Moving text

Mandya District Police

DAILY CRIME REPORT DATED : 22-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-02-2013 ರಂದು ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳವು ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 379 ಐ.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಮಮತಾ ಕೋಂ. ಸತೀಶ್, ಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮೂರು ಜನ ಅಪರಿಚಿತ ಹೆಂಗಸರು ನಿಂತಿದ್ದು, ಅವರು ನನ್ನ ತಾಯಿಯನ್ನು ತಳ್ಳಿ ಜೊರಾಗಿ ನೂಕಿದಾಗ, ನಮ್ಮ ತಾಯಿ ಪಕ್ಕಕ್ಕೆ ಸರಿದುಕೊಂಡರು, ಆಗ ಯರೋ ಮೂರು ಜನ ಅಪರಿಚಿತ ಹೆಂಗಸರು ನನ್ನ ತಾಯಿಯ ಕತ್ತಿನಲ್ಲಿದ್ದ  ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ, ಕತ್ತಿನಲ್ಲಿದ್ದ ಮಾಂಗಲ್ಯ ಸರ ಸುಮಾರು 20 ಗ್ರಾಂ. ಆಗಿದ್ದು, ಸುಮಾರು 55,000-00 ರೂ. ಗಳಾಗುತ್ತದೆ.  ಅದ್ದರಿಂದ ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಕುಮಾರ ಬಿನ್. ಮೊಗಣ್ಣೇಗೌಡ, ಹರವು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನಮ್ಮ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ನನ್ನ ತಂದೆ ಮೊಗಣ್ಣೇಗೌಡರವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ನಂದಿಸಲು ಸಾಧ್ಯವಾಗದೇ ಬೆಂಕಿ ಪಕ್ಕದ ತಿಮ್ಮೇಗೌಡರವರ ಜಮೀನಿಗೂ ಸಹ ಹರಡುತ್ತಿದ್ದಾಗ, ನನ್ನ ತಂದೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾಗ ಬೆಂಕಿಯ ಜ್ವಾಲೆ ನಮ್ಮ ತಂದೆಗೆ ತಗುಲಿ ನಮ್ಮ ತಂದೆ ಹಾಕಿಕೊಂಡಿದ್ದ ಬಟ್ಟೆಗೆ ಹತ್ತಿಕೊಂಡು ಸ್ಥಳದಿಂದ ಹೊರಗಡೆ ಬರಲಾರದೆ ಬೆಂಕಿಯ ನಡುವೆ ಸಿಕ್ಕಿಕೊಂಡು ಸ್ಥಳದಲ್ಲೆ ಬಿದ್ದು, ಬೆಂಕಿ ಜ್ವಾಲೆಯಿಂದ ಸುಟ್ಟಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ನನ್ನ ತಂದೆಯ ಸಾವಿಗೆ ಬೇರೆ ಯಾವುದೇ ಕಾರಣ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 380 ಐ.ಪಿ.ಸಿ.

ದಿನಾಂಕ: 22-02-2013 ರಂದು ಪಿರ್ಯಾದಿ ಎಂ, ಸಿದ್ದಪ್ಪಾಜಿ, ಸ್ವರ್ಣಸಂದ್ರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದ್ವಿಚಕ್ರವಾಹನದ ಪಾರ್ಕಿಂಗ್  ಸ್ಟಾಂಡ್ ನಲ್ಲಿ  ಬೆಳಿಗ್ಗೆ 6-00 ಗಂಟೆಗೆ ಬೀಗ ಹಾಕಿ ನಿಲ್ಲಿಸಿ ಕೆಲಸಕ್ಕೆ ಹೋದೆನು, ವಾಪಸ್ ಕೆಲಸ ಮುಗಿಸಿಕೊಂಡು ಮದ್ಯಾಹ್ನ 02-00 ಗಂಟೆಗೆ ಬೈಕ್ ನಿಲ್ಲಿಸಿದ್ದ ಸ್ಟಾಂಡ್ ಬಳಿ ಬಂದು ನೋಡಲು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದರು. ಆದರೂ ಸಹ ಸಿಗಬಹುದೆಂದು ಈ ತನಕ ಎಲ್ಲಾ ಕಡೆಗಳಲ್ಲಿ ಹುಡುಕಿದೆನು ಸಿಕ್ಕಿರುವುದಿಲ್ಲ ಆದ್ದರಿಂದ ಕಳುವಾಗಿರುವ ನನ್ನ ಬೈಕ್ ನ್ನು, ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ ತಡೆ ಕಾಯಿದೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 323-506 ಕೂಡ 149 ಐಪಿಸಿ, ಮತ್ತು 3ಕ್ಲಾಸ್ [1]-10 ಎಸ್.ಸಿ./ಎಸ್.ಟಿ ಆಕ್ಟ್ 1989.

ದಿನಾಂಕ: 22-02-2013 ರಂದು ಪಿರ್ಯಾದಿ ಪಿ. ಕೃಷ್ಣ ಕುಮಾರ್, ಕಾರ್ಯದರ್ಶಿ, ಜೀವನ್ ಜ್ಯೋತಿ ವಿದ್ಯಾಸಂಸ್ಥೆ,  ಕಾರಸವಾಡಿ ರಸ್ತೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಶಾಲೆಯಲ್ಲಿ ಇದ್ದಾಗ ಮೇಲ್ಕಂಡ ಆರೋಪಿತರುಗಳು ಬಂದು ನೀನು ನಮ್ಮನ್ನೆಲ್ಲ ಕೆಲಸಕ್ಕೆ ತೆಗೆದಿಕೊ ಇಲ್ಲದಿದ್ದರೆ ತಲಾ 2 ಲಕ್ಷ ರೂ. ಹಣ ಕೊಡು ಎಂದು ಹೆದರಿಸಿದರಲ್ಲದೆ ನೀನು ನಿನ್ನ ಜಾತಿ ಬುದ್ದಿ ಎಲ್ಲಿ ಬಿಡುತ್ತೀಯ ಎಂದು ಅವಾಚ್ಯ ಶéಬ್ದಗಳಿಂದ ಬೈಯುತ್ತಿದ್ದು ವೀರನಗೌಡ ಪಾಟೀಲ್  ಕತ್ತಿನಪಟ್ಟಿ  ಹಿಡಿದು ಕೈ ಮಾಡಿದರಲ್ಲದೆ ಜೀವ ಭಯ ಉಂಟು ಮಾಡಿರುತ್ತಾರೆಂದು ಇತ್ಯಾದಿಯಾಗಿ ಈ ದಿನ ನೀಡಿದ ಪಿರ್ಯಾದುವಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

No comments:

Post a Comment