Moving text

Mandya District Police

DAILY CRIME REPORT DATED : 27-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,   1 ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-02-2013 ರಂದು ಪಿರ್ಯಾದಿ ವಸಂತ್ ಕುಮಾರ್ ಬಿನ್ ನಾಗರಾಜಶೆಟ್ಟಿ, ಬಿ.ಜೆ ಮೋಳೆ ಗ್ರಾಮ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ದೊಡ್ಡಪ್ಪ ನಂಜಶೆಟ್ಟಿ @ ನಾಗಶೆಟ್ಟಿ, ಬಿ.ಜೆ ಮೋಳೆ ಗ್ರಾಮ, ಮಳವಳ್ಳಿ ತಾ|| ರವರಿಗೆ ಹೊಟ್ಟೆನೋವು ಬರುತ್ತಿದ್ದು, ಯಾವುದೇ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ವಿಷವನ್ನು ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದು, ಶವದ ಮುಂದಿನ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು ಮೇರೆಗೆ ಈ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 27-02-2013 ರಂದು ಪಿರ್ಯಾದಿ ಅಶೋಕಕುಮಾರ  ಬಿನ್. ಅಪ್ಪು ಸಂಪಂಗಿ, ಗಾರೆ ಕೆಲಸ,  ವಾಸ. ನಂ.8,  19ನೇ ಬ್ಲಾಕ್, ಕೆ.ಎಸ್.ಡಿ.ಬಿ. ಕ್ವಾಟ್ರಸ್, ಕಾವೇರಿ ನಗರ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸ  35 ವರ್ಷ, ವಾಸ  ನಂ-8, 19 ನೇ ಬ್ಲಾಕ್, ಕೆ.ಎಸ್.ಡಿ.ಬಿ. ಕ್ವಾಟ್ರಸ್, ಕಾವೇರಿ ನಗರ ಬೆಂಗಳೂರು ಈತನಿಗೆ ಮೂಚರ್ೆ ರೋಗವಿದ್ದು  ಈತನು ಚಿಕಿತ್ಸೆ ಪಡೆಯುತ್ತಿದ್ದು  ಆ ದಿನ ಮೇಸ್ತ್ರಿ ದಿವಾಕರರವರ ಹತ್ತಿರ ಪೈಂಟ್ ಕೆಲಸ ಮಾಡುತ್ತಿದ್ದಾಗ ದಿನಾಂಕ: 26-02-2013 ರಂದು ಮದ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಹೊಸ ಬಸ್ ನಿಲ್ದಾಣದ ಪಕ್ಕ ಹೊಸದಾಗಿ ಕಟ್ಟುತ್ತಿರುವ ಜಯರಾಮು ರವರ ಬಿಲ್ಡಿಂಗ್ಗೆ ಬಣ್ಣ ಹೊಡೆಯುತ್ತಿದ್ದಾಗ ಆ ಸಮಯದಲ್ಲಿ ಮೃತ ಶ್ರೀನಿವಾಸನಿಗೆ     ಮೂರ್ಛ ರೋಗ ಬಂದು ಸುಮಾರು 15 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಏಟಾಗಿದ್ದು ತಕ್ಷಣ ಅವನ ಸ್ನೇಹಿತರು ಹಾಗು ಮೇಸ್ತ್ರಿ ದಿವಾಕರ ಎಲ್ಲರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:26-02-2013ರ ಮದ್ಯಾಹ್ನ ಸುಮಾರು 12-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 143-498(ಎ)-504-341-323-506 ಕೂಡ 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ.ಆಕ್ಟ್.

ದಿನಾಂಕ: 27-02-2013 ರಂದು ಪಿರ್ಯಾದಿ ಕೆ.ಪಿ ಪವಿತ್ರ ಕೊಂ. ತಮ್ಮಯ್ಯ, ಶೆಟ್ಟಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ  ಗಂಡ ತಮ್ಮಯ್ಯ,  ಅತ್ತೆ ನಾಗಮ್ಮ, ಮಾವ ವೆಂಕಟಯ್ಯ ಹಾಗು ಪ್ರೇಮ ಮತ್ತು ಸಾವಿತ್ರಿ ರವರುಗಳು ಸೇರಿಕೊಂಡು ಮತ್ತೆ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಪೀಡಿಸುತ್ತಿದ್ದರಿಂದು, ಹಾಗೂ ದಿನಾಂಕ: 26-02-2013 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಮೇಲ್ಕಂಡ ಆರೋಪಿತರೆಲ್ಲರು ಸೇರಿಕೊಂಡು ಪಿರ್ಯಾದಿಯವರಿಗೆ  ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ, ಆರೋಪಿ-4 ರವರು ಪಿರ್ಯಾದಿಯವರನ್ನು ತಬ್ಬಿ ಹಿಡಿದುಕೊಂಡು ಮುಂದಲೆ ಹಿಡಿದು ಎಳೆದಾಡಿ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೆ ಮನೆಗೆ ಬರಬೇಡ ಎಂದು ಆರೋಪಿತರೆಲ್ಲರೂ ಮನೆಯಿಂದ ಹೊರಕ್ಕೆ ತಬ್ಬಿ ನಿನಗೆ ಇನ್ನೂ ಮಕ್ಕಳಾಗಿಲ್ಲ ನೀನು ಎಲ್ಲಾದರೂ ಕೆರೆ ಬಾವಿ ಬಿದ್ದು ಸಾಯಿ ತಮ್ಮಯ್ಯನಿಗೆ ಬೆರೆ ಮದುವೆ ಮಾಡುತ್ತೇವೆ ಎಂದು ಹೊಡೆದು ಗಲಾಟೆ ಮಾಡಿರುತ್ತಾರೆ ಅವರಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 38/13 ಕಲಂ.11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿ ಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ ಷನ್ ಆಕ್ಟ್ 1964.

ದಿನಾಂಕಃ 27-02-2013 ರಂದು ಪಿರ್ಯಾದಿ ಹೆಚ್.ಟಿ.ಪುಟ್ಟಸ್ವಾಮಿ, ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ದಿನಾಂಕಃ 27-02-2013 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ಳೂರಿನ ಲ್ಯಾಂಕೋ ಚೆಕ್ ಪೋಸ್ಟ್ ಬಳಿ ಹಾಸನದ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಕೆಎ-13-ಬಿ-342ರ ಲಾರಿಯನ್ನು ಚೆಕ್ ಮಾಡಿದಾಗ ಅದರಲ್ಲಿ 06 ಹಸುಗಳು ಹಾಗೂ 20 ಎಮ್ಮೆಗಳಿದ್ದು, ಸದರಿ ರಾಸುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಇಕ್ಕಟ್ಟಾದ ಜಾಗದೊಳಗೆ ಅಷ್ಟು ರಾಸುಗಳಿಗೆ ನಿಲ್ಲಲು ಅಥವ ಮಲಗಲು ಸಾಕಷ್ಟು ಸ್ಥಳಾವಕಾಶ ಹಾಗೂ ಬೆಳಕು ಇಲ್ಲದೆ ಅತ್ಯಂತ ಕ್ರೂರವಾಗಿ ತುಂಬಿ, ಸದರಿ ಲಾರಿಯನ್ನು ಅದರಲ್ಲಿದ್ದ ರಾಸುಗಳನ್ನು ಹಾಗೂ ಲಾರಿಯ ಚಾಲಕ ಮತ್ತು ಕೂಲಿಕೆಲಸಗಾರರನ್ನು ವಶಕ್ಕೆ ತೆಗೆದುಕೊಂಡು ಸ್ವತಃ ಪ್ರಕರಣ ದಾಖಲಿಸಿರುತ್ತಾರೆ.

No comments:

Post a Comment