Moving text

Mandya District Police

DAILY CRIME REPORT DATED : 11-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ  ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ಶಿವಶಂಕರ. ಬಿ. ಬಿನ್. ಲೇ ಬೋರಯ್ಯ, 50 ವರ್ಷ, ಚಿಕ್ಕಮಂಡ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಫಿರ್ಯಾದಿಯವರ ಬಾಬ್ತು ಕೆ.ಎ-11-ಆರ್-3034ರ ಮೋಟಾರ್ ಸೈಕಲ್ ನ್ನು, ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 25,500/- ರೂ. ಆಗುತ್ತದೆ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 379 ಐ.ಪಿ.ಸಿ.

    ದಿನಾಂಕ: 11-02-2013 ರಂದು ಯದುರಾಜೇಗೌಡ, ಆಡಳಿತಾಧಿಕಾರಿ, ಎಸ್.ಪಿ.ಸಿ.ಎಲ್ ಲಿಮಿಟೆಡ್, ಟಿ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಟಿ.ಕೆ.ಹಳ್ಳಿ ಗ್ರಾಮದ ಬಿಡಬ್ಯ್ಲೂಎಸ್ಎಸ್ಬಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಉಪಯೋಗಿಸುತ್ತಿದ್ದ ನೀರೆತ್ತುವ 1] 8 ಹೆಚ್.ಪಿ. ನೀರೆತ್ತುವ ಮೋಟಾರ್, 2] 2 ಹೆಚ್.ಪಿ.ನೀರೆತ್ತುವ ಮೋಟಾರ್, 3] 500 ಮೀಟರ್ ಕೇಬಲ್ ವೈರ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ



ವಂಚನೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 468-420 ಐ.ಪಿ.ಸಿ.

     ದಿನಾಂಕ: 11-02-2013 ರಂದು ಪಿರ್ಯಾದಿ ರಘು ಎಂ.ಪಿ. ವಿಭಾಗೀಯ ಭದ್ರತಾ ನಿರೀಕ್ಷಕ, ಕ.ರಾ.ರ.ಸಾ.ಸಂಸ್ಥೆ. ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ್ ಎಸ್.ಎನ್ ಬಿನ್ ನರೆಸೇಗೌಡ, ಬೆಳ್ಳಾಳೆ ಗ್ರಾಮ, ಪಾಂಡವಪುರ ತಾಲ್ಲೂಕು. ರವರು ಕ.ರಾ.ರ.ಸಾ. ಸಂಸ್ಥೆಯ ಪಾಸ್ ಹೋಲುವ ರೀತಿಯಲ್ಲಿ ಒಂದು ನಕಲಿ ಪಾಸನ್ನು ಸೃಷ್ಠಿಸಿಕೊಂಡು ಸದರಿ ಪಾಸ್ನಲ್ಲಿ ವಿಭಾಗೀಯ ನಿಯಂತ್ರಾಣಧಿಕಾರಿಗಳು ಕ.ರಾ.ರ.ಸಾಂ.ಸಂಸ್ಥೆಯ ಮಂಡ್ಯ ವಿಭಾಗ ಮಂಡ್ಯ ರವರ ಮೊಹರಿನ ರೀತಿಯಲ್ಲಿ ನಕಲಿ ಮೊಹರನ್ನು ಉಯೋಗಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸದರಿ ಪಾಸನ್ನು ಬಳಸಿ ಕ.ರಾ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಿ ಸಂಸ್ಥೆಗೆ ವಂಚನೆ ಎಸಗಿ ಉಚಿತವಾಗಿ ಪ್ರಯಾಣಿಸಿರುತ್ತಾರೆ. ಸದರಿಯವರು ಈ ರೀತಿ ಮೂರು ತಿಂಗಳಿನಿಂದ ಆರ್ಥಿಕ  ನಷ್ಠ ಉಂಟು ಮಾಡಿರುತ್ತಾರೆ ಹಾಗೂ ಈ ದಿನದ ಸದರಿ ವಾಹನದ ಮಾರ್ಗ ಕಾರ್ಯಚರಣೆಗೆ  ಅಡಚಣೆ ಉಂಟಾಗಿ ಸಂಸ್ಥೆಗೆ ಸುಮಾರು 10,000/- ನಷ್ಟ ಮಾಡಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 11-02-2013 ರಂದು ಪಿರ್ಯಾದಿ ಗೌರಮ್ಮ ಕೋಂ ಶಾಂತಪ್ಪ, ಆಲಂಬಾಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಶಾಂತಪ್ಪ ಬಿನ್. ಬಸಪ್ಪ, 58 ವರ್ಷ, ಆಲಂಬಾಡಿ ಗ್ರಾಮರವರು  ನಂಜನಗೂಡು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ, ನಾವು ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲ  ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment