Moving text

Mandya District Police

Press Note

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ
ದಿನಾಂಕಃ 18-02-2012
ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 4 ಮಂದಿ ಆರೋಪಿಗಳ ಬಂಧನ ಇವರುಗಳಿಂದ 1ಲಕ್ಷ ರೂ ಮೌಲ್ಯದ ಕಳುವು ಮಾಡಿದ್ದ 1140 ಕೆ.ಜಿ.ಯಷ್ಟು ಕಬ್ಬಿಣದ ಆಂಗ್ಲರ್ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಟಾಟಾ 407 ನಂಬರ್ ಕೆ.ಎ-12, 2488 ವಾಹನ ವಶ.

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದವರು ಬಾತ್ಮೀದಾರರ ಮಾಹಿತಿ ಮೇರೆಗೆ ದಿನಾಂಕಃ 17-02-2012 ರಂದು ಬೆಳಗಿನ ಜಾವ 0500 ಗಂಟೆಯಲ್ಲಿ ಮಂಡ್ಯ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಸಾಯಿ ಮಂದಿರದ ರಸ್ತೆಯ ರಾಜರಾಜೇಶ್ವರಿ ವೇ ಬ್ರಿಡ್ಜ್ ಪಕ್ಕದಲ್ಲಿ ಟಾಟಾ 407 ವಾಹನ ಸಂಖ್ಯೆ ಕೆಎ-12, 2488 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಆಸಾಮಿಗಳನ್ನು ಅದರಲ್ಲಿದ್ದ 1140 ಕೆ.ಜಿ ತೂಕವಿದ್ದ 13 ಕಬ್ಬಿಣದ ಆಂಗ್ಲರ್ಗಳ ಸಮೇತ ಅವರುಗಳನ್ನು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿಲಾಗಿ ಸದರಿ ಆಸಾಮಿಗಳು ರಾಮನಗರ-ಕನಕಪುರ ರಸ್ತೆಯಲ್ಲಿ ಕೈಲಂಚ ಗ್ರಾಮ ಹೆಂಚಿನ ಫ್ಯಾಕ್ಟರಿ ಬಳಿ ಇದ್ದ ಸುಮಾರು 25,000/-ರೂ ಮೌಲ್ಯದ 13 ಕಬ್ಬಿಣದ ಆಂಗ್ಲರ್ಗಳನ್ನು ಕಳುವು ಮಾಡಿಕೊಂಡು ಬಂದು ಮಂಡ್ಯದಲ್ಲಿ ಮಾರಾಟಮಾಡಲು ಹೊಂಚುಹಾಕುತ್ತಿದ್ದಾಗಿ ತಿಳಿಸಿದ್ದು, ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಮೆಲ್ಕಂಡ ಕಬ್ಬಿಣದ ಆಂಗ್ಲರ್ಗಳು ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳ ಹೆಸರು-ವಿಳಾಸ :

1] ಅಜ್ಜುಂ. ಬಿನ್, ಮಹಮದ್ ಯೂಸಫ್, 26 ವಸ ವಾಸ, ಹೊಂಗನೂರು, ರಾಮನಗರ ಟೌನ್.
2] ಮುರುಗ, ಬಿನ್, ರಾಜ,23 ವರ್ಷ, ವಾಸ, ಆಸ್ಪತ್ರೆ ಶೆಡ್, ಮಂಡ್ಯ ಸಿಟಿ.
3] ಸಲೀಂ ಪಾಷ, ಬಿನ್ ತಾಜ್ ಪಾಷಾ, 23ವರ್ಷ, ವಾಸ, ಟಿಪ್ಪು ನಗರ, ರಾಮನಗರ ಟೌನ್
4] ಖುರಂ ಪಾಷಾ, ಬಿನ್ ಮಹಮದ್ ಗೌಸ್, 35ವರ್ಷ, ವಾಸ-ಲೇಬರ್ ಕಾಲೋನಿ, ಮಂಡ್ಯ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿಎಸ್ಐ ಎಂ. ಮಂಜುನಾಥ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳನ್ನು ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

No comments:

Post a Comment