Moving text

Mandya District Police

DAILY CRIME REPORT DATED : 26-03-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-03-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಮನೆ ಕಳ್ಳತನ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಕ್ರಮ ಗ್ರಾಸ್ ರಿಫೀಲಿಂಗ್ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ, 123/13 ಕಲಂ. 379 ಐ.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ಎಸ್.ಕೆ. ತಮ್ಮೇಗೌಡ ಬಿನ್ ಲೇ|| ಕರಿಯಪ್ಪ ಸಾದೊಳಲು ತಾ||. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಪಿರ್ಯಾದಿಯವರ ಮೋಟಾರ್ ಸೈಕಲ್ ನಂ. ಕೆಎ11 ಯು-3307 ಹೀರೋ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ದಿನಾಂಕಃ25-03-2013ರ ಸಂಜೆ 04-30 - 06-00ರ ಅವಧಿಯಲ್ಲಿ ಮದ್ದೂರು ಟೌನ್  ಸಕರ್ಾರಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಸಂಜೆ 04-30 ಗಂಟೆಯಿಂದ 06-00 ಗಂಟೆಯವರೆಗೆ ಅವಧಿಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 78/13 ಕಲಂ. 304 (ಬಿ)-302 ಕೂಡ 34 ಐ.ಪಿ.ಸಿ

ದಿನಾಂಕ: 26-03-2013 ರಂದು ಪಿರ್ಯಾದಿ ಲಕ್ಷ್ಮಣ ಬಿನ್ ಗಿರಿಯಯ್ಯ, 25 ವರ್ಷ, ಪರಿಶಿಷ್ಟ ಜನಾಂಗ ರವರುಗಳು ಆರೋಪಿಗಳಾದ 1. ಶಂಕರ, 2. ಪುಟ್ಟಲಕ್ಷ್ಮಮ್ಮ, ವಾಸ-ಬೋರೆಗೌಡರ ವಠಾರ, ಆಲಬೂಜನಹಳ್ಳಿ ಗ್ರಾಮ ರವರುಗಳು ಮೃತಳಿಗೆ ನಿಮ್ಮ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರೆ ಕೊಲೆ ಮಾಡುತ್ತೆವೆ ಎಂದು ಹಿಂಸೆ ಕಿರುಕುಳ ನೀಡುತ್ತಿದ್ದು ಹೆಚ್ಚಿನ ವರದಕ್ಷಿಣೆ ಹಣವನ್ನು ತರಲಿಲ್ಲವೆಂಬ ಕಾರಣಕ್ಕೆ  ದಿನಾಂಕ ಃ 25-03-2013 ರಂದು ಸಂಜೆ 05-45 ಗಂಟೆಗೂ ಮುನ್ನ ಆರೋಪಿಗಳು ತಮ್ಮ ವಾಸದ ಮನೆಯಲ್ಲಿ ಮೃತೆಯನ್ನು ಕೊಲೆ ಮಾಡಿ ವೇಲ್ನಿಂದ ನೇಣು ಬಿಗಿದು ಪ್ಯಾನಿಗೆ ನೇತು ಹಾಕಿರುವುದಾಗಿದೆ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನೆ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 454, 380 ಐ.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಲೇಟ್. ಕೆಂಪೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು   ಚಿನ್ನದ ಆಭರಣಗಳ ಒಟ್ಟು ತೂಕ 121 ಗ್ರಾಂ ಆಗಿರುತ್ತದೆ. ಕಳ್ಳತನವಾಗಿರುವ ಚಿನ್ನದ ಆಭರಣಗಳು ಮತ್ತು ನಗದು ಹಣ ಸೇರಿ ಒಟ್ಟು ಬೆಲೆ 3,90,000-00 ರೂ.ಗಳಾಗಿರುತ್ತದೆ. ಕಳ್ಳತನವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ರಾಮೇಗೌಡ ಬಿನ್. ನಿಂಗೇಗೌಡ, ಅಂಚೆಮುದ್ದನಹಳ್ಳಿ ಗ್ರಾಮರವರು ನೀಡಿದ ದೂರು ಏನೆಂದರೆ ಸತ್ತೇಗೌಡಹಲಸಿನ ಮರದಲ್ಲಿ ಸೊಪ್ಪನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಕೆಳಕ್ಕೆ ಬಿದ್ದು ಎದೆ ಕೈಕಾಲುಗಳಿಗೆ ಜೋರಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 26-03-2013 ರಂದು ಪಿರ್ಯಾದಿ ಮಹಮ್ಮದ್ ಸುಹೇಲ್ ಬಿನ್. ಮೊಕ್ಬುಲ್ ಅಹಮದ್, ಸಾದತ್ ನಗರ, 2 ನೇ ಕ್ರಾಸ್, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಫಾತಿಮ ಅಯಿಷಾ, 25 ವರ್ಷ, ಹಾಗು ಮಗು ಮಹಮದ್ ಯೇನ್, 2 ವರ್ಷ ರವರುಗಳು ದಿನಾಂಕ: 06-03-2013  ರ ಸಂಜೆ 05-45 ಗಂಟೆಯಲ್ಲಿ   ನನಗೆ ತಿಳಿಸದೆಯೆ ಮನೆಗೆ ಬೀಗ ಹಾಕಿಕೊಂಡು ಎಲ್ಲೋ ಹೊರಟುಹೋಗಿರುತ್ತಾಳೆ. ಕಾಣೆಯಾಗಿರುವ ನನ್ನ ಹೆಂಡತಿಯನ್ನು ನಾನು ಎಲ್ಲ ಕಡೆಗಳಲ್ಲಿ ಹಾಗು ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹೋಗಿ ಹುಡುಕಾಡಲಾಗಿ ಆಕೆ ಪತ್ತೆಯಾಗಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 26-03-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ, ಮರಿದೇವಯ್ಯ, ರಾಮನಾಥ ಮೋಳೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 24-03-2013 ರಂದು ಬೆಳಿಗ್ಗೆ  06-00 ಗಂಟೆಯಲ್ಲಿ, ಮಂಡ್ಯ ಜಿಲ್ಲಾ ಆಸ್ಪತ್ರೆಯಿಂದ ಮರಿದೇವಯ್ಯ ಬಿನ್. ಲೇ|| ಮರಿಗೋಳಯ್ಯ, 50 ವರ್ಷ, ರವರು ತಮ್ಮ ಗಂಡನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು      ದಿನಾಂಕ: 23-03-2013 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಸೇರಿಸಿದ್ದರು ಕಾಪಿ ತರಲೆಂದು ಕ್ಯಾಂಟೀನ್ ಗೆ ಹೋಗಿದ್ದು ವಾಪಸ್ಸು ಬಂದು ನೋಡಲಾಗಿ ಅಲ್ಲಿ  ನನ್ನ ಪತಿಯವರು ಇರಲಿಲ್ಲಾ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಗ್ರಾಸ್ ರಿಫೀಲಿಂಗ್ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 385 ಐ.ಪಿ.ಸಿ.

      ದಿನಾಂಕ: 26-03-2013ರಂದು ಪಿರ್ಯಾದಿ ನಿರಂಜನ, ಪಿ.ಎಸ್.ಐ. ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 26-03-2013 ರಂದು ಮಂಡ್ಯ ಸಿಟಿ. ಲಕ್ಷ್ಮೀಜನಾರ್ಧನ ದೇವಸ್ಥಾನದ ಪಕ್ಕದಲ್ಲಿ ಆರೋಪಿಗಳಾದ 1)ದೇವರಾಜು 2) ಜಯಂತ್ ರವರುಗಳು ಯಾವುದೇ ಪರವಾನಿಗೆ ಇಲ್ಲದೆ ಖಾಲಿ 25 ಸಿಲಿಂಡರ್ ಗೆ ಅಕ್ರಮವಾಗಿ ಗ್ಯಾಸ್ ತುಂಬಿಸುತ್ತಿದ್ದರ ಮೇರೆಗೆ  ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment