Moving text

Mandya District Police

Property Parade Press Meet On 30-10-2011


ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011 ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆ) ವರದಿಯಾದ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿಅಂಶಗಳು.

ವರದಕ್ಷಿಣೆ ಸಾವು ಪ್ರಕರಣಗಳು 3
ವರದಕ್ಷಿಣೆ ಕಿರುಕುಳ ಪ್ರಕರಣಗಳು - 14
ಮಾನಭಂಗ ಪ್ರಕರಣಗಳು -9
ರಸ್ತೆ ಅಪಘಾತ ಪ್ರಕರಣಗಳು (304 ಎ) - 59
ಜೂಜಾಟದ ಪ್ರಕರಣಗಳು - 80
ವೇಶ್ಯಾವಾಟಿಕೆ ಪ್ರಕರಣಗಳು - 2

ಮೇಲ್ಕಂಡ ಅಪರಾಧ ಶೀರ್ಷಿಕೆಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ : ರೂ 1,14,07,501/- (ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು, ವಾಹನಗಳು, ಮೊಬೈಲ್ ಹಾಗೂ ಇತರೆ)

ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ : ರೂ. 57,26,500/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ : ರೂ. 29,44,625/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 40 ಅಪಘಾತ ಪ್ರಕರಣಗಳು , 3 ಕಳವು ಪ್ರಕರಣಗಳು, 9 ಕೆ.ಪಿ.ಕಾಯ್ದೆ, 2 ಹಲ್ಲೆ ಮತ್ತು 1 ಕೊಲೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.

ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 9 ಕಳವು, 15 ಹಲ್ಲೆ, 1 ಅಪಹರಣ, 2 ಅಪಘಾತ ಮತ್ತು 1 ವರದಕ್ಷಿಣೆ ಕಿರುಕುಳ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆಯಾಗಿರುತ್ತದೆ.

ಇದೇ ಅವಧಿಯಲ್ಲಿ 1 ಕೊಲೆ, 1 ದೊಂಬಿ,. 48 ಹಲ್ಲೆ, 2 ವಂಚನೆ, 14 ಅಪಘಾತ ಮತ್ತು 7 ಕಳವು ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತದೆ.







Press Note Dated: 26-10-2011.

ಪತ್ರಿಕಾ ಪ್ರಕಟಣೆ
7 ಜನ ದರೋಡೆಕೋರರ ಬಂಧನ : 5 ಕಾರುಗಳು ಹಾಗೂ ಚಿನ್ನಾಭರಣ ವಶ

ನಾಗಮಂಗಲದಲ್ಲಿ ದಿನಾಂಕ:22-10-2011 ರಂದು ಬೆಳಗಿನ ಜಾವ 02.30 ಗಂಟೆಯಲ್ಲಿ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದಾಗ ನಾಗಮಂಗಲ-ಕೋಟೆಬೆಟ್ಟ ರಸ್ತೆಯ ಪಾಲ ಅಗ್ರಹಾರದ ಹಳ್ಳದ ಸಮೀಪ ರಸ್ತೆಯ ಬದಿಯಲ್ಲಿ ಒಂದು ಇಂಡಿಕಾ ಕಾರ್ ನಿಂತಿದ್ದು, ಅನುಮಾನಗೊಂಡ ಪೊಲೀಸರು ಕಾರಿನ ಹತ್ತಿರ ಹೋಗಿ ಒಳಗಿದ್ದವರನ್ನು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿದ್ದವರ ಬಳಿ ಲಾಂಗು, ಚೈನು ಹಾಗೂ ಚಾಕು ಇದ್ದು, ಸದರಿಯವರುಗಳನ್ನು ಕಾರು ಮತ್ತು ಆಯುಧಗಳ ಸಮೇತ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವರುಗಳ ಹೆಸರುಗಳನ್ನು ಈ ಕೆಳಕಂಡಂತೆ ತಿಳಿಸಿರುತ್ತಾರೆ.

1. ಗೋವಿಂದರಾಜು ಬಿನ್ ಚೆನ್ನರಾಯಪ್ಪ, ದೇಗನಹಳ್ಳಿ ಗ್ರಾಮ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.
2. ರವಿಕುಮಾರ್ ಬಿನ್ ಲೇ|| ಮಲ್ಲೇಶ್, ಗಂಕಾರ್ ನಹಳ್ಳಿ ಗ್ರಾಮ, ಮಧುಗಿರಿ ತಾ||, ತುಮಕೂರು ಜಿಲ್ಲೆ.
3. ವೆಂಕಟೇಶ ಬಿನ್ ಮುನಿಯಪ್ಪ, ಮಾಕಳ್ಳಿ, ಬೆಂಗಳೂರು.
4. ಶ್ರೀಕಾಂತ.ಎಂ. ಬಿನ್ ಲೇ|| ಮಲ್ಲೇಶ, ಮಾವಿನಹಳ್ಳಿ ಗ್ರಾಮ , ಹಾಸನ ಟೌನ್.
5. ರಮೇಶ ಜಿ. ಬಿನ್ ಗಂಗನರಸಯ್ಯ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.

ಮೇಲ್ಕಂಡವರುಗಳನ್ನು ಆ ಸಮಯದಲ್ಲಿ ಹಾಗೂ ಆ ಸ್ಥಳದಲ್ಲಿ ಇದ್ದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಇದ್ದುದರಿಂದ ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿ ಅವರುಗಳು ಆ ಸ್ಥಳದಲ್ಲಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ದರೋಡೆ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಇವರುಗಳನ್ನು ದಿನಾಂಕ:23-10-2011 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖಾ ಸಂಬಂಧ ನಾಗಮಂಗಲ ಪೊಲೀಸ್ ಅಧಿಕಾರಿಗಳು ಪೊಲೀಸ್ ವಶಕ್ಕೆ ತೆಗದುಕೊಂಡು ವಿಚಾರಣೆಗೆ ಒಳಪಡಿಸಲಾಗಿ, ಇವರ ಜೊತೆಗೆ 6] ರೋಷನ್ ಬಿನ್ ಕರೀಂಷ ರೀಪ್, ಸದಾಶಿವನಗರ, ನೆಲಮಂಗಲ ಟೌನ್, 7] ಪಿ.ಶರತಚಂದ್ರ ಬಿನ್ ಪುಟ್ಟಸ್ವಾಮಿ, ಪ್ರಮೋದ್ ಲೇಔಟ್, ಬೆಂಗಳೂರು ರವರುಗಳನ್ನು ದಿನಾಂಕ:26-10-2011 ರಂದು ದಸ್ತಗಿರಿ ಮಾಡಿದ್ದು, ಮೇಲ್ಕಂಡ ಎಲ್ಲಾ ಆರೋಪಿಗಳು ಈ ಕೆಳಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.

ಡಾಬಸ್ ಪೇಟೆ ಬಳಿ ಒಂದು ಟಾಟಾ ಸುಮೋ, 2 ಇಂಡಿಕಾ ಕಾರು, ನಂಜನಗೂಡು ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಎನ್.ಹೆಚ್.48 ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಡ್ರಾಪ್ ಕೇಳುವ ನೆಪದಲ್ಲಿ ಕಾರಿಗೆ ಹತ್ತಿಕೊಂಡು ಚಾಲಕರುಗಳಿಗೆ ಲಾಂಗ್ ಮತ್ತು ಚಾಕು ತೋರಿಸಿ ಹೆದರಿಸಿ ಅವರಿಂದ ಕಾರು ಹಾಗೂ ಮೊಬೈಲ್ ಗಳನ್ನು ದೋಚಿಕೊಂಡು ಹೋಗಿರುವುದಾಗಿಯೂ ಅದೇ ರೀತಿ ಬೆಳ್ಳೂರು ವ್ಯಾಪ್ತಿಯ ಗುರುದರ್ಶನ ಹೋಟೆಲ್-ಅಗಚಹಳ್ಳಿ ಮಧ್ಯೆ ಸರ್ವಿಸ್ ರಸ್ತೆಯ ಬಳಿ ಹಾಗೂ ತುಮಕೂರು ರಸ್ತೆಯ ಪಾಳ್ಯದಹಳ್ಳಿ ಗೇಟ್ ಬಳಿ ಮತ್ತು ತುಮಕೂರು ಜಿಲ್ಲೆಯ ಕೊರಟಿಕೆರೆಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸರಿಗೆ ಲಾಂಗ್ ನಿಂದ ಹೆದರಿಸಿ ಕತ್ತಿನಲ್ಲಿದ್ದ ಸರಗಳನ್ನು ಕಿತ್ತುಕೊಂಡಿರುವುದಾಗಿ ತಿಳಿಸಿರುತ್ತಾರೆ. ಅವರ ಹೇಳಿಕೆ ಅನುಸಾರ ಮೇಲ್ಕಂಡವರುಗಳಿಂದ ಸುಮಾರು 22 ಲಕ್ಷ ಬೆಲೆ ಬಾಳುವ 5 ಕಾರುಗಳು, ಚಿನ್ನದ ಆಭರಣಗಳು ಹಾಗೂ ಮೊಬೈಲ್ ಪೋನ್ ಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ನಾಗಮಂಗಲ ವೃತ್ತ ನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಿನಯ್ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.

Press Note Date: 15-10-2011

ಪತ್ರಿಕಾ ಪ್ರಕಟಣೆ

1. ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 150/2011 ಕಲಂ 3 Cl (10) SC/ST Act, 1989 ಕೂಡ 143-427-504-114-506 ಕೂಡ 149 ಐಪಿಸಿ

ದಿನಾಂಕ:08-09-2011 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಗಣೇಶ ಉತ್ಸವಕ್ಕೆ ತಮಟೆ ಬಡಿಯಲಿಲ್ಲವೆಂಬ ವಿಚಾರಕ್ಕೆ ಸವರ್ಣೀಯರ ಮತ್ತು ಪರಿಶಿಷ್ಠ ಜನಾಂಗದವರ ನಡುವೆ ಉಂಟಾಗಿದ್ದ ಮನಸ್ತಾಪದ ವಿಚಾರದಲ್ಲಿ ಹಾಗೂ ದಿನಾಂಕ:05-10-2011 ರಂದು ರಾತ್ರಿ ಅದೇ ಗ್ರಾಮದ ಪರಿಶಿಷ್ಠ ಜನಾಂಗದವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದ ವಿಚಾರದಲ್ಲಿ ಕಸುವಿನಹಳ್ಳಿ ಗ್ರಾಮದ ಶಿವರಾಜು ಎಂಬುವವರು ದಿನಾಂಕ:10-10-2011 ರಂದು ನೀಡಿದ ದೂರಿನ ಮೇರೆಗೆ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ದಿನಾಂಕ:13-10-2011 ರಂದು ಈ ಕೆಳಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಶಿವಣ್ಣ @ ಶಿವರಾಮು ಬಿನ್ ಲೇ|| ದ್ಯಾವರೇಗೌಡ, 48 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
2. ಹಲಗೇಗೌಡ ಬಿನ್ ಲೇ|| ಕರೀಗೌಡ, 70 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
3.ನಿಂಗಮ್ಮ ಕೋಂ ಲೇ|| ಜವರಯ್ಯ ಉ ಜವರೇಗೌಡ, ವಕ್ಕಲಿಗರು, ಕಸುವಿನಹಳ್ಳಿ ಗ್ರಾಮ.

ಮೇಲ್ಕಂಡ ಆರೋಪಿಗಳು ದಿನಾಂಕ:13-10-2011 ರಂದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುತ್ತಾರೆ.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇನ್ನುಳಿಕೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಎಂ.ಕೃಷ್ಣಪ್ಪ ಬಿನ್ ಲೇ|| ಮುದ್ದೇಗೌಡ, 57 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
2.ಪುಟ್ಟಪ್ಪ ಬಿನ್ ಲೇ|| ಕಾಳೇಗೌಡ, 68 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
3.ಕೆ.ಪಿ.ಪಾಪೇಗೌಡ ಬಿನ್ ಲೇ|| ಕಾಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
4.ತೂಬಿನಕೆರೆ ವೆಂಕಟೇಶ ಬಿನ್ ತಿಮ್ಮೇಗೌಡ, 40 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
5.ಕೆ.ಎಂ.ಪುಟ್ಟೇಗೌಡ ಬಿನ್ ಮಾಯಣ್ಣ, 40 ವರ್ಷ, ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
6.ಮಂಜ @ ಕೆ.ಪಿ.ಮಂಜೇಗೌಡ ಬಿನ್ ಜಿ.ಪುಟ್ಟೇಗೌಡ,31 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
7. ರಮೇಶ ಬಿನ್ ಲೆ|| ಮಾಯಣ್ಣ, 39 ವರ್ಷ,ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು.
8. ಅಕ್ಕಮ್ಮ ಕೋಂ ಲೇ|| ಮೆಡ್ಡಣ್ಣ @ ಚಿಕ್ಕ್ಕಮಾಯಣ್ಣ, 60 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು

ಸದರಿ ಪ್ರಕರಣದಲ್ಲಿ ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.

2. ಕಿರುಗಾವಲು ಪೊಲೀಸ್ ಠಾಣೆಯ ಮೊ.ಸಂ,118/2011 ಕಲಂ 341-324 ಕೂಡ 34 ಐಪಿಸಿ ಮತ್ತು 3 ಕ್ಲಾಸ್ (1) (X) ಎಸ್.ಟಿ/ಎಸ್.ಸಿ ಆಕ್ಟ್ 1989

ದಿನಾಂಕ:09-10-2011 ರಂದು ಸಂಜೆ ಕಿರುಗಾವಲು ಗ್ರಾಮದ ಶ್ರಂಗಾರ ಹೇರ್ ಡ್ರೆಸಸ್ ಸೆಲೂನ್ ನಲ್ಲಿ ಅದೇ ಗ್ರಾಮದ ಪರಿಶಿಷ್ಠ ಜನಾಂಗಕ್ಕೆ ಸೇರಿದ ಚಿಕ್ಕಮಂಚಯ್ಯ ಬಿನ್ ಲೇ|| ಪುಟ್ಟಮಂಚಯ್ಯನು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದಾಗ ಅಂಗಡಿ ಮಾಲೀಕರಾದ ಮರಿ ಬಿನ್ ಲೇ|| ಸಿದ್ದಯ್ಯ ಮತ್ತು ಆತನ ಮಗನಾದ ಮಹಾದೇವ ಇವರಿಬ್ಬರೂ ಕ್ಷೌರ ಮಾಡುವ ವಿಚಾರದಲ್ಲಿ ಜಗಳ ತೆಗದು, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
1. ಮರಿ ಬಿನ್ ಲೇ|| ಸಿದ್ದಯ್ಯ, 72 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.
2. ಮಹಾದೇವ ಬಿನ್ ಸಿದ್ದಯ್ಯ, 32 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.

ಕಿರುಗಾವಲು ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

DCR