Moving text

Mandya District Police

DAILY CRIME REPORT DATED : 20-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-01-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಚಿಕ್ಕೋನಯ್ಯ ಬಿನ್. ಲೇಟ್. ಕರಿಯಯ್ಯ, ಶಂಬೂನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಶಾಂತ ಕೋಂ ಸ್ವಾಮಿ, 28 ವರ್ಷ, ಪರಿಶಿಷ್ಟ ಜಾತಿ, ಗೃಹಿಣಿ, ಚಿಕ್ಕಾಯರಹಳ್ಳಿ ರವರು ಲ್ಯಾಂಪ್ಗೆ ಸೀಮೆಎಣ್ಣೆ ಸೀಸೆಯಿಂದ ಸೀಮೆಎಣ್ಣೆ ಹಾಕುತ್ತಿದ್ದಾಗ ಲ್ಯಾಂಪ್ ಸೀಮೆ ಎಣ್ಣೆ ತುಂಬಿ ಮೈಮೇಲೆ ಮತ್ತು ಬಟ್ಟೆಯ ಮೇಲೆ ಚೆಲ್ಲಿ ಆಕಸ್ಮಿಕವಾಗಿ ಗೋಡೆಯಲ್ಲಿ ನೇತುಹಾಕಿದ್ದ ಲ್ಯಾಂಪ್ಗೆ ಕೈ ತಗುಲಿ ಲ್ಯಾಂಪ್ ತಲೆಯ ಮೇಲೆ ಬಿದ್ದು ಲ್ಯಾಂಪ್ನಲ್ಲಿದ್ದ ಸೀಮೇಎಣ್ಣೆ ಮೈಮೇಲೆ ಚೆಲ್ಲಿದ್ದರಿಂದ ಬಟ್ಟೆಯೆಲ್ಲಾ ಪೂರ್ಣಹತ್ತಿಕೊಂಡಾಗ ಅಕ್ಕಪಕ್ಕದವರು ಬಂದು ಬೆಂಕಿ ಆರಿಸಿ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 447 ಐ.ಪಿ.ಸಿ. ಮತ್ತು 16[1], 19[1] ಹಾಗೂ 7 ಭಾರತೀಯ ಪುರಾತತ್ವ ಸಂರಕ್ಷಣಾ ಕಾಯಿದೆ 1958

ದಿನಾಂಕ: 20-01-2013 ರಂದು ಪಿರ್ಯಾದಿ ನಾಗರಾಜು.ವಿ.ಆರ್, ಸಹಾಯಕ ಸ್ಮಾರಕ ಸಂರಕ್ಷಣ ವಲಯ ಅಧಿಕಾರಿ, ಭಾರತೀಯ ಪುರಾತತ್ವ ಇಲಾಖೆ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು, ಕೆರೆತಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರುಗಳು ಶ್ರೀನಂಬಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆರೆತಣ್ಣೂರು ಗ್ರಾಮದ ಸದರಿ ಜಾಗವು ರಾಷ್ಟ್ರೀಯ ಸ್ಮಾರಕವಾಗಿ ರುವುದರಿಂದ ನಿಷೇದಿತ ಪ್ರದೇಶವಾಗಿದ್ದು, ಯಾವುದೇ ಅನ್ಯ ಚಟುವಟಿಕೆ ಮಾಡುವುಂತಿಲ್ಲ, ಸಭೆಗಳನ್ನು ಮಾಡುವಂತಿಲ್ಲ. ಸಭೆಯನ್ನು ಕೇಂದ್ರ ಸಕರ್ಾರದ ಅನುಮತಿ ಪಡೆದುಕೊಂಡು ಮಾಡಬೇಕಾಗಿದ್ದು, ಸದರಿ ಜಾಗದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖಾ ಕಾನೂನು ಉಲ್ಲಂಘನೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಗ್ರಾಮಾಂತರ. ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಕಲಂ.498(ಎ),506 ರೆ:ವಿ 34 ಐ.ಪಿ.ಸಿ. ಕೂಡ 3 & 4 ಡಿ.ಪಿ. ಕಾಯ್ದೆ.

ದಿನಾಂಕ: 20-01-2013 ರಂದು ಪಿರ್ಯಾದಿ ಮಂಜುಳ.ಎಂ.ಸಿ. ಕೋಂ. ಬಿ.ಎ.ಪ್ರಕಾಶ, ಮನೆಕೆಲಸ, ಬಂಡೂರು ಗ್ರಾಮ, ಕಿರುಗಾವಲು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1] ಮಾದಯ್ಯ 2] ನಿಂಗಮ್ಮ ಕೋಂ.ಮಾದಯ್ಯ, 3] ಬಸವರಾಜು ಬಿನ್ ಮಾದಯ್ಯ ಎಲ್ಲರೂ ಬಂಡೂರು ಗ್ರಾಮ, ಕಿರುಗಾವಲು ರವರುಗಳು ನೀಡಿದ ದೂರು ಏನೆಂದರೆ ನಿನ್ನನ್ನು ಮತ್ತು ನಿನ್ನ ಮಗುವನ್ನು ಕೊಲೆ ಮಾಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನನ್ನ ಮಗಳ ಸಾವಿಗೆ ಹಾಗೂ ನನಗೆ ಪ್ರತಿ ನಿತ್ಯ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ನನ್ನ ಅತ್ತೆ , ಮಾವ ಹಾಗೂ ನನ್ನ ಗಂಡನ ಅಣ್ಣ ಬಸವರಾಜು ಇವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾಗಿರುತ್ತಾರೆ ಇವರ ವಿರುದ್ದ ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ದೂರಿನ ಮೇರೆಗೆ ತುತರ್ು ಅಪರಾಧ ವರದಿ ದಾಖಲಿಸಲಾಗಿದೆ.  


ಅಕ್ರಮ ಮರಳು ಕಳವು ಹಾಗು ಸಾಗಾಣಿಕೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 188-379 ಐ.ಪಿ.ಸಿ.

ದಿನಾಂಕ: 20-01-2013 ರಂದು ಪಿರ್ಯಾದಿ ಬಿ.ಎಲ್. ವೇಣುಗೋಪಾಲ. ತಗ್ಗಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಟ್ರಾಕ್ಟರ್ ನಂ. ಕೆಎ-11-ಟಿ-8658 ಟ್ರೈಲರ್ ನಂ.ಕೆಎ-11-8659ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ರಾತ್ರಿ 09-30 ಗಂಟೆಗೆ ಬರುತ್ತಿದ್ದ ಗಾಡಿಯನ್ನು ನಮ್ಮ ಗ್ರಾಮಸೇವಕ ತಡೆಗಟ್ಟಿ ಮರಳು ಸಾಗಾಣಿಕೆ ಪರವಾನಗಿ ಬಗ್ಗೆ ಚಾಲಕನನ್ನು ವಿಚಾರಿಸಲು ಹೋದಾಗ ಅವನು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಹಾಗೂ ಶಿಂಷಾನದಿಯಲ್ಲಿ ನಿಷೇಧಾಜ್ಞೆ ಇದ್ದರು ಸಹ ಅಕ್ರಮವಾಗಿ ಮರಳು ತುಂಬಿಕೊಂಡು ಕಳವು ಮಾಡಿಕೊಂಡು ಹೋಗುತ್ತಿದ್ದ ಟ್ರಾಕ್ಟರನ್ನು ತಂದು ಹಾಜರ್ಪಡಿಸಿದ್ದು, ಇದರ ಬಗ್ಗೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment