Moving text

Mandya District Police

dcR of Mandya Dist As on 13-01-12

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ಪ್ರಕರಣಗಳು ವರದಿಯಾಗಿ ಅದರಲ್ಲಿ 4 ರಸ್ತೆ ಅಪಘಾತ ಪ್ರಕರಣ. 1 ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ. 2 ಕಳ್ಳತನ ಪ್ರಕರಣ. 3 ಯು.ಡಿ.ಆರ್ ಪ್ರಕರಣ. 1 ಅಪಹರಣ ಪ್ರಕರಣ ಮತ್ತು 19 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ

1] ಮೊ.ಸಂ 36/12 ಕಲಂ 399-400-402-120 [ಬಿ] ಐಪಿಸಿ ದಿನಾಂಕ 13-01-2012 ರಂದು ರಾತ್ರಿವೇಳೆ ಪಿರ್ಯಾದಿ ಪಿ.ಎಸ್. ಶ್ರೀರಂಗಪಟ್ಟಣ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪ ವಾಹಿನಿ ಬಳಿ ಹೋಗಿ ನೋಡಲಾಗಿ ಒಂದು ಆಟೋ ಮತ್ತು ಒಂದು ಮೋ ಸೈ ನಿಂತಿದ್ದು, ಆರೋಪಿಗಳಾದ ಗುರುರಾಜು ಮತ್ತು ಇತರೆ 5 ಜನರು ಮಾರಕಾಸ್ತ್ರಗಳನ್ನು ಹಿಡಿದು ಪಶ್ಚಿವಾಹಿನಿ ವಾಸಿ ಸರೋಜಮ್ಮ ರವರ ಮನೆಯನ್ನು ಸುತ್ತುವರೆದಿದ್ದು, ಪೊಲೀಸ್ನವರನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದ್ದು ಅನುಮಾನ ಬಂದು ಅವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೋ ದುಷ್ಕೃತ್ಯವೆಸಗಲು ಬಂದಿರುವುದಾಗಿ ತಿಳಿದುಬಂದಿರುವುದರಿಂದ ಸ್ವಯಂ ವರದಿ ನೀಡಿ ದೂರು ದಾಖಲಿಸಿರುತ್ತೆ

ರಸ್ತೆ ಅಪಘಾತ ಪ್ರಕರಣ

1] ಮೊ.ಸಂ 37/12 ಕಲಂ 279-304 [] ಐಪಿಸಿ ರೆ/ವಿ 187 ಐಎಂವಿ ಕಾಯಿದೆ ದಿನಾಂಕ 14-01-12 ರಂದು ಮೃತ ಮಂಜುನಾಥ ರವರು ಹಾಲಿನ ಡೈರಿಗೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂಧ ಚಲಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ಪೆಟ್ಟಾಗಿ ಮೃತಪಟ್ಟ ಬಗ್ಗೆ ದೂರು.

ಮನುಷ್ಯ ಕಾಣೆಯಾದ ಪ್ರಕರಣ

1] ಮೊ.ಸಂ 13/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 14-01-12 ರಂದು ಕಾಣೆಯಾದ ಹೆಂಗಸು ಟಿ.ವಿದ್ಯಾವತಿ ಕೋಂ ರಂಗನಾಥ್, 42 ವರ್ಷ, ರವರು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

2]ಮೊ.ಸಂ 15/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 14-01-12 ರಂದು ಪಿರ್ಯಾದಿ ಗುಲ್ಲ ರವರ ಗಂಡ ಅರ್ಜುನ ಬಿನ್ ಅಶ್ವತ್ ನಾಯ್ಕ್, 35 ವರ್ಷ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ, ನನ್ನ ಗಂಡ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು ಅದರಂತೆ ದಿ:- 04-11-2011 ರಂದು ನಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೋದವನು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ,

ರಾಬರಿ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 14/12 ಕಲಂ 392 ಐಪಿಸಿ ದಿನಾಂಕ 14-01-12 ಪಿರ್ಯಾದಿ ಶಿಲ್ಪ ಕೋಂ ರಾಜೇಗೌಡ ರವರು ಅವರ ಮಗನೊಂದಿಗೆ ಕೆ.ಆರ್.ಪೇಟೆಯಿಂದ ಆರತಿಉಕ್ಕಡಕ್ಕೆ ದೇವರ ಪೂಜೆಗಾಗಿ ಹೋಗಲು ಕೆ.ಆರ್.ಪೇಟೆಯಿಂದ ಟಾಟಾ ಎ.ಸಿ.ಇ.ಸಂಖ್ಯೆ ಕೆಎ11/ಎ1028 ರಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಬರುತ್ತಿದ್ದು ವಾಹನದಲ್ಲಿ ಇತರೆ ಪ್ರಯಾಣಿಕರಿದ್ದರೆಂತ, ವಾಹನ ತೆಂಡೆಕೆರೆ ಮಾರ್ಗವಾಗಿ ಬರುತ್ತಿದ್ದಾಗ ಮಂಚನಹಳ್ಳಿ ಕೆರೆಯ ಸಮೀಪ ಬೆಳಿಗ್ಗೆ 10.30 ಗಂಟೆಯಲ್ಲಿ ತಾವು ಪ್ರಯಾಣಿಸುತ್ತಿದ್ದ ವಾಹನದ ಹಿಂದಿನಿಂದ ಒಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಾವು ಪ್ರಯಾಣಿಸುತ್ತಿದ್ದ ವಾಹನದ ಪಕ್ಕಕ್ಕೆ ಬಂದು ಬ್ಕೆಕ್ನ ಹಿಂದೆ ಕುಳಿತಿದ್ದ ವ್ಯಕ್ತಿ ತಮ್ಮ ಕತ್ತಿಗೆ ಕೈ ಹಾಕಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಸ್ಪೀಡಾಗಿ ಮೈಸೂರು ಕಡೆಗೆ ಹೋರಟು ಹೋದರೆಂತ ಇದರ ಬೆಲೆ ಎರಡು ಲಕ್ಷ ರೂಪಾಯಿಗಳಾಗುತ್ತೆ

ಕಳ್ಳತನ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 15/12 ಕಲಂ 379 ಐಪಿಸಿ ದಿನಾಂಕ 14-01-12 ದಿನಾಂಕ 14-01-12 ರಂದು ಪಿರ್ಯಾದಿ ರೇವಣ್ಣ ರವರ ಬಾಬ್ತು ಕೆಎ-11-ಆರ್-2920 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ-11-ಆರ್ -2920 ಅನ್ನು ಪಾಂಡವಪುರ ಟೌನ್ ತಾಲ್ಲೋಕು ಪಂಚಾಯ್ತಿ ಕಛೇರಿ ಮುಂಬಾಗ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ

2] ಮೊ.ಸಂ 016/12 ಕಲಂ 379 ಐಪಿಸಿ ದಿನಾಂಕ: 12/01/2012 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಮೊಹಮ್ಮದ್ ನಾಸಿರ್ ರವರು ಅವರ ಬಾಬ್ತು ಕೆ.ಎ11, ಕೆ-3772 ಆರೆಂಜ್ ಕಲ್ಲರ್ ಹಿರೋ ಹೊಂಡ ಸ್ಪ್ಲೆಂಡರ್, ಮೋಟಾರ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮನೆಯಲ್ಲಿ ಊಟ ಮಾಡುತ್ತಿದ್ದೆನು, ಊಟ ಮಾಡಿದ ನಂತರ, ವಾಪಸ್ ಅಂಗಡಿಯ ಬಳಿ ಹೋಗಲು, ಮನೆಯ ಮುಂದೆ ನಿಲ್ಲಿಸಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ನೋಡಲಾಗಿ, ಸದರಿ ವಾಹನವು ನಾನು ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಆಗ ನಾನು ಗಾಬರಿಗೊಂಡು, ನನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆಲ್ಲಾ ವಿಚಾರ ಮಾಡಿದರೂ ಪತ್ತೆಯಾಗಿರುವುದಿಲ್ಲ

ಯು.ಡಿ.ಆರ್ ಪಕ್ರರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಯು.ಡಿ.ಆರ್ ನಂ 01/12 ಕಲಂ 174 [ಸಿ] ಸಿ.ಆರ್ ಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ರಾಜು ಚವಾಣ್ ರವರು ಮತ್ತು ಮೃತ ವಿರೆಂದರ್ ಮತ್ತು ಇತರರೆಲ್ಲರೂ ಊಟಮಾಡಿ ಬಿ.ಜಿ.ಕೃಷ್ಣಮೂರ್ತಿ ರವರ ಹೊಸ ಮನೆಯಲ್ಲಿ ಮಲಗಿದ್ದು ನಂತರ ಬೆಳಿಗ್ಗೆ 14/01/2012 ರ ಬೆಳಿಗ್ಗೆ 09-00 ಗಂಟೆಯಾದರೂ ವೀರೆಂದರ್ ಎದ್ದು ಬರಲಿಲ್ಲ ನಾವುಗಳು ಹೋಗಿ ಎಬ್ಬಿಸಿದಾಗ ಏಳಲಿಲ್ಲ ಸ್ಥಳದಲ್ಲೆ ಮೃತಪಟ್ಟಿರುವುದಾಗಿ ಇತ್ಯಾದಿ ದೂರಿನ ಮೇರೆಗೆ.

2] ಯು.ಡಿ.ಆರ್ ನಂ 02/12 ಕಲಂ 174 [ಸಿ] ಸಿ,ಆರ್ ಪಿ.ಸಿ ಪಿರ್ಯಾದಿ ಟಿ ಗೋವಿಂದರಾಜು ರವರ ಅಣ್ಣ ರಾಮ @ ರಾಮಣ್ಣನು ತುಪ್ಪದಮಡುವಿನಿಂದ ಶಿಕಾರಿಪುಕ್ಕೆ ಹೋಗುವುದಕ್ಕೆ ನಾಗಮಂಗಲದಿಂದ ಬರುತ್ತಿದ್ದ ಆಪೇ ಆಟೋ ಕೆಎ-54-1661 ರ ಗಾಡಿಗೆ ಅತ್ತಿ ಆಟೋ ಗಾಡಿಯಿಂದ ಇಳಿಯುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಪ್ರಜ್ಷೆ ತಪ್ಪಿದಾಗ ನಾಗಮಂಗಲ ಜನರಲ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮಾನ್ಸ್ಗೆ ಸೇರಿಸಿದ್ದು ಅಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದ ಕಾರಣ ವಾಪಸ್ ಊರಿಗೆ ಕರೆತರುವಾಗ ಮಾರ್ಗ ಮದ್ಯದಲ್ಲಿ ಮೃತ ಹೊಂದಿರುವುದಾಗಿ ಇತ್ಯಾದಿ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ

3] ಯು.ಡಿ.ಆರ್ ನಂ 02/12 ಕಲಂ 174 ಸಿ.ಆರ್,ಪಿ.ಸಿ ದಿನಾಂಕ 14-01-12 ರಂದು ಮೃತೆ ಚಿಕ್ಕತಾಯಮ್ಮ 50 ವರ್ಷ ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಮೃತಪಟ್ಟಿರುತ್ತಾಳೆ

ಅಪಹರಣ ಪ್ರಕರಣ

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ

1] ಮೊ.ಸಂ 143-341-366 ರೆ/ವಿ 149 ಐಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ಶಿವಲಿಂಗೇಗೌಡ ರವರ ಮಗಳು ಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಮಾಡುತ್ತಿದ್ದು ಈ ದಿವಸ ದಿ.14-12-2012 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಲು ಕೆ.ಎಂ.ದೊಡ್ಡಿ ಓಂ ಶಾಂತಿ ಮಾರ್ಗದ ರಸ್ತೆಯಲ್ಲಿ ತನ್ನ ಸ್ವಂತ ಕೆಎ.11ಎಕ್ಸ್2364 ಟಿವಿಎಸ್, ಮೋಪೆಡ್ ನಲ್ಲಿ ಹೋಗುತ್ತಿದ್ದಾಗ ಈ ಕೇಸಿನ ಆರೋಪಿ ಆಲೂರಯ್ಯ ಮತ್ತು ಇತರರು ಪಿರ್ಯಾದಿ ಮಗಳು ಹೋಗುತ್ತಿದ್ದ ಮೊಪೆಡ್ನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನ ಓಳಗಡೆ ಕಿರುಚದಂತೆ ಕುರಿಸಿಕೊಂಡು, ಹೊಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರು.

No comments:

Post a Comment