Moving text

Mandya District Police

Detection in S R PATNA POLICE STATION

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
  ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 30-03-2012 

ಪತ್ರಿಕಾ ಪ್ರಕಟಣೆ

ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ,  ಬಾಬುರಾಯನಕೊಪ್ಪಲಿನಲ್ಲಿ ಇತ್ತೀಚಗೆ ಲಾರಿಯ ಕಳ್ಳತನವಾಗುತ್ತಿದ್ದು ಈ ಲಾರಿಗಳು ಕಳ್ಳತನವಾದ 2-3 ದಿನಗಳಲ್ಲಿ ಕೊಳ್ಳೇಗಾಲ,  ಸಂತೆಮರಳ್ಳಿ, ಚಾಮರಾಜನಗರಗಳ ಕಡೆ ಕಾಡು ರಸ್ತೆಗಳಲ್ಲಿ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸಿ, ಕಳ್ಳರು ಹೋರಟು ಹೋಗುತ್ತಿದ್ದರೆಂದು, ಈ ಸಂಬಂಧವಾಗಿ ಲಾರಿಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎ.ವಿ.ವೆಂಕಟೇಶ ಮೂತರ್ಿರವರ ನೇತೃತ್ವದಲ್ಲಿ ಪಿ.ಎಸ್.ಐ ವೆಂಕಟರಾಮಪ್ಪ ಮತ್ತು ಸಿಬ್ಬಂದಿಗಳಾದ ಸಿ.ಪಿ.ಸಿ-01 ಸಿದ್ದರಾಜು, 471- ಕೆ.ಶ್ರೀನಿವಾಸಮೂತರ್ಿ, 633-ಕೃಷ್ಣಶೆಟ್ಟಿ, 638-ಪ್ರಕಾಶರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ದಿನಾಂಕಃ 26-03-12 ರಂದು ಬಾಬುರಾಯನಕೊಪ್ಪಲಿನಲ್ಲಿ ಬೆಳಿಗ್ಗೆ 1030 ಗಂಟೆಯಲ್ಲಿ     ಕೆ.ಎ-16-ಎ-8449 ಲಾರಿಯು ಕಳ್ಳತನವಾಗಿದ್ದು, ಇದರ ಪತ್ತೆ ಬಗ್ಗೆ ಪಿ.ಎಸ್.ಐ, ಶ್ರೀರಂಗಪಟ್ಟಣ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಕಳುಹಿಸಿದ್ದು ದಿನಾಂಕ-29-03-2012 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ ಲಾರಿ ಮತ್ತು ಆರೋಪಿಗಳನ್ನು ತಲಾಸು ಮಾಡಿಕೊಂಡು ಹೋಗಿದ್ದ ಸಿಬ್ಬಂದಿಯವರಿಗೆ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಬಳಿಯ ಹುಲ್ಲೇಪುರ ಗ್ರಾಮದ ಬಳಿ ಆರೋಪಿಗಳು ಟೈರ್ಗಳನ್ನು ಬಿಚ್ಚುತ್ತಿದ್ದು ಕಂಡು ಬಂದಿದ್ದು, ಕೂಡಲೇ ಆರೋಪಿಗಳನ್ನು ಅದಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು,  ಆರೋಪಿಗಳ ಹೆಸರು 1] ದೊರೆಸ್ವಾಮಿ ಬಿನ್ ಲೇಟ್ ಸುಬ್ಬಯ್ಯ, 50 ವರ್ಷ, ವ್ಯವಸಾಯ, ವಾಸ-ಹುಲ್ಲೇಪುರ ಗ್ರಾಮ, ಚಾಮರಾಜನಗರ ತಾಲ್ಲೋಕು & ಜಿಲ್ಲೆ. 2] ನಟರಾಜ ಬಿನ್ ಲೇಟ್ ಲೆಂಕಶೆಟ್ಟಿ, 26 ವರ್ಷ, ಕೂಲಿ ಕೆಲಸ, ವಾಸ- ಮಹಂತಾಳಪುರ ಗ್ರಾಮ, ಸಂತೆಮರಳ್ಳಿ ಹೋಬಳಿ, ಚಾಮರಾಜನಗರ ಜಿಲ್ಲೆ ಎಂದು ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಸಿ ರಮೇಶ ಎಂಬುವವನು ತಪ್ಪಿಸಿಕೊಂಡು ಹೋಗಿರುತ್ತಾನೆ. 

     ಇವರನ್ನು  ಪಿ.ಎಸ್.ಐ ರವರು ವಿಚಾರ ಮಾಡಲಾಗಿ ಆರೋಪಿಗಳು ಲಾರಿಯನ್ನು ತಾವೇ ಕಳ್ಳತನ ಮಾಡಿ, ಟೈರ್ ಗಳನ್ನು ಬಿಚ್ಚುತ್ತಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ಲಾರಿ ಸಮೇತ ಶ್ರೀರಂಗಪಟ್ಟಣ ಠಾಣೆಗೆ ಕರೆದುಕೊಂಡು ಬಂದು ಸಿ.ಪಿ.ಐ ವೆಂಕಟೇಶ ಮೊರ್ತಿರವರ ಮುಂದೆ ಹಾಜರುಪಡಿಸಿದ್ದು, ಸಿ.ಪಿ.ಐರವರು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಈವರೆಗೆ ಕಳ್ಳತನವಾಗಿ ಶ್ರೀರಂಗಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆಃ 328/11, 545/11, 605/11, 640/11, 159/12, 189/12  ರ ಒಟ್ಟು 6 ಪ್ರಕರಣಗಳಲ್ಲಿ ಕಳುವಾಗಿರುವ ಲಾರಿಗಳನ್ನು ಕಾಡಿಗೆ ಹೋಗುವ ರಸ್ತೆಗಳಲ್ಲಿ ತೆಗೆದುಕೊಂಡು ಹೋಗಿ ಅವುಗಳ ಚಕ್ರಗಳನ್ನು ಬಿಚ್ಚಿಕೊಂಡು ಅಲ್ಲಿಯೇ ನಿಲ್ಲಿಸುತ್ತಿದ್ದರೆಂದು ತಮ್ಮ ಸ್ವ-ಇಚ್ಚಾ ಹೇಳಿಕೆಯ ಕಾಲದಲ್ಲಿ  ತಿಳಿಸಿರುತ್ತಾರೆ. 

ಮೇಲ್ಕಂಡ 5 ಪ್ರಕರಣಗಳಲ್ಲಿ ಈಗಾಗಲೇ ಲಾರಿಗಳು ಕೊಳ್ಳೇಗಾಲ ಮತ್ತು ಸುತ್ತ ಮುತ್ತ ಕಾಡಿಗೆ ಹೋಗುವ ರಸ್ತೆಗಳಲ್ಲಿ 3-4 ಚಕ್ರವಿಲ್ಲದೇ ನಿಂತಿದ್ದವುಗಳನ್ನು ಪತ್ತೆ ಹಚ್ಚಿ ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

ಆರೋಪಿಗಳಿಂದ 1] ಒಂದು ಕೆ.ಎ-16-ಎ-8449 ಲಾರಿ 2] 15 ಡಿಸ್ಕ್ ಸಹಿತ ಇರುವ ಚಕ್ರಗಳು 3] 2 ಟಾರ್ಪಲ್ 4] ಒಂದು ಜಾಕ್ ಮತ್ತು ರಾಡು 5] 2 ಹಗ್ಗಗಳು ಇವುಗಳನ್ನು ಆರೋಪಿ ದೊರೆಸ್ವಾಮಿಯ ಮನೆಯಲ್ಲಿ ಅಡಗಿಸಿಟ್ಟಿದ್ದು ಅವುಗಳನ್ನು ಪೊಲೀಸ್ ಅದಿಕಾರಿಗಳು ಅಮಾನತ್ತುಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 10,50,000/- ರೂಗಳಾಗಿರುತ್ತೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

No comments:

Post a Comment