Moving text

Mandya District Police

Daily DCR Dated:18-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-03-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳ್ಳತನ ಪ್ರಕರಣಗಳು,  1 ರಾಬರಿ ಪ್ರಕರಣ,  1 ಅತ್ಯಾಚಾರ ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 15 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 


ಕಳ್ಳತನ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ನಂಜೇಗೌಡ ಬಿನ್. ಈರೇಗೌಡ, 65 ವರ್ಷ, ಹಾಲುಮತ, ವ್ಯವಸಾಯ, ಚಿಕ್ಕತಾರಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಪಿರ್ಯಾದಿಯ ಮನೆಯ ಹಿಂಬಾಗದ ಕೊಟ್ಟಿಗೆಯ ಬಾಗಿಲ ಚಿಲಕವನ್ನು ಯಾವುದೋ ಆಯುಧದಿಂದ ತೆಗೆದು ಮನೆಯ ಒಳಗಡೆ ಬಂದು ಮನೆಯಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಅದರಲ್ಲಿದ್ದ ಚಿನ್ನದ ಹಾಗೂ ಬೆಳ್ಳಿಯ ಒಡವೆಗಳನ್ನು ಹಾಗೂ 2000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಬಿ.ಕೆ.ಲಿಂಗೇಗೌಡ, ಪ್ರಾಚಾರ್ಯರು, ಸ.ಪ.ಪೂ.ಕಾಲೇಜು, ಕದಬಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿಃ 16-03-2013 ರಾತ್ರಿ ವೇಳೆ ಅಥವಾ ದಿನಾಂಕಃ 17-03-2013 ರ ಹಗಲು ಅಥವಾ ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಮೌಲ್ಯ ಸುಮಾರು 68000/- ರೂ.ಗಳಾಗಿರುತ್ತದೆ. ಕೊಠಡಿಯ ಬೀಗವನ್ನು ಹೊಡೆದು ಕಂಪ್ಯೂಟರ್ ಉಪಕರಣಗಳನ್ನು ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಾಗಿಸಲಾಗಿದೆ.


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಹೆಚ್.ಎನ್.ಪ್ರೇಮಕುಮಾರಿ ಕೋಂ. ಸಿ.ಕೆ.ಚಂದ್ರ, ಶಿಕ್ಷಕಿ, ಶಿಶುಪಾಲನಾ ಕೇಂದ್ರ, ಶ್ರೀ ಗೀತಾ ಪ್ರೌಢಶಾಲೆ ಆವರಣ, ಶಂಕರನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾತ್ರಿವೇಳೆಯಲ್ಲಿ ಯಾರೋ ಕಳ್ಳರು ಸದರಿ ಶಿಶುಪಾಲನಾ ಕೇಂದ್ರದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಜಖಂಗೊಳಿಸಿ ಒಳ ಪ್ರವೇಶಿಸಿ ಒಳಗಡೆ ಇಟ್ಟಿದ್ದ ಭಾರತ್ ಕಂಪನಿಯ ಒಂದು ಭಾರತ್ ಗ್ಯಾಸ್ ಸಿಲಿಂಡರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 1500/- ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಾಬರಿ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 392 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಎನ್.ಶಾರದ ಕೋಂ. ಕೃಷ್ಣೇಗೌಡ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ ಸೈಕಲ್ನ ಹಿಂಭಾಗ ಮತ್ತು ಮುಂಭಾಗ ನಂಬರ್ ಇರುವುದಿಲ್ಲ. ಮೇಲ್ಕಂಡ ಚಿನ್ನದ ಸರವು 50 ಗ್ರಾಂ ತೂಕದ ಅಂಜಲಿ ಕಟಿಂಗ್ ಮಾದರಿಯ ಎರಡೆಳೆ ಚಿನ್ನದ ಮಾಂಗಲ್ಯ ಸರವಾಗಿದ್ದು, ಇದರಲ್ಲಿ 5 ಗ್ರಾಂ ತೂಕದ ಚಿನ್ನದ ಮಾಂಗಲ್ಯ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು, ಮಾಂಗಲ್ಯದ ಅಕ್ಕಪಕ್ಕದಲ್ಲಿ ಹವಳ ಮತ್ತು ಕರಿಮಣಿ ಇರುತ್ತದೆ ತನ್ನ ಚಿನ್ನದ ಚೈನ್ ಅನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅತ್ಯಾಚಾರ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 376-417 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ನೀಡಿದ ದೂರು ಏನೆಂದರೆ ಆರೋಪಿ ಮಂಜು ಬಿನ್. ಗಣೇಶ್, ಕಾವೇರಿಪುರ ಗ್ರಾಮ, ಪಾಂಡವಪುರ ತಾಲ್ಲೂಕು ರವರು ಮಂಜು ಎಂಬುವನು ಮದ್ಯಾಹ್ನ 01-00 ಗಂಟೆಯ ಸಮಯದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ಬಂದು ನಾನು ನಿನ್ನನು ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿ ಮಾತನಾಡುತ್ತಿದ್ದಾಗ ನನ್ನನ್ನು ಹಿಡಿದುಕೊಂಡು ಪುಸಲಾಯಿಸಿ ಬಲವಂತದಿಂಧ ನನ್ನನ್ನು ಸಂಬೋಗ ಮಾಡಿ ನಾನು ಅಳುತ್ತಾ ಕುಳಿತ್ತಿದ್ದಾಗ ನೀನು ಯಾರಿಗೂ ಹೇಳಬೇಡ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಪುಸಲಾಯಿಸಿ ಆಗಿದ್ದಾಗ್ಗೆ ನಮ್ಮ ಮನೆಗೆ ಬಂದು ಬಲವಂತವಾಗಿ ಸಂಬೋಗ ಮಾಡಿ ಹೋಗುತ್ತಿದ್ದನು. ದಿನಾಂಕ: 17-03-2013 ರಂದು ಮಂಜುವನ್ನು ಕರೆದು ಈಗ ನಾನು 7 ವರೆ ತಿಂಗಳ ಗರ್ಭಿಣಿಯಾಗಿದ್ದೀನಿ ಮದುವೆ ಮಾಡಿಕೊ ಎಂದು ಕೇಳಿದಾಗ ನನಗೂ ನಿನಗೂ ಏನು ಸಂಬಂದ ವಿಲ್ಲಾ ಎಂದು ನಿರಾಕರಿಸಿರುತ್ತಾನೆ ಆದ್ದರಿಂದ ಈತನ ಮೇಲೆ ಕಾನೂನು ರೀತಿ ಕ್ರಮ ತೆಗೆದೆಕೊಳ್ಳಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ. ನಂ. 23/13 ಕಲಂ. 366(ಎ) ಐ.ಪಿ.ಸಿ.


ದಿನಾಂಕ: 18-03-2013 ರಂದು ಪಿರ್ಯಾದುದಾರ ಗಮ್ಮೇಗೌಡ ಬಿನ್. ಲೇಟ್. ದಾಸೇಗೌಡ, ಒಕ್ಕಲಿಗ, ವ್ಯವಸಾಯ, ಸೊಳ್ಳೆಪುರ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 18-03-2013 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿರ್ಯಾದಿಯ ಮಗಳನ್ನು ಯಾರೋ ಸೊಳ್ಳೆಪುರ ಬಸ್ ನಿಲ್ದಾಣದಲ್ಲಿ ಪುಸಲಾಯಿಸಿ ಅಥವಾ ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ : 

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 18-03-2013 ರಂದು ಪಿರ್ಯಾದುದಾರ ಮರಿಯಪ್ಪ ಬಿನ್. ರಾಜೇಂದ್ರನ್, ಕ್ರಿಶ್ಚಿಯನ್, ತಮಿಳು ಕಾಲೋನಿ, ಬೆಸಗರಹಳ್ಳಿ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ 18-03-2013 ರಂದು ಪಿರ್ಯಾದಿ ಅಣ್ಣನ ಮಗಳು ಕಾಲೇಜಿಗೆ ಹೋಗಿ ಬರುತ್ಥೇನೆಂದು ಮಂಡ್ಯಕ್ಕೆ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ನೆಂಟರು, ಸ್ಣೇಹಿತರ ಮನೆಗಳಲ್ಲಿ ಹುಡುಕಲಾಗಿ ಸಿಕ್ಕಿರುವುದಿಲ್ಲ ಆದ್ದರಿಂದ ಕಾಣೆಯಾದ ನನ್ನ ಅಣ್ಣನ ಮಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment