Moving text

Mandya District Police

DAILY CRIME REPORT DATED : 13-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  1 ವಂಚನೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಕೃಷ್ಣಮೂರ್ತಿ ಬಿನ್. ರಾಮಚಂದ್ರು, ಚಿಕ್ಕ ಬಾಣಸವಾಡಿ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಒಂದು ಪರ್ಸ್  ಹಾಗೂ ಪಿರ್ಯಾದಿಯವರ ತಾಯಿಯ ಒಂದು ಪರ್ಸನ್ನು  ಯಾರೋ ಕಳ್ಳತನ ಮಾಡಿದ್ದು, 7000/- ರೂ ಹಣ, ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ, 1.500/- ರೂ ಹಣ ಇದ್ದು ಒಟ್ಟು 8500/- ರೂ. ಬೆಲೆ ಬಾಳುವುದಾಗಿದ್ದು ಇವುಗಳನ್ನು ಕಳ್ಳತನ ಮಾಡಿರುತ್ತಾರೆ ರತ್ನ ಎಂಬುವವರ ಮೇಲೆ ಅನುಮಾನುವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ತಿಮೇಗೌಡ @ ದೊಳ್ಳೇಗೌಡ, ಒಕ್ಕಲಿಗರು, ವ್ಯವಸಾಯ, ಸೋಮನಹಳ್ಳಿ, ಕೊಪ್ಪ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿನಾಂಕ:13-01-2013 ರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಮೀನಿನ ಬಳಿ ಹೋಗಲಾಗಿ ಮೋಟಾರ್ ಅಳವಡಿಸಿದ್ದ ಪೆಟ್ಟಿ ಬೀಗ ಜಡಿದು ಒಳಗಿದ್ದ ಸ್ಟಾಟರ್ ಅನ್ನು ಯಾರೋ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರೊಡನೆ ಇದ್ದ ಸಿಂಗಲ್ ಕಾಯಿಲ್ ವೈರ್ ಸಹ ಇರುವುದಿಲ್ಲ. ಇವುಗಳ ಒಟ್ಟು ಅಂದಾಜು ಮೌಲ್ಯ ಹತ್ತು ಸಾವಿರ ರೂ.ಗಳಾಗಿರುತ್ತೆ. ಹಾಗಾಗಿ ತಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಟಾಟರ್ನ್ನು ಪತ್ತೆ ಮಾಡಿಸಿಕೊಡಬೇಕೆಂದು ಮತ್ತು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 420 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಗೀತಾ ಕೋಂ. ನಿರಂಜನ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಕೈಗೆ ಪುಡಿಯನ್ನು ಹಾಕಿದಾಗ ಪಿರ್ಯಾದಿಗೆ ಏನಾಯಿತು ಎಂದು ತಿಳಿಯಲಿಲ್ಲ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಸರು ವಿಳಾಸ ತಿಳಿಯಬೇಕಾಗಿದೆ ಪಿರ್ಯಾದಿಯವರ ಗಮನವನ್ನು ಬೇರೆ ಕಡೆಗೆ ಸೆಳೆದು ನಂಬಿಸಿ ಪಿರ್ಯಾದಿಯವರ ಕತ್ತಿನಲ್ಲಿದ್ದ ಎರಡು ಎಳೆ ಮಾಂಗಲ್ಯದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 457-380 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಪ್ರಕಾಶ್ ಎನ್, ಬಿನ್. ಲೇಟ್. ನಂಜುಂಡರಾವ್, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಂಗಡಿಗೆ ಹಾಕಿದ್ದ ಬೀಗ ಮತ್ತು ಡೋರ್ಲಾಕ್ ನ್ನು ಒಡೆದು ಒಳಗಡೆಯಿದ್ದ 12000/- ರೂ ನಗದು, ಕಂಪ್ಯೂಟರ್ನ ಸಿಪಿಯು ಅನ್ನು ಹಾಗೂ ರಿಪೇರಿಗೆಂದು ಕೊಟ್ಟಿದ್ದ ಹಳೆಯ ಮೊಬೈಲ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಅಂದಾಜು ಬೆಲೆ ಸುಮಾರು 22000/- ರೂಗಳಾಗುತ್ತದೆ, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ .ವರ್ತಮಾನ .ವರದಿ ದಾಖಲಿಸಲಾಗಿದೆ.  

No comments:

Post a Comment