Moving text

Mandya District Police

DAILY CRIME REPORT DATED : 26-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-02-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 498(ಎ)504.506 ಕೂಡ 34 ಐ.ಪಿ.ಸಿ ಕೂಡ 3-4 ಡಿ.ಪಿ. ಆಕ್ಟ್.

ದಿನಾಂಕಃ 26-02-2013 ರಂದು ಪಿರ್ಯಾದಿ ಆಶಾ .ಆರ್ ಕೋಂ. ಪರಮೇಶ್, ಆರತಿ ಉಕ್ಕಡ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಆರೋಪಿ 1, ಪರಮೇಶ್ ರವರೊಂದಿಗೆ  ಗಂಡನ  ಮನೆಯವರ  ಬೇಡಿಕೆಯಂತೆ 1.50.000/- ವಿವಾಹದ  ವರದಕ್ಷಿಣೆಯಾಗಿ ನೀಡಿದ್ದರು ನನ್ನ ಗಂಡ, ಅತ್ತೆ, ನಾದಿನಿ ಪುನಃ  ನೀನು  ತಾಯಿ ಮನೆಗೆ  ಹೋಗಿ ಹಣ  ಮತ್ತು ಒಡವೆಗಳನ್ನು ತೆಗೆದುಕೊಂಡು  ಬಾ ಎಂದು  ಕಿರುಕುಳ ನೀಡುತ್ತಿದ್ದು ಗಂಡ , ನಾದಿನಿ, ಅತ್ತೆ ನನಗೆ  ಸರಿಯಾಗಿ  ಊಟವನ್ನು   ಕೊಡದೆ  ಹಲ್ಲೆಯನ್ನು  ಸಹ ಮಾಡಿ  ಅವ್ಯಾಚ್ಯ ಶಬ್ದಗಳಿಂದ   ನಿಂದಿಸಿ ಮನೆಯಿಂದ   ಹೊರಗೆ  ಕಳುಹಿಸಿರುತ್ತಾರೆ,  ನೀನು ಪುನಃ   ಬಂದರೆ   ನಿನ್ನನ್ನು ಸೀಮೆ  ಎಣ್ಣೆಯಿಂದ  ನಿನ್ನನ್ನು  ಮುಗಿಸುತ್ತೇನೆ ಎಂಬುದಾಗಿ  ಜೀವ  ಬೆದರಿಕೆ  ಹಾಕಿರುತ್ತಾರೆ. ನನ್ನ ಗಂಡ ಪರಮೇಶ್, ನಾದಿನಿ, ಅತ್ತೆ  ಲಕ್ಷ್ಮಮ್ಮ  ನೀನು ಈ ಮನೆಯಲ್ಲಿ ಇರಬೇಕಾದರೆ ಪುನಃ 50.000/- ರೂ ತೆಗೆದುಕೊಂಡು  ಬಾ ಎಂದು  ಮನೆಯಿಂದ  ಹೊರ ಹಾಕಿರುತ್ತಾರೆ ಆದ್ದರಿಂದ  ದಯಮಾಡಿ ತಿಳಿಸಿರುವ  ಮೂವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯುಡಿಆರ್ ನಂ 10/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕಃ 26-02-2013 ರಂದು ಪಿರ್ಯಾದಿ ಉಮಾ ಕೋಂ. ಲೇ|| ಹೆಚ್.ಎನ್. ಮಹೇಶ, ಹೊಸಹೊಳಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಹೆಚ್.ಎನ್. ಮಹೇಶ ಬಿನ್. ನಂಜಪ್ಪಶೆಟಿ,್ಟ ಹೊಸಹೊಳಲು ಗ್ರಾಮ, ಕೆ.ಆರ್.ಪೇಟೆ ತಾ|| ರವರು ತಮಗೆ ಬರುತ್ತಿದ್ದ ಹೊಟ್ಟೆನೋವನ್ನು ತಾಳಲಾರದೆ ತನ್ಮೂಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಬೇರೆ ಯಾವುದೇ ಕಾರಣವಿರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 26-02-2013 ರಂದು ಪಿರ್ಯಾದಿ ಹೆಚ್. .ವಿಜಯಲಕ್ಷ್ಮಿ, ಕಾರ್ಯಕರ್ತೆ, ಅಂಗನವಾಡಿ, 1 ಕೇಂದ್ರ. ಚಿಕ್ಕರಸಿನಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 25-02-13 ರಂದು ರಾತ್ರಿ ವೇಳೆಯಲ್ಲಿ ಯಾರೋ  ಕಳ್ಳರು ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳಗೆ ಇದ್ದ 2 ಸಿಲಿಂಡರ್ ಗಳನ್ನು ಕಳುವು ಮಾಡಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 26-02-2013 ರಂದು ಪಿರ್ಯಾದಿ ನಾಗರಾಜು, 28 ವರ್ಷ, ಬಣಜಿಗಶಟ್ಟರು, ವ್ಯವಸಾಯ, ಹುಲಿಯೂರುದುರ್ಗ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಕೆ.ಎ.-11-2151 ರ ಮಹೇಂದ್ರ ಮ್ಯಾಕ್ಸಿಕ್ಯಾಬ್ ಚಾಲಕ ಹೆಸರು ವಿಳಾಸ ತಿಳಿಯಬೇಕಾಗಿದೆ, ಮ್ಯಾಕ್ಸಿಕ್ಯಾಬನ್ನು ಮದ್ದೊರು ಕಡೆಯಿಂದ ಚನ್ನಪಟ್ಟಣದ ಕಡೆಗೆ ಹೋಗಲು ಮೈಸೂರು ಬೆಂಗಳೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಹಳ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ವೆಂಕಟೇಶ್ ಮತ್ತು ಶ್ರೀನಿವಾಸ್ ರವರು ಬರುತ್ತಿದ್ದ ಮೋಟರ್ ಸೈಕಲ್ ಗೆ, ರಭಸವಾಗಿ ಡಿಕ್ಕಿಹೊಡೆಸಿದ ಪರಿಣಾಮ ಅವರುಗಳು ಮೋಟರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಹೋದರು, ಶ್ರೀನಿವಾಸ್ ರವರು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಂಜೆ ಸತ್ತು ಹೋಗಿರುತ್ತಾನೆ. ಮೇಲ್ಕಂಡ ಅಪಘಾತ ಉಂಟುಮಾಡಿದ ಮ್ಯಾಕ್ಸಿಕ್ಯಾಬ್ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment