Moving text

Mandya District Police

DAILY CRIME REPORT DATED : 11-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ,  1 ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 28 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304 [ಎ] ಐಪಿಸಿ ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 11-04-2013 ರಂದು ಬೆಳಗಿನ ಜಾವ 04-15 ಗಂಟೆಯಲ್ಲಿ ಬಿ.ಜಿ.ನಗರದ ಮಾನಸ ಹೋಟೆಲ್ ನ, ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಒಬ್ಬ ಅಪರಿಚಿತ ಗಂಡಸಿಗೆ ಅಪಘಾತ ಮಾಡಿ ಹೊರಟು ಹೋಗಿದ್ದು, ಅಪರಿಚಿತ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದಾಗಿ ಮಾಹಿತಿ ಪಡೆದ 108 ವಾಹನದವರು, ಸದರಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಕೋರಿಕೊಂಡ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಇದೇ ದಿನ ಅಂದರೆ ದಿನಾಂಕಃ 11-04-2013 ರಂದು ಬೆಳಿಗ್ಗೆ 11-00ಗಂಟೆಯಲ್ಲಿ ಮೃತನಾದ ಮೇರೆಗೆ, ಮೃತನ ಹೆಸರು ವಿಳಾಸ ಹಾಗೂ  ವಾರಸುದಾರರ ಪತ್ತೆಮಾಡುವ ಸಲುವಾಗಿ ಸದರಿ ಶವವನ್ನು ಆಸ್ಪತ್ರೆಯಲ್ಲಿ ಇಟ್ಟಿದ್ದು ನಂತರ ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆರವರು ವಾಪಾಸ್ ಪೊಲೀಸ್ ಠಾಣೆಗೆ ಬಂದು ಮಧ್ಯಾಹ್ನ 12-00 ಗಂಟೆಯಲ್ಲಿ ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.


ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 169/13 ಕಲಂ. 143, 176, 201  ಐಪಿಸಿ & 174[ಸಿ] ಸಿಆರ್ಪಿಸಿ ಕೂಡ 149 ಐ.ಪಿ.ಸಿ.

ದಿನಾಂಕ: 11-04-2013 ರಂದು ಪಿರ್ಯಾದಿ ಎಂ.ಸಿ.ಮಂಜುನಾಥ, ಸಿಪಿಸಿ 573, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ದಿನಾಂಕ:11-04-2013 ಸುಂದರೇಶ್ ಮನೆಯಲ್ಲಿ 1ನೇ ಕ್ರಾಸ್, ಹೊಸಹಳ್ಳಿ, ಆರೋಪಿಗಳಾದ ಸುಂದರೇಶ, ವಸಂತ, ತಿಬ್ಬಣ್ಣ, ರೇವಣ್ಣ, ಮೂಗೂರ, ಪುಟ್ಟತಾಯಮ್ಮ ಹಾಗು ಬೋರೆಗೌಡ, ಹೊಸಹಳ್ಳಿ ಇತರರುಗಳು ಉದ್ದೇಶಪೂರ್ವಕವಾಗಿ ಎಲ್ಲರು ಸೇರಿಕೊಂಡು ಸತ್ತದೇಹವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಗುಪ್ತ ರೀತಿಯಿಂದ ಬೆಂಕಿಯಿಂದ ಶವವನ್ನು ಸುಟ್ಟುಹಾಕಿರುತ್ತಾರೆ. ಆದ್ದರಿಂದ ಆರೋಪಿತರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಇತ್ಯಾದಿಯಾಗಿ ನೀಡಿದ ದೂರು.


ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 504,323, 324, 279, 427, ಕೂಡ 34, ಐ.ಪಿ.ಸಿ. ಹಾಗೂ ಕಲಂ, 3 ಕ್ಲಾಸ್ (1) & (10) ಎಸ್.ಸಿ/ಎಸ್.ಟಿ ಕಾಯಿದೆ. 1989.

      ದಿನಾಂಕ: 11-04-2013 ರಂದು ಪಿರ್ಯಾದಿ ಜಿ.ಜಿ.ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಲೋಕೇಶ. ಪುಟ್ಟಸ್ವಾಮಿ ದಿನೇಶ ಹಾಗು ಲಿಂಗರಾಜು ಹೂತಗೆರೆ ಗ್ರಾಮ ರವರುಗಳು ನಮ್ಮ ಕಾರಿಗೆ ಡಿಕ್ಕಿ ಮಾಡಿದ್ದು, ಸದರಿ ಕಾರನ್ನು ನಿಲ್ಲಿಸಿ ಕೇಳಲು ಓದಾಗ ಅವಾಚ್ಯ ಶಬ್ದದಿಂದ ಬೈಯುತ್ತಿದ್ದು, ನಾನು ಏಕೆ ಈ ರೀತಿ ಬೈಯುತ್ತಿದ್ದೀಯ ಎಂದು ಕೇಳಿದ್ದಕ್ಕೆ ಏನೋ ಬೋಳಿ ಮಗನೆ ನಾನು ಅದೇ ರೀತಿ ಬೈಯುವುದು ಅಂತ ಹೇಳಿ ಪುಟ್ಟಸ್ವಾಮಿ ನನ್ನ ಕತ್ತಿನ ಪಟ್ಟಿಯನ್ನು ಹಿಡಿದು. ಕೆಡವಿಕೊಂಡು ಕೈಯಿಂದ ಕಾಲಿನಿಂದ ಒದ್ದನು ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ : 

ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 11-04-2013 ರಂದು ಪಿರ್ಯಾದಿ ಚೇತನಾ ಕೋಂ ಸುಬ್ರಮಣ್ಯ ಭಟ್, 35 ವರ್ಷ, ರಾಮಕೃಷ್ಣನಗರ, ಮೈಸೂರು ಸಿಟಿ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ:11-04-2013 ರಂದು ಮಹದೇವಪುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಭಾಗ್ಯರವರು ಕಾವೇರಿ ನದಿಯ ಬಳಿ ಫೋಟೋ ತೆಗೆಸುತ್ತಿದ್ದಾಗ ಆಕಸ್ಮಿಕವಾಗಿ ಭಾಗ್ಯರವರು ಕಾವೇರಿ ನದಿಗೆ ಬಿದ್ದುಹೋದಾಗ ರವಿ ರಕ್ಷಿಸಲು ಹೋಗಿ ಕಾವೇರಿ ನದಿಗೆ ಬಿದ್ದು ಹೋಗಿದ್ದು, ಭಾಗ್ಯ ಮತ್ತು ರವಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment