Moving text

Mandya District Police

DAILY CRIME REPORT DATED : 26-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-04-2013 ರಂದು ಒಟ್ಟು 39 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1  ವಾಹನ ಕಳವು ಪ್ರಕರಣ,  1 ರಾಬರಿ ಪ್ರಕರಣ,  1 ಅಪಹರಣ ಪ್ರಕರಣ ಹಾಗು 34 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು,  ಅಬಕಾರಿ ಕಾಯಿದೆ ಪ್ರಕರಣಗಳು,  ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 26-04-2013 ರಂದು ಪಿರ್ಯಾದಿ ಎಂ.ವಿ.ಗಿರೀಶ್ ಬಿನ್. ವೆಂಕಟಪ್ಪ, ಮಹದೇಶ್ವರಪುರ ಗ್ರಾಮ, ಮೇಲುಕೋಟೆ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹದೇಶ್ವರ ಪುರ ಗ್ರಾಮ.ಮೇಲುಕೋಟೆ ಹೋಬಳಿ ಪಾಂಡವಪುರ ತಾಲ್ಲೂಕು. ರವರ  ಸ್ಕೂಟರಿಗೆ ಡಿಕ್ಕಿ ಹೊಡೆಸಿದ್ದರಿಂದ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದು ಅವರ ತಲೆಗೆ ಮತ್ತು ಇತರೆ ಕಡೆ ಪೆಟ್ಟಾಗಿ ರಕ್ತಗಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕಃ 26-04-2013 ರಂದು ಮದ್ಯಾಹ್ನ 01-05 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಮನುಷ್ಯ ಕಾಣೆಯಾದ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 190/13 ಕಲಂ. ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 26-04-2013 ರಂದು ಪಿರ್ಯಾದಿ ರಾಮೇಗೌಡ ಬಿನ್. ಲೇ.ಚಿಕ್ಕಸಿದ್ದಪ್ಪ, ವಳೆಗೆರೆಹಳ್ಳಿ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ವಳಗೆರೆಹಳ್ಳಗೆ ಹೋದತ್ತೇನೆಂದು ಹೇಳಿ ಹೋದವಳು ಗಂಡನ ಮನೆಗೂ ಹೋಗದೆ ನಮ್ಮ ಮನೆಗೂ ಬಾರದೆ ಎಲ್ಲಿಯೋ ಹೊರಟು ಹೋಗಿರುತ್ತಾಳೆ. ನಮ್ಮ ಸಂಬಂಧಿಕರ ಮನೆಗಳಲ್ಲೂ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಅವಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 199/13 ಕಲಂ. 379 ಐ.ಪಿ.ಸಿ.

ದಿನಾಂಕ:26-04-2013 ರಂದು ಪಿರ್ಯಾದಿ ಜಿ.ಶಶಿಧರ ಬಸವರಾಜು 2303, 2ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ದಿನಾಂಕ:16-04-2013 ರಂದು ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ಬಳಿ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 18,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


 ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 341-395-506-427 ಐ.ಪಿ.ಸಿ.

ದಿನಾಂಕ:26-04-2013 ರಂದು ಪಿರ್ಯಾದಿ ಬಿ.ಎಲ್ ತೇಜಸ್ವಿ ಕಿರಣ್, ಕಾಳೇನಹಳ್ಳಿ ಫಾರಂ ಹೌಸ್ ರವರು ನೀಡಿದ ದೂರು ಏನೆಂದರೆ ದಿನಾಂಕ: ದಿನಾಂಕ 25/26-04-2013 ರಂದು ದೇವರಾಜುರವರ ಇಟ್ಟಿಗೆ ಫ್ಯಾಕ್ಟರಿ ಹತ್ತಿರ, ಯಾರೋ ಅಪರಿಚಿತ ಐದು ಜನರು ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ಜೆಡಿಎಸ್ ಕಡೆಯವರು ಎಂದು ಮಾತನಾಡಿಕೊಂಡು ಇಬ್ಬರು ಪಿಯರ್ಾದಿಯವರನ್ನು ತಬ್ಬಿ ಹಿಡಿದು -ಕೊಂಡು ಉಳಿದ ಇಬ್ಬರೂ ಪಿಯರ್ಾದಿಯವರ ಜೇಬಿನಲ್ಲಿದ್ದ 11,500 ರು ನಗದು ಹಣ ಮತ್ತು ಸ್ಯಾಮ್ಸಂಗ್ ಕಂಪೆನಿಯ ಮೊಬೈಲ್ ಮತ್ತು ಡ್ರೈವರ್ನ ಹತ್ತಿರ ಇದ್ದ ಮೊಬೈಲನ್ನು ಕಿತ್ತುಕೊಂಡು, ರಿಪೀಸ್ಪಟ್ಟಿಯನ್ನು ಹಿಡಿದುಕೊಂಡು ನಿನ್ನನ್ನು ಇಲ್ಲೆ ಸಾಯಿಸುಬಿಡುತ್ತೆವೆ ಎಂದು ಪ್ರಾಣ ಬೆದರಿಕೆ ಹಾಕಿದರು ಮತ್ತು ಗ್ಲಾಸಿನ ಚೂರಗಳು ಡ್ರೈವರ್ ಮುಖಕ್ಕೆ  ಹಾಗು ಕೈಗೆ ಹೊಡೆದಾಗ ಡ್ರೈವರ್ಗೆ ಸ್ವಲ್ಪ ಪೆಟ್ಟಾಗಿರುತ್ತೆ ಎಂದು ಇತ್ಯಾದಿಯಾಗಿ ದೂರು ನೀಡಿದ್ದು ಪ್ರಕರಣನ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 211/13 ಕಲಂ. 363 ಕೂಡ 34 ಐ.ಪಿ.ಸಿ.

       ದಿನಾಂಕ:26-04-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ. ರಾಜೇಶ, 30 ವರ್ಷ, ಕನ್ನಲಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವ ಅಕ್ಕನ ಮಗಳನ್ನು ದಿನಾಂಕ: 03-04-2013 ರಂದು ಅದೇ ಗ್ರಾಮದ ಆರೋಪಿತರು ಅಪಹರಣ ಮಾಡಿರುತ್ತಾರೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment