Moving text

Mandya District Police

DAILY CRIME REPORT DATED : 25-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-03-2013 ರಂದು ಒಟ್ಟು 54 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳ್ಳತನ ಹಾಗು ಸಾಗಾಣಿಕೆ ಪ್ರಕರಣ ಹಾಗು 51 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 143-147-148-341-324-307-384 ಕೂಡ 149 ಐ.ಪಿ.ಸಿ.

ದಿನಾಂಕ 25-03-2013 ರಂದು ಪಿರ್ಯಾದಿ ಮಲ್ಲೇಶ ಬಿನ್. ಪುಟ್ಟೇಗೌಡ, ಮಾರ್ಗೋನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜೇಗೌಡ ಎಂಬುವವರು ತಮ್ಮ ಬಾಬ್ತು ಕೆಎ-54-ಇ-3764 ರ ಬೈಕಿನಲ್ಲಿ ಬರುವಾಗ ಆರೋಪಿತರುಗಳಾದ 1] ಶಿವಣ್ಣ 2] ರವಿ  3] ಗಿರೀಶ 4] ನಾಗೇಶ, 5] ಕರಿಕಾಳೇಗೌಡ 6]ಸಣ್ಣೇಗೌಡ  ಎಲ್ಲರೂ ಮಾರ್ಗೋನಹಳ್ಳಿ   ಗ್ರಾಮ ರವರುಗಳು ತೆಂಗಿನ ಮರಕ್ಕೆ ತಂತಿಯನ್ನು ಕಟ್ಟಿ ಕೆಳಕ್ಕೆ ಕೆಡವಿ ಗಾಯಾಳುವಿಗೆ ತಲೆಗೆ ಮಂಡಿಗೆ ಮೈಕೈಮೇಲೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸುತ್ತಿರುವಾಗ ಪಿರ್ಯಾದಿ ಮಲ್ಲೇಶ ಹಾಗೂ ಇತರೆ ಇಬ್ಬರೂ ಬಂದು ಜಗಳ ಬಿಡಿಸಿದ್ದು ಆರೋಪಿರತರುತಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲು ಮಾಡಿದೆ. 



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 498[ಎ]-323-506 ಕೂಡ 149 ಐಪಿಸಿ ಕೂಡ 3 & 4 ಡಿ.ಪಿ. ಅಕ್ಟ್.

ದಿನಾಂಕ 25-03-2013 ರಂದು ಪಿರ್ಯಾದಿ ನಾಸೀರಾಬಾನು, ನಾಲಬಂದವಾಡಿ, ರೈಲ್ವೆ ಸ್ಟೇಷನ್ ರಸ್ತೆ, 3ನೇ ಕ್ರಾಸ್, ಮಳವಳ್ಳಿಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಆಸೀಫ್ ಹಾಗು ಶಾಹೀನಾ, ಕಲೀಂ ಪಾಷ, ರಿಜ್ವಾನ್, ಅಬ್ದುಲ್ ಅಜೀಜ್, ಎಲ್ಲರೂ ಪೇಟೆ ಮುಸ್ಲಿಂ ಬ್ಲಾಕ್, ಮಳವಳ್ಳಿ ಟೌನ್ ರವರುಗಳು ಪಿರ್ಯಾದಿಯವರಿಗೆ ನಿಮ್ಮ ತಾಯಿ ಮನೆಯಿಂದ ಹೆಚ್ಚಿನ ವರದಕ್ಷಿಣಿ ಹಣ ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟು, ದೊಣ್ಣೆಯಿಂದ ಹೊಡೆದು, ಸೀಮೆ ಎಣ್ಣೆಹಾಕಿ ಸುಡಲು ಬಂದಿದ್ದರು, ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.



ಅಕ್ರಮ ಮರಳು ಕಳ್ಳತನ ಹಾಗು ಸಾಗಾಣಿಕೆ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 379 ಐಪಿಸಿ ಕೂಡ 3 & 4 ಎಂ.ಎಂ.ಅರ್.ಡಿ. ಆಕ್ಟ್.

ದಿನಾಂಕ 25-03-2013 ರಂದು ಪಿರ್ಯಾದಿ ಮಮತ ತಹಸಿಲ್ದಾರ್ ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ರಮೇಶ ಬಿನ್ ಹೊನ್ನಗಿರಿಗೌಡ  ಹನಗನಹಳ್ಳಿ, 2) ನಂಜುಡ ಬಿನ್ ಕೃಷ್ಣಶೆಟ್ಟಿ, ಬಸರಾಳು, 3)ಬಾಬು ಬಿನ್. ಚನ್ನೇಗೌಡ, ಬಸರಾಳು, ಮಂಡ್ಯ ತಾ. ರವರು ದಿನಾಂಕಃ 25/26-03-13 ರಂದು ಬೆಳಿಗ್ಗೆ 01:00 ಗಂಟೆಯಲ್ಲಿ ಸಮಯದಲ್ಲಿ ಪಿರ್ಯಾದಿ ಹಾಗು ಅವರ ಸಿಬ್ಬಂದಿಗಳು ಗಸ್ತಿನಲ್ಲಿ ಇರುವಾಗ ನರಗಲು ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಜೆಸಿಬಿಯಿಂದ ಕದ್ದು ಮರಳನ್ನು ಟ್ರಾಕ್ಟರ್ಗೆ ತುಂಬುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿ ಹಾಗು ಸಿಬ್ಬಂದಿಯವರು ನರಗಲು ಸರ್ಕಾರಿ ಹಳ್ಳಕ್ಕೆ ಹೋಗಿ ನೋಡಲಾಗಿ ಕೆಎ-18-ಟಿ-3352 /3353 ರ ಟ್ರಾಕ್ಟರ್ ನ ಹತ್ತಿರ ಜೆಸಿಬಿ ನಂಬರ್ ಕೆಎ-02-ಎಂಎಸ್-8982 ವಾಹನಗಳನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಕದ್ದು ಮರಳನ್ನು ತುಂಬುತ್ತಿದ್ದು ನಮ್ಮನ್ನು ನೋಡಿ ಅಸಾಮಿಗಳು ಓಡಲು ಪ್ರಯತ್ನಿಸಿದ್ದು ತಕ್ಷಣ ನಾನು ಹಾಗು ಸಿಬ್ಬಂದಿಯವರು ಸದರಿಯವರನ್ನು ಹಿಡಿದು ಮುಂದಿನ ಕ್ರಮ್ಕಕಾಗಿ ಬಸರಾಳು ಪೊಲೀಸ್ ಠಾಣೆಗೆ ವರದಿ ನೀಡಿದ್ದು. ಪ್ರಕರಣ ದಾಖಲಿಸಿರುತ್ತೆ.

No comments:

Post a Comment