Moving text

Mandya District Police

DAILY CRIME REPORT DATED : 14-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-04-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಪಹರಣ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 177/13 ಕಲಂ. 343, 366(ಎ) ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಬಿ. ಕುಮಾರ್ ಬಿನ್. ಲೇಟ್. ಬೋರೇಗೌಡ, ನಂ. 1498 5 ನೇ ಕ್ರಾಸ್, ಅಶೋಕ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೇವರಾಜು ಬಿನ್. ದೇವೇಗೌಡ, ವಾಸ ಬೂತನಹೊಸೂರು ಗ್ರಾಮರವರು ಅವರ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಬಲವಂತವಾಗಿ ಇರಿಸಿಕೊಂಡು ಮದುವೆ ಮಾಡಿಕೊಂಡಿರು-ತ್ತಾನೆ.  ಆದ್ದರಿಂದ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆ ಮಾಡಿಕೊಂಡಿರುವ ದೇವರಾಜನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ನೀಡಿದ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತದೆ, 


ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 379 ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕುಮಾರ್.ಎಸ್.ಡಿ. ಬಿನ್. ದೇವೇಗೌಡ, ಕೃಷ್ಣ ನಗರ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ ಬೆಳ್ಳಿ ಪದಾರ್ಥಗಳು ಒಟ್ಟು 300 ಗ್ರಾಂ ಬೆಳ್ಳಿ ಹಾಗೂ 21.500 ರೂ ಹಣ ಕಳ್ಳತನ ಮಾಡಲಾಗಿದೆ. ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯ 36.000/- ರೂಗಳು. ಆದ್ದರಿಂದ ಸದರಿ ವಸ್ತುಗಳನ್ನು ಪತ್ತೆಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕೃಷ್ಣ ಬಿನ್. ಕರಿಯಪ್ಪ, ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಕರಿಯಪ್ಪ ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ರವರು ಕ್ರಿಮಿನಾಶಕವನ್ನು ಔಷದಿ ಎಂದು ಸೇವಿಸಿದ್ದು ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-4-2013 ರಂದು ಸಂಜೆ 06-40ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 244/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 14-04-2013  ರಂದು ಪಿರ್ಯಾದಿ ಪುಷ್ವಲತಾ ಕೊಂ. ಮಹೇಶ, ಮೇಳಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹೇಶ ಬಿನ್. ಲೇಟ್. ರಾಮೇಗೌಡ 52 ವರ್ಷ, ವಕ್ಕಲಿಗರು, ಮೇಳಾಪುರ ಗ್ರಾಮ ರವರು ದಿನಾಂಕ: 17-03-2013 ಬೆಳಿಗ್ಗೆ 11-30 ಗಂಟೆ ಮೇಳಪುರ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 184/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 14-04-2013  ರಂದು ಪಿರ್ಯಾದಿ ರತ್ನಮ್ಮ ಕೋಂ. ಸಿ.ಬಿ. ಮಾಧು, 48 ವರ್ಷ, ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ನಿರಂಜನ್ ಬಿನ್ ಸಿ.ಬಿ. ಮಾಧು, 22 ವರ್ಷ,  ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ದಿನಾಂಕ: 14-04-2013 ರಂದು ಕೆಲಸಕ್ಕೆ  ಹೊಗುತ್ತೇನೆಂದು ಹೇಳಿ  ಹೋದವನು ಇಲ್ಲಿಯವರೆಗೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂಧಿಕರ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 498(ಎ)-324 ಐ.ಪಿ.ಸಿ.

ದಿನಾಂಕ: 14-04-2013  ರಂದು ಪಿರ್ಯಾದಿ ಪುಟ್ಟಮ್ಮ, ಮಾದರಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿತ ಅವರ ಗಂಡ ತಮ್ಮಯ್ಯ @ ಶಿವರಾಜು ಬಿನ್.  ಮಾಳಗಯ್ಯ,, 38 ವರ್ಷ, ಪರಿಶಿಷ್ಟಜಾತಿ, ಮಾದರಹಳ್ಳಿ ಗ್ರಾಮ, ಮದ್ದೂರು ತಾ. ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ: 14-04-2013 ರಂದು ಬೆಳಿಗ್ಗೆ 08-00  ಗಂಟೆ ಸಮಯದಲ್ಲಿ ಗಲಾಟೆ ತೆಗೆದು ಬಿಡಲು ಬಂದ ದೇವಿರಮ್ಮನವರಿಗೆ ದೊಣ್ಣೆಯಿಂದ ಹೊಡೆದು ಗಲಾಟೆಮಾಡಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 143-323-324-504-506-498(ಎ) ಕೂಡ 149 ಐ.ಪಿ.ಸಿ. 3 ಮತ್ತು 4 ಡಿ.ಪಿ. ಕಾಯಿದೆ. 

 ದಿನಾಂಕ: 14-04-2013  ರಂದು ಪಿರ್ಯಾದಿ ಎಂ.ವಿ. ವಿಧ್ಯಾ, ಅಗಸನಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ಎ.ಬಿ.ವಿಜಯ್ ಇತರೆ 13 ಜನರು ಎಲ್ಲರೂ ಅಗಸನಪುರ ಗ್ರಾಮ ಹಾಗು ಬೆಂಗಳೂರು ವಾಸಿಗಳು ಪಿರ್ಯಾದಿಯವರಿಗೆ ಹೆಚ್ಚಿನ ವರದಕ್ಷಿಣೆ ಹಣವನ್ನು ತಂದು ಕೊಡುವಂತೆ ಮನೆಯಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಗಲಾಟೆ ಮಾಡುತ್ತಿದ್ದಾಗ ಪಂಚಾಯ್ತಿಗೆ ಬಂದಿದ್ದ ಅವರ ಮನೆಯವರಿಗೆ ಕಲ್ಲು. ದೊಣ್ಣೆ. ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿ ಹೆಚ್ಚಿನ ವರದಕ್ಷಿಣೆಯನ್ನು ತರದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೆವೆ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment