Moving text

Mandya District Police

DAILY CRIME REPORT DATED : 25-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-04-2013 ರಂದು ಒಟ್ಟು 44 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು ಹಾಗು 38 ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು, ಅಬಕಾರಿ ಪ್ರಕರಣಗಳು ಹಾಗು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 117/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 25-04-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಚಾಮಲಾಪುರ ಗೇಟ್ ನೇರದ ಎನ್ಹೆಚ್-48 ರಸ್ತೆಯಲ್ಲಿ ಪಿರ್ಯಾದಿ ಕೆ.ಎಸ್.ವಿಜಯ್ಕುಮಾರ್ ಬಿನ್. ಕೆ.ಹೆಚ್.ಶಂಕರ್, 28 ವರ್ಷ, ಒಕ್ಕಲಿಗರು, ಕನ್ನಾಘಟ್ಟ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆಎ-51-ಎಂ.ಡಿ-6721 ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ತಮ್ಮ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಾದಚಾರಿ ರಾಮೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆ ಮತ್ತು ಇತರ ಕಡೆ ಪೆಟ್ಟಾಗಿದ್ದು. ಎ.ಸಿ.ಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಆತನನ್ನು ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದಾಗ ಮೃತನಾಗಿರುತ್ತಾನೆಂದು ವೈದ್ಯಾದಿಕಾರಿಗಳು ತಿಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 210/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 25-04-2013 ರಂದು ಡಿ.ಎನ್. ಶ್ರೀನಿವಾಸಯ್ಯ ಬಿನ್. ಲೇಟ್. ನರಸಿಂಹೇಗೌಡ,  ದುದ್ದ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-04-2013 ರಂದು ಮಂಡ್ಯ ಹೊಳಲು ರಸ್ತೆಯ ಸ್ಮಶಾನದ ಬಳಿ ದೊಡ್ಡಹಳ್ಳದ ಸೇತುವೆ ಹತ್ತಿರ ಆರೋಪಿ ಡಿ.ಪಿ. ನಾಗರಾಜು ಕೆಎ-11-ಕೆ-1112 ರ ಮೋಟಾರ್ ಸೈಕಲ್ ಸವಾರ, ದುದ್ದ ಗ್ರಾಮ, ಮಂಡ್ಯ ತಾ. ರವರು ಊರಿಗೆ ಹೋಗುವಾಗ ಸ್ವಾಮಿಯನ್ನು ಹಿಂಭಾಗ ಕೂರಿಸಿಕೊಂಡು ಮಧ್ಯಾಹ್ನ 02-30 ಗಂಟೆ ಸಮಯದಲ್ಲಿ ಮಂಡ್ಯ- ಹೊಳಲು ರಸ್ತೆಯ ಸ್ಮಶಾನದ ದೊಡ್ಡ ಹಳ್ಳದ ಬಳಿ ಮೋಟಾರ್ ಸೈಕಲ್ಲನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಸೇತುವೆಗೆ ಡಿಕ್ಕಿ ಹೊಡೆದು ಅಪಘಾತದಿಂದಾಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 118/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ:25-04-2013 ರಂದು ಪಿರ್ಯಾದಿ ಶುಕ್ರ ಬಿನ್ ಗಂಗಯ್ಯ, ಇರುಬನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಕವಿತಾ ಬಿನ್. ಶುಕ್ರ, ಸುಮಾರು 20ವರ್ಷ, ಮಾತನಾಡಲು ಬರುವುದಿಲ್ಲ, ವಕ್ಕಲಿಗರು, ವಾಸ ಇರುಬನಹಳ್ಳಿ ಗ್ರಾಮ ಮನೆಯಿಂದ ಹೊರಹೋದವಳು ಕಾಣೆಯಾಗಿರುತ್ತಾಳೆ. ಈಕೆ              [ ಅಂಗವಿಕಲೆ ] ಮಾತನಾಡಲು ಬರುವುದಿಲ್ಲ. ನಮ್ಮ ಸಂಬಂಧಿಕರ ಮನೆಯಲ್ಲಿ ಕೇಳಿದರು ಹುಡುಕಿದರೂ ಸಹ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 197/13 ಕಲಂ. ಮಗು ಕಾಣೆಯಾಗಿದೆ.

     ದಿನಾಂಕ:25-04-2013 ರಂದು ಪಿರ್ಯಾದಿ ಕವಿತ ಕೋಂ. ನಾಗರಾಜು, ಮನೆ.ನಂ.-409, 9ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 24-04-2013 ಬೆಳಿಗ್ಗೆ 09-00 ಗಂಟೆಯಲ್ಲಿ ಪಿರ್ಯಾದಿಯವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಅನುಷಾ ಬಿನ್. ನಾಗರಾಜು, 4 ವರ್ಷ, ದುಂಡು ಮುಖ, ಎಣ್ಣೆ ಗೆಂಪು ಬಣ್ಣ, ಗಡ್ಡದ ಮೇಲೆ ಒಂದು ಕಪ್ಪು  ಕಾರರಳು ಇರುತ್ತೆ. ಮೈಮೇಲೆ ಒಂದು ಲೈಟ್ ಹಸಿರು ಬಣ್ಣದ ಟೀಶರ್ಟ್. ಒಂದು ಕಪ್ಪು ಬಣ್ಣದ ನಿಕ್ಕರ್ ಧರಿಸಿರುತ್ತಾಳೆ ನಾನು ನೋಡಿದ್ದು ನಂತರ 09-00 ಗಂಟೆಯ ಸಮಯಕ್ಕೆ ಮತ್ತೆ ಬಂದು ನೋಡಲಾಗಿ ನನ್ನ ಮಗಳು ಅಲ್ಲಿ ಕಾಣಿಸಲಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2013 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ:25-04-2013 ರಂದು ಪಿರ್ಯಾದಿ ಎ.ಬಿ.ರಾಮು ಬಿನ್. ಬಾಳಾರಯ್ಯ, ಬ್ಯಾಂಕ್ ಬೀದಿ, ಅರಣಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಒಬ್ಬ ಅಪರಿಚಿತ ಹೆಂಗಸು  ಸುಮಾರು 35-40 ವರ್ಷ ರವರು ಬಿಕ್ಷಾಟನೆ ಮಡಿಕೊಂಡು ರಾತ್ರಿ ಹಳೆ ಗ್ರಾಮಪಂಚಾಯ್ತಿ ಕಟ್ಟಡದ ಹೊರಾಂಗಣದಲ್ಲಿ ತನ್ನ ಬಟ್ಟೆಗಂಟಿನೊಂದಿಗೆ ತಂಗಿದ್ದು, ದಿನಾಂಕಃ 25-04-2013 ರಂದು ಬೆಳಿಗ್ಗೆ ಸುಮಾರು 08-30 ಗಂಟೆ ಸಮಯದಲ್ಲಿ ನೋಡಲಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು ಈಕೆ ಯಾವುದೋ ಕಾಯಿಲೆಯಿಂದಲೋ ಅಥವ ಸರಿಯಾಗಿ ಊಟೋಪಚಾರವಿಲ್ಲದೆ, ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:25-04-2013 ರಂದು ಪಿರ್ಯಾದಿ ಮೇರಿ ಕೋಂ. ಅಂತೋನಿರಾಜ್, ತಮಿಳು ಕಾಲೋನಿ, ಮದ್ದೂರು ರವರು ನೀಡಿದ ದೂರು ಏನೆಂದರೆ ಅವರ ಗಂಡ ಅಂತೋನಿರಾಜ್ ರವರು ಹೊಟ್ಟೆನೋವಿನ ಬಾದೆಯನ್ನು ತಾಳಲಾರದೆ ಪಿರ್ಯಾದಿ ಹೋದಾಗ ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡಿದ್ದು ದೇಹವು ನೇತಾಡುತ್ತಿರುತ್ತದೆ. ಕೂಡಲೆ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ತಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:25-04-2013 ರಂದು ಸಂಜೆ 04-10 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment