Moving text

Mandya District Police

DAILY CRIME REPORT DATED : 16-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-01-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಕೊಲೆ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ಕಳವು ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಗಿರಿಸ್ವಾಮಿ ಬಿನ್ ಲೇಟ್. ಕೋಳಬೋವಿ, 39 ವರ್ಷ, ವ್ಯವಸಾಯ, ರಾಮನಂದ ನಗರ, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಬೈಕ್ ನಂಬರ್ ಕೆ.ಎ.54-ಹೆಚ್-4149,  ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಬಂದು ಸಂಸ್ಕೃತ ಕಾಲೇಜಿನ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಅಂಗಡಿಗೆ ಹೋಗಿ ಮದ್ಯಾಹ್ನ 13-30 ಗಂಟೆಯಲ್ಲಿ ಬಂದು  ನೋಡಲಾಗಿ ನಿಲ್ಲಿಸಿದ್ದ ತಮ್ಮ ಬೈಕ್ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ನನ್ನ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಬೆಲೆ 30000/- ರೂಗಳಾಗಿರುತ್ತದೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಹನುಮಂತಯ್ಯ ಬಿನ್. ಮಾದೇಗೌಡ, ಶಾಖಾಧಿಕಾರಿ, ಸೆಸ್ಕ್ ಘಟಕ-2, ಮಳವಳ್ಳಿ ಉಪವಿಭಾಗ-1, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ದುಷ್ಕರ್ಮಿಗಳು  ಮಳವಳ್ಳಿ-ಕನಕಪುರ ರಸ್ತೆ, ಅಟ್ಟುವನಹಳ್ಳಿ ಕ್ರಾಸ್ ಬಳಿ, 11 ಕಿಲೋ ವ್ಯಾಟ್ ಮಾರ್ಗದಲ್ಲಿ 04 ಸ್ಪ್ಯಾನ್ ನ ಸುಮಾರು 480 ಮೀಟರ್ ರ್ಯಾಬಿಟ್ 12,000/- ರೂ.ಬೆಲೆ ಬಾಳುವ ಎ.ಸಿ.ಎಸ್.ಆರ್. ವೈರ್ ನ್ನು, ಕಳವು ಮಾಡಿರುವುದಾಗಿ, ಪತ್ತೆ ಮಾಡಿಕೊಡಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-457-380 ಐ.ಪಿ.ಸಿ.

      ದಿನಾಂಕ: 16-01-2013 ರಂದು ಪಿರ್ಯಾದಿ ಕೆ.ಮೋಹನ್ ಬಿನ್ ಲೇಟ್, ಕಾಶೀನಾದನ್, ಸಕ್ಕರೆ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು 02-45 ಗಂಟೆಯಲ್ಲಿ ಮತ್ತೆ ಕೆಲಸಕ್ಕೆ ಹೋದೆ. ಕೆಲಸ ಮುಗಿಸಿಕೊಂಡು ಸಂಜೆ 7-30 ಗಂಟೆಗೆ ಮನೆಗೆ ಬಂದಾಗ ಮನೆ ಬಾಗಿಲ ಬೀಗ ತೆಗೆದು ಓಳಗಡೆ ಹೋದಾಗ ಮನೆಯ  ಹಿಂಬಾಗಿಲು ತೆರೆದಿತ್ತು. ಆಗ ನಾನು ಗಾಭರಿಗೊಂಡು ಮನೆಯಲ್ಲಿ ನೋಡಲಾಗಿ ರೂಮಿನಲ್ಲಿಟ್ಟಿದ್ದ ಹೆಚ್. ಪಿ ಕಂಪನಿಯ ಲ್ಯಾಫ್ಟಾಪ್, ಹಾಲ್ನಲ್ಲಿಟ್ಟಿದ್ದ ಓನಿಡ ಡಿವಿಡಿ ಪ್ಲೇಯ್ತುಗಳನ್ನು ಯಾರೋ ಕಳ್ಳರು, ಹೆಸರು ವಿಳಾಸ ತಿಳಿಯಬೇಕಾಗಿದೆ, ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ಕೇಸು ದಾಖಲಿಸಿದೆ.


ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 302 ಐ.ಪಿ.ಸಿ.

     ದಿನಾಂಕ: 16-01-2013 ರಂದು ಪಿರ್ಯಾದಿ ಮುರಳಿಧರ ಬಿನ್. ಗೌಡೇಗೌಡ, ಒಕ್ಕಲಿಗರು, ವ್ಯವಸಾಯ, ಡಾಮಡಹಳ್ಳಿ  ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ  ನಾಗೇಗೌಡ, ಡಾಮಡಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ಮತ್ತು ಈತನ ಮಗ ಅನಿಲ್ಕುಮಾರ್ @ ನಿರಂಜನ್ ರವರಿಗೂ ಮನೆ ಮತ್ತು ಆಸ್ತಿ ವಿಚಾರದಲ್ಲಿ ಮನಸ್ಥಾಪವಿದ್ದು ದಿನಾಂಕ:16-01-2013 ರಂದು ರಾತ್ರಿ ಸುಮಾರು 8-45 ಗಂಟೆಯ ಸಮಯದಲ್ಲಿ ಆಸ್ತಿ ವಿಚಾರದಲ್ಲಿ ಆರೋಪಿತನು ತನ್ನ ಮನೆಯ ಮುಂದೆ  ಮಗ ಅನಿಲ್ಕುಮಾರ್ @ ನಿರಂಜನ್ ರವರ ಕೂಡ ಜಗಳ ತೆಗೆದು ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾನೆಂದು ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಸೋಮಶೇಖರ ಎನ್.ಎಂ. ಬಿನ್. ಲೇ|| ಮರಿಸ್ವಾಮಿ, ಒಕ್ಕಲಿಗರು, ವ್ಯವಸಾಯ, ನಗುವನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, ಸುಮಾರು 50 ರಿಂದ 55 ವರ್ಷ ರವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಸರಿಯಾದ  ಸಮಯಕ್ಕೆ ಔಷದೋಪಚಾರ ಪಡೆಯದೆ ಮಲಗಿದ್ದಲ್ಲೇ ಮೃತಪಟ್ಟಂತೆ  ಕಂಡುಬಂದಿರುತ್ತೆ,  ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-01-2013 ರಂದು ಪಿರ್ಯಾದಿ ಬಿ.ಆರ್.ಉಮಾ ಮಹಿಳಾ ಎ,ಎಸ್.ಐ. ಮಂಡ್ಯಪೂರ್ವ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅಪರಿಚಿತ ಗಂಡಸು  ವಯಸ್ಸು ಸುಮಾರು 60 ರಿಂದ 70 ವರ್ಷ ರವರು ಪ್ರಯಾಣಿಕರ ತಂಗುದಾಣದಲ್ಲಿ ಹೋಗಿ ಕುಳಿತು ಹಾಗೆಯೆ ಮಲಗಿಕೊಂಡು ಸ್ವಲ್ಪ ಸಮಯದ ನಂತರ ಬಾಯಿಂದ ರಕ್ತ ಬಂದು ಮೃತಪಟ್ಟಿರುವುದಾಗಿ ಯಾರೋ ಬಂದು ಪಿರ್ಯಾದಿಗೆ ತಿಳಿಸಿದಾಗ ಪಿರ್ಯಾದಿಯು ಹೋಗಿ ನೋಡಲಾಗಿ ಬಾಯಿಯಲ್ಲಿ ರಕ್ತ  ಬಂದು ಮೃತಪಟ್ಟಿದ್ದು ಮೃತನು ಯಾವುದೋ ಕಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವು-ದಾಗಿದ್ದು ತಾವುಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಿ ಅಂತ ಕೊಟ್ಟ  ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 286, 5 ಇಂಡಿಯನ್ ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಕಾಯ್ದೆ 1908 ಕಲಂ.9 [ಬಿ] 1884 ಹಾಗು 504,324,323,506 ಕೂಡ 34 ಐ.ಪಿ.ಸಿ.

        ದಿನಾಂಕ: 16-01-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿಃ 16-01-13ರಂದು ಮಧ್ಯಾಹ್ನ ಫಿಯರ್ಾದಿಯವರಿಗೆ ಮಾಹಿತಿ ಬಂದ ಮೇರೆಗೆ ಫಿಯರ್ಾದಿಯವರು ತಮ್ಮ ಠಾಣಾ ಸಿಬ್ಬಂದಿಗಳಾದ ಎಎಸ್ಐ ಶಿವಮಂಜು, ಪಿಸಿ-03,120,97,85,725 ರವರೊಂದಿಗೆ ಇಲಾಖಾ ಜೀಪ್ ನಂ. ಕೆ.ಎ-11-ಜಿ-250ರಲ್ಲಿ ಪಂಚಾಯಿತಿದಾರರನ್ನು ಕರೆದುಕೊಂಡು ಮುಂಡುಗದೊರೆ ಗ್ರಾಮದ ಸವರ್ೆ ನಂ.351 ಎಂ.ಟಿ ರವೀಚಿದ್ರರವರ ಕಲ್ಲು ಕ್ವಾರೆಯ ಮೇಲೆ ದಾಳಿ ಮಾಡಿ, ಅದರಲ್ಲಿದ್ದ 1] ಶಿವಣ್ಣ ಬಿನ್ ಮರಿಗೌಡ ಮತ್ತು 2] ಶಿವಣ್ಣ ಬಿನ್ ಲೇ. ಬಾಗೂರಯ್ಯನವರನ್ನು ವಶಕ್ಕೆ ತೆಗೆದುಕೊಂಡು 149 ಕೇಪುಗಳು, 6 ಕೆ.ಜಿ ರಾಸಾಯನಿಕ ಉಪ್ಪು, ಮೆಗ್ಗರ್ ಬಾಕ್ಸ್, 2 ಕಟ್ಟು ತಂತಿ, ಡೀಸೈಲ್ ಪೈಪನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತದೆ. ಆರೋಪಿಗಳಾದ ಎಂ.ಟಿ ರವೀಂದ್ರ ಮತ್ತು ಇತರೆ  ಎ-2, ಎ-3 ಮುಂಡುಗದೊರೆ ಗ್ರಾಮ, ಶ್ರೀರಂಗಪಟ್ಟಣ ತಾ. ರವರುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

ದಿನಾಂಕ: 16-01-2013 ರಂದು ಪಿರ್ಯಾದಿ ಲಲಿತಾ ಕೊಂ. ರಾಜಯ್ಯ, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-01-13 ರಂದು ಪಿರ್ಯಾದಿ ಮನೆ ಕೆಲಸಕ್ಕೆಂದು ಹೊರಗಡೆ ಹೋಗಿದ್ದು ಕೆಲಸ ಮುಗಿಸಿ ವಾಪಸ್ ಬಂದು ಮನೆಯಲ್ಲಿ ನೋಡಿದಾಗ ಬೆಳಗ್ಗೆ 09-30 ಗಂಟೆಯಲ್ಲಿ ಮಗಳಾದ ಮಂಗಳ ಹರಿಹರಪುರಕ್ಕೆ ಬಟ್ಟೆಯನ್ನು ಹೊಲೆಯಲು ಕೊಡುತ್ತೇನೆಂದು ನಮ್ಮ ಪಕ್ಕದ ಮನೆಯವರಿಗೆ ಹೇಳಿ ಹೋದವಳು ಮತ್ತೆ ವಾಪಸ್ ಬಂದಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 16-01-2013 ರಂದು ಪಿರ್ಯಾದಿ ನಾಗಮಣಿ ಕೋಂ. ನಿಂಗರಾಜಾಚಾರಿ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ  ನನ್ನ ಗಂಡ ನಿಂಗರಾಜಚಾರಿ ರವರು ದಿ: 13-01-13 ರಂದು ಸಂಜೆ 06-00 ಗಂಟೆಯಲ್ಲಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿ ಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 33/2013 ಕಲಂ: ಮನುಷ್ಯ ಕಾಣೆಯಾಗಿದ್ದಾನೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. 


ರಾಬರಿ ಪ್ರಕರಣ : 

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 392 ಐ.ಪಿ.ಸಿ.

         ದಿನಾಂಕ: 16-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ ಚಿಕ್ಕೇಗೌಡ, ಕೋಡಿ ಹೊಸೂರು ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಯಾರೋ ಕಳ್ಳರು ಹಿಂದಿನಿಂದ ಬಂದು ಟವಲ್ ಅನ್ನು ಹಾಕಿ ಕೈಗಳಿಂದ ಟವೆಲ್ನ್ನು ಹಾಗೂ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ಕೆಳಕ್ಕೆ ಕೆಡವಿಕೊಂಡು ನನ್ನ ಕುತ್ತಿಗೆಯಲ್ಲಿದ್ದ 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯದ ಸರ ಕಿತ್ತುಕೊಂಡು ಹೊರಟು ಹೋದರು ನನಗೆ ಅಸ್ತಮಾ, ಬಿ.ಪಿ ಮತ್ತು ಶುಗರ್ ಕಾಯಿಲೆಗಳಿದ್ದುದರಿಂದ ನನಗೆ ಸ್ವಲ್ಪ ಹೊತ್ತು ಪ್ರಜ್ಞೆ ತಪ್ಪಿದಂತಾಯಿತು, ನಂತರ ಎಚ್ಚರವಾದಾಗ ಸುಧಾರಿಸಿಕೊಂಡು ನಮ್ಮ ಹೊಲದಲ್ಲೆಲ್ಲಾ ನನ್ನ ಸರ ಬಿದ್ದುಹೋಗಿದೆಯೆ ಎಂಬುದಾಗಿ ಹುಡುಕಾಡಿ ನೋಡಿದೆವು ಸಿಗಲಿಲ್ಲ. ನಂತರ ಮನೆಗೆ ಬಂದು ವಿಚಾರವನ್ನು ತಿಳಿಸಿದೆನು. ನಮಗೆ ಸ್ವಲ್ಪ ತಿಳುವಳಿಕೆ ಇಲ್ಲದಿದ್ದರಿಂದ ಇದರ ಬಗ್ಗೆ ಏನು ಮಾಡಬೇಕೆಂದು ಗೊತ್ತಾಗದೆ. ಬೆಂಗಳೂರಿನಲ್ಲಿರುವ ನನ್ನ ಎರಡನೇ ಮಗ ಮತ್ತು ನಾಲ್ಕನೆ ಮಗನಿಗೆ ಫೋನ್ ಮಾಡಿ ಈ ವಿಚಾರವನ್ನು ತಿಳಿಸಿದೆ, ಕೊನೆಯ ಮಗ ತಮ್ಮಣ್ಣನು ಈ ದಿವಸ ಊರಿಗೆ ಬಂದು ಕಂಪ್ಲೇಟ್ ಕೊಡೋಣ ಬಾ ಎಂದು ಹೇಳಿ ಕರೆದುಕೊಂಡು ಬಂದಿರುತ್ತಾನೆ. ನನ್ನ ಸರವನ್ನು ಕಿತ್ತುಕೊಂಡು ಹೋಗಿರುವ ಕಳ್ಳರನ್ನು ಹಾಗೂ ಸರವನ್ನು ಪತ್ತೆ ಮಾಡಿಕೊಡಿ, 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಮಾಂಗಲ್ಯ ಸರದ ಅಂದಾಜು ಬೆಲೆ ಸುಮಾರು 1.5 ಲಕ್ಷ ರೂ. ಎಂಬಿತ್ಯಾದಿಯಾಗಿ ಫಿರ್ಯಾದಿಯವರು ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

No comments:

Post a Comment