Moving text

Mandya District Police

DAILY CRIME REPORT DATED : 14-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ವಾಹನ/ಸಾಮಾನ್ಯ ಕಳವು ಪ್ರಕರಣಗಳು, 1 ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ,   2 ಯು.ಡಿ.ಆರ್. ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ರಾಬರಿ ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

 
ವಾಹನ/ಸಾಮಾನ್ಯ ಕಳವು ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 379 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಚಿಕ್ಕೇಗೌಡ ಬಿನ್ ನಂಜೇಗೌಡ, ಕಡಿಲುವಾಗಿಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:13-03-2013ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಹತ್ತಿರ ಇಟ್ಟಿದ್ದ ಜನರೇಟರ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 75/13 ಕಲಂ. 379 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಬಿ.ರಾಮು ಬಿನ್. ಬೋರೆಗೌಡ, ಹೇಮಾವತಿ ಬಡಾವಣೆ, ಕೆ.ಆರ್.ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಹೀರೊ ಹೊಂಡಾ ಸ್ಪಂಡರ್ ಪ್ಲಸ್, ಮೋಟಾರ್ ಸೈಕಲ್ ನಂ. ಕೆಎ-54-ಇ-631 ರ ಬೈಕನ್ನು ನಿಲ್ಲಿಸಿ ಅಂಗಡಿ ಸಾಮಾನು ತರಲು ಹೋಗಿದ್ದು ಅರ್ಧಗಂಟೆ ನಂತರ ಬಂದು ನೋಡಲಾಗಿ ಯಾರೋ ನನ್ನ ಮೋಟಾರ್ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 379 ಐ.ಪಿ.ಸಿ.

ದಿನಾಂಕಃ 14-03-2013 ರಂದು ಫಿಯರ್ಾದಿಯವರು ನಾಗಮಂಗಲದ ಎಸ್.ಬಿ.ಎಂ. ನಿಂದ 4,00,000-00 ರೂ.ಗಳನ್ನು ಡ್ರಾಮಾಡಿಕೊಂಡು ತಮ್ಮ ಆಕ್ಟಿವ್ ಹೋಂಡಾ ಸ್ಕೂಟರ್ನ ಸೀಟ್ ಕೆಳಗಿನ ಲಾಕರ್ನಲ್ಲಿ ಇಟ್ಟು, ರಾಮದೇವ ಬ್ಯಾಂಕರ್ಸ್ ಅಂಗಡಿಯ ಒಳಗಡೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಫಿಯರ್ಾದಿಯವರ ಸ್ಕೂಟರ್ನ ಸೀಟನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, 4,00,000-00 ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬುದು ದೂರಿನ ಸಾರಾಂಶವಾಗಿರುತ್ತೆ.


4. ಮದ್ದೂರು ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 379 ಐ.ಪಿ.ಸಿ. 

ದಿನಾಂಕ: 14-03-2013 ರಂದು ಸುರೇಶ ಬಿನ್. ನೀಲಕಂಠನಹಳ್ಳಿ, ನಗರಕೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:10-03-2013 ರಂದು ಅರುವನಹಳ್ಳಿ ಬೀರೆಶ್ವರ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕೆಎ11-ಜೆ-2914  ಮೋಟಾರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಬೆಲೆ ಸುಮಾರು 20.000/- ರೂ ಗಳಾಗಿರುತ್ತೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 9, 39, 40, 44, 49, 50, 51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972.

ದಿನಾಂಕ: 14-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ., ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ  ಆರೋಪಿಗಳಾದ 1] ಕಲ್ಲುಸಕ್ಕರೆ ಬಿನ್.ಧನಕೋಟಿರಾವ್, 35 ವರ್ಷ, ಮತ್ತು 2] ಕಾಶಿರಾಮ್ ಬಿನ್ ಗಣೇಶ ರವರುಗಳು ಕಾಡು ಗೌಜಲಕ್ಕಿಗಳನ್ನು ಹಿಡಿದು, ಅವುಗಳನ್ನು ಸಾಯಿಸಿ, ಅವುಗಳ ಚರ್ಮ ಸುಲಿದು, ಮಾಂಸವನ್ನು ಮಾರಾಟಮಾಡುತ್ತಿದ್ದಾಗ, ಅವರುಗಳನ್ನು ಫಿರ್ಯಾದಿ ಹಾಗೂ ಪಂಚರೊಡನೆ ಸುತ್ತುವರಿದು ಹಿಡಿಯಲು ಹೋದಾಗ ಆರೋಪಿ -2 ರವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಆರೋಪಿ-1 ರವರನ್ನು ಮತ್ತು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕಾಡು ಗೌಜಲಕ್ಕಿಗಳ ಮಾಂಸವನ್ನು ಠಾಣೆಗೆ ತಂದು ಸ್ವಯಂ ವರದಿ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.


ಯು.ಡಿ.ಆರ್. ಪ್ರಕರಣಗಳು :

1.ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ರಾಮಚಂದ್ರೇಗೌಡ.ಕೆ, ಹೊಸೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗ ಕಿರಣ್ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಆಗಿ ಅವನ ಕತ್ತಿನ ಬಳಿ ಪೆಟ್ಟಾಗಿದ್ದ ನನ್ನ ಮಗ ಕಿರಣನನ್ನು  ನೋಡಿದ ಉಮೇಶ ಎಂಬುವವನು ಬಿಡಿಸಲು ಹೋದ ಉಮೇಶನಿಗೆ ಕರೆಂಟ್ ಹೊಡೆದಿದ್ದು. ಈ ಶಬ್ದ ಕೇಳಿದ     ಜನರು ನಾವು ಎಲ್ಲರೂ ಹೋಗಿ ನೋಡಿ ಕೆ.ಇ.ಬಿ. ಯವರಿಗೆ ಹೇಳಿ ವಿದ್ಯುತ್ ಆಪ್ ಮಾಡಿಸಿ ಹೋಗಿ ನೋಡಲಾಗಿ ತನ್ನ ಮಗ ಕಿರಣ್ ಸತ್ತು ಹೋಗಿದ್ದು ಪೆಟ್ಟಾಗಿದ್ದ ಉಮೇಶನನ್ನು ಆಸ್ಪತ್ರೆಗೆ ಸೇರಿಸಿರುತ್ತೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಕುಮಾರ ಬಿನ್. ಶಿವಣ್ಣ, 32 ವರ್ಷ, ನೆಲಮನೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 13-03-2013 ರಂದು ರಾತ್ರಿ 09-15 ರಾತ್ರಿ ಆಕಸ್ಮಿಕವಾಗಿ  11 ಕೆವಿ,  ವಿದ್ಯುತ್  ಲೈನ್ ಕಟ್ಟಾಗಿ ಬಿದ್ದು  ಪಿರ್ಯಾದಿಯವರ ತಾಯಿ ಸಾಕಮ್ಮ  ಕೋಂ. ಶಿವಣ್ಣ, 50 ವರ್ಷ, ನೆಲಮನೆ ಗ್ರಾಮ ರವರ ಮೇಲೆ ಬಿದ್ದು ಅವರ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279 304(ಎ) ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಪಂಚಲಿಂಗೇಗೌಡ ಬಿನ್ ಲೇಟ್. ಲಿಂಗೇಗೌಡ, ಡಿ.ಕೆ.ಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಡಿ.ಕೆ.ಶಿವಕುಮಾರ್ ಗಾಡಿ ಸಮೇತ ಕೆಳಗೆ ಬಿದ್ದಾಗ ಶಿವಕುಮಾರನಿಗೆ ಬಲಕೈ ಮುರಿದಿದ್ದು, ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು ದಿನಾಂಕ: 05-03-2013 ರಂದು 05-45 ಗಂಟಿಯಲ್ಲಿ ಚಂದೂಪುರ ಪಕ್ಕದ  ಶನಿದೇವರ ದೇವಸ್ಥಾನದ ಪಕ್ಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈ ದಿವಸ ದಿನಾಂಕಃ 14-03-2013 ರಂದು ಬೆಳಿಗ್ಗೆ 08-15 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 125/13 ಕಲಂ. 395 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಪ್ರತಾಪ ಬಿನ್. ಮೋಹನ ರಾವ್, ಮಂಡಿ ಮೊಹಲ್ಲಾ, ಮೈಸೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮೈಸೂರಿಗೆ ಹೋಗುವಾಗ ಅಪರಿಚಿತ 6 ಜನ ಆಸಾಮಿಗಳು ಪಿರ್ಯಾದಿಯವರನ್ನು  ತಡೆದು ಹೆದರಿಸಿ ಚಾಕುವನ್ನು ತೋರಿಸಿ ಕೈಗಳನ್ನು  ಹಿಡಿದುಕೊಂಡು ಜೇಬಿನಲ್ಲಿದ್ದ 38000/- ರೂ ಹಣ ಹಾಗೂ ಸುಮಾರು 6. 1/2 ಗ್ರಾಂ ತೂಕದ ಚಿನ್ನದ ಉಂಗುರ  ಇದರ ಅಂದಾಜು ಒಟ್ಟು ಬೆಲೆ 58.000/- ಗಳಾಗಿರುತ್ತೆ ಇವುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment