Moving text

Mandya District Police

DETECTION OF TIGER SKIN - PANDAVAPURA PS Cr.No.150/13


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
      ಮಂಡ್ಯ ಜಿಲ್ಲೆ, ದಿನಾಂಕಃ  12-04-2013.

            -ಃ ಪತ್ರಿಕಾ ಪ್ರಕಟಣೆ ಃ-



      ದಿನಾಂಕ:11-04-2013 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಾಂಡವಪುರ ತಾಲ್ಲೋಕು, ಶಿಕಾರಿಪುರದ ಕೆಲವು ವ್ಯಕ್ತಿಗಳು ಪಾಂಡವಪುರದ ಬೇವಿನಕುಪ್ಪೆ ಸಮೀಪ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಬಾತ್ಮಿದಾರರಿಂದ ಖಚಿತ ಮಾಹಿತಿ ದೊರೆತ್ತಿದ್ದು, ಕಲಾಕೃಷ್ಣಸ್ವಾಮಿ, ಡಿ.ಎಸ್.ಪಿ, ಶ್ರೀರಂಗಪಟ್ಟಣರವರ ಮಾರ್ಗದರ್ಶನದಲ್ಲಿ ಪಾಂಡವಪುರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ರವರು ದಿನಾಂಕ:11-04-2013 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಬೇವಿನಕುಪ್ಪೆ ಸಮೀಪ ಹೋಗಿ ನೋಡಲಾಗಿ ಅವರಲ್ಲಿನ ಒಬ್ಬರ ಕೈಯಲ್ಲಿ ಒಂದು ಪ್ಲಾಸ್ಟಿಕ್ಟ್ ಚೀಲ ಇದ್ದು, ಮತ್ತೊಬ್ಬ ನಮ್ಮ ಸಿಬ್ಬಂದಿಯೊಂದಿಗೆ ವ್ಯಾಪಾರ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಸದರಿ ಪಿ.ಎಸ್.ಐರವರು ಸುತ್ತುವರಿದು ಅವರುಗಳನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ತಿಳಿಯಲಾಗಿ ಪ್ಲಾಸ್ಟಿಕ್ ಚೀಲದಲ್ಲಿ  ಹುಲಿ ಚರ್ಮವನ್ನು ಮತ್ತು ಹುಲಿಯ ಉಗುರುಗಳನ್ನು ಹಾಕಿ ಹಿಡಿದುಕೊಂಡಿದ್ದವನ ಹೆಸರು ಮನೋಜ್ ಕುಮಾರ್ ಬಿನ್ ಕಣ್ಣಮಣಿ, 38 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ಹಾಗೂ ಹುಲಿ ಚರ್ಮದ ಬಗ್ಗೆ ವ್ಯಾಪಾರ ಮಾಡುತ್ತಿದ್ದವರು ರವಿ ಬಿನ್ ರಿಪೀಟ್, 51 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ತಿಳಿಸಿದ್ದು, ಅವರ ವಶದಲ್ಲಿದ್ದ ಹುಲಿ ಚರ್ಮದ ಬಗ್ಗೆ ವಿಚಾರ ಮಾಡಿ ವಿವರವಾದ ಮಹಜರ್ ಕ್ರಮ ಜರುಗಿಸಿ, ವಶಕ್ಕೆ ತೆಗದುಕೊಂಡಿರುತ್ತೆ. ಸದರಿ ಆಸಾಮಿಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿಯನ್ನು ತಯಾರಿಸಿ ಪಾಂಡವಪುರ ಠಾಣಾ ಮೊ. ನಂ. 150/2013. ಕಲಂ: 9, 39, 40, 44, 49, ಬಿ & ಸಿ 51, ವನ್ಯ ಪ್ರಾಣೆಗಳ ಸಂರಕ್ಷಣಾ ಕಾಯಿದೆ ಕೂಡ 379 ಐ.ಪಿ.ಸಿ. ರೀತ್ಯ ಕೇಸು ನೊಂದಾಯಿಸಿಕೊಂಡು ತನಿಖೆ ಕೈಗೊಂಡು ಸದರಿ ಆಸಾಮಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.   

       ಸದರಿ ಪ್ರಕರಣವನ್ನು ಪತ್ತೆ ಮಾಡಿದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ  ಶ್ರೀ.ಕೆ.ನರೇಂದ್ರಕುಮಾರ್ ಮತ್ತು ಸಿಬ್ಬಂದಿಯವರುಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ.

No comments:

Post a Comment