 ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ತರಕಾರಿ ತರಲು ಹೋಗಿ ಬಂದು ನೋಡಿದಾಗ ಸ್ಥಳದಲ್ಲಿ ಮೋಟಾರ್ ಸೈಕಲ್ ಇರಲಿಲ್ಲ, ನಂತರ ಹುಡುಕಲಾಗಿ ಎಲ್ಲೂ ಸಿಗಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೌಲ್ಯ ಸುಮಾರು 37000 ರೂ/- ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 351/13 ಕಲಂ. 379 ಐ.ಪಿ.ಸಿ.

ದಿನಾಂಕ: 30-05-2013 ರಂದು ಪಿರ್ಯಾದಿ ಲೋಕೇಶ್, ಎಸ್. ಬಿನ್. ಲೇಟ್. ಶಿವಣ್ಣ. ಪಿ.ಎಂ ವಾಸ-ಮನೆ. ನಂ. 86, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿ-26-05-2013 ರಂದು ಸಾಯಂಕಾಲ 04-30 ಗಂಟೆಯಲ್ಲಿ, ಶ್ರೀ ಗುಂಬಜ್ನ ಪ್ರವೇಶ ದ್ವಾರದ ಬಳಿ ಯಾರೋ ಕಳ್ಳರು ಆ ಜನ ಜಂಗುಳಿಯಲ್ಲಿ ನನ್ನ ಮಗಳ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 352/13 ಕಲಂ. 366(ಎ) ಕೂಡ 34 ಐ.ಪಿ.ಸಿ.

ದಿನಾಂಕ: 30-05-2013 ರಂದು ಪಿರ್ಯಾದಿ ಬಾಲು ಬಿನ್. ಲೇಟ್. ರಾಮಲಿಂಗೇಗೌಡ, ಗಣಂಗೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಯೋಗೇಶ್ ಬಿನ್  ರಾಮಚಂದ್ರ 2] ಸಾಕಮ್ಮ 3] ಶ್ವೇತ ಕೋಂ ಬೋರೇಗೌಡ ಮತ್ತು 4]ಮಹೇಶ ಬಿನ್ ಜವರಯ್ಯನ ರವರುಗಳು ದಿನಾಂಕ: ದಿನಾಂಕ:24-05-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಗಣಂಗೂರು ಗ್ರಾಮ, ಶ್ರೀರಂಗಪಟ್ಟಣ ತಾ. ನಿಂದ ಆರೋಪಿ-1 ಯೋಗೇಶ ಪಿರ್ಯಾದಿಯವರ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಲು ಇತರೆ ಆರೋಪಿಗಳು ಸಹಕರಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ:30-05-2013 ರಂದು ಪಿರ್ಯಾದಿ ದಾಸಶೆಟ್ಟಿ ಬಿನ್. ತಿಮ್ಮಶೆಟ್ಟಿ, ಬಿರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 29-05-2013  ರಂದು ಸಂಜೆ 06-00 ಗಂಟೆಯಲ್ಲಿ ಬೀರುವಳ್ಳಿ ಗ್ರಾಮದ ಪಿರ್ಯಾದಿ ಮನೆಯಿಂದ ಅವರ ಹೆಂಡತಿ ನಾಗಮ್ಮ, 28 ವರ್ಷ ರವರು ತವರು ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಮಾವನ ಮನೆಗೆ ಪೋನ್ ಮಾಡಿ ಕೇಳಲಾಗಿ ಅಲ್ಲಿಗೆ ಹೋಗಿರುವುದಿಲ್ಲ. ಇತರೆ ಸಂಬಂಧಿಕರನ್ನು ವಿಚಾರಿಸಿದರೂ ಸಹ ಸಿಕ್ಕಿರುವುದಿಲ್ಲ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಪುಟ್ಟನರಸಮ್ಮ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 17-04-2013 ರಿಂದ ದಿನಾಂಕ: 29-05-2013 ರ ನಡುವೆ ಮಂಜುನಾಥರವರ ಆಲೆಮನೆ, ತಾಳಶಾಸನ ಗ್ರಾಮದಲ್ಲಿ ಪಿರ್ಯಾದಿಯವರ ಮಗ ಕೃಷ್ಣಶೆಟ್ಟಿ, 55 ವರ್ಷ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೂಕು ರವರು ಆಲೆಮನೆಯಲ್ಲಿ ಒಲೆಗೆ ಬೆಂಕಿ ಹಾಕುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹೊರಗೆ ಬಂದು ಕೃಷ್ಣಶೆಟ್ಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯಗಳಾಗಿ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:30-05-2013 ರಂದು ಪಿರ್ಯಾದಿ ಡಾ: ಸಚಿದೇಶ, ಸಬ್ಬನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 21-4-2013 ರಂದು ಜೀವನದಲ್ಲಿ ಜಿಗುಪ್ಸೆಗೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಸುಟ್ಟ ಗಾಯವಾಗಿ ಸತ್ತಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment