Moving text

Mandya District Police

raid on 06-11-11

ದಿನಾಂಕ: 06-11-11 ರಂದು ಸಂಜೆ 06-00 ಗಂಟೆಯ ಸಮಯದಲ್ಲಿ ಶ್ರೀ ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ . ಡಿ.ಸಿ.ಐ.ಬಿ ಡಿ,ಪಿ.ಓ ಮಂಡ್ಯ ರವರಿಗೆ ಬಾಕ್ಮಿಧಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಟೌನಿನ, ಮಂಡ್ಯ - ಕೊಪ್ಪ ಮುಖ್ಯ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿರುವ ಪ್ರಕಾಶರವರ ಬಿಲ್ಡಿಂಡ್ ನಲ್ಲಿ, ಸತೀಶ ಎಂಬುವವರ ಚಿಲ್ಲರೆ ಅಂಗಡಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ. ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತ್ತು ಸಿಬ್ಬಂದಿಗಳಾದ ಎಂ.ಎಸ್. ಗುರುಸ್ವಾಮಿ. ಸಿ.ಹೆಚ್.ಸಿ 277. ಸಿ.ಹೆಚ್.ಸಿ 04 ಮಾದಯ್ಯ. ಸಿ.ಹೆಚ್.ಸಿ 191 ಸಿ.ಡಿ. ನಿಂಗೇಗೌಡ. ಸಿಪಿಸಿ 343 ವಿ. ಬಾಬು. ಸಿ.ಪಿ.ಸಿ. 580 ರಮೇಶ. ಸಿಪಿಸಿ 731 ಅರಸು. ಎ.ಪಿ.ಸಿ. ಕೇಶವ ಮೂರ್ತಿ ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಒಬ್ಬ ಅಸಾಮಿ ನಿಂತಿದ್ದು ಆತನನ್ನು ವಿಚಾರ ಮಾಡಲಾಗಿ ನನ್ನ ಹೆಸರು ಸತೀಶ ಎಂದು ತಿಳಿಸಿದ ಮತ್ತೊಂದು ಕೋಣೆಯಲ್ಲಿ 5 ಜನರು ಬಾರ್ ಮಾದರಿಯಲ್ಲಿ ಕುಳಿತು ಕೊಂಡು ಕುಡಿಯುತ್ತಿದ್ದು. ಸತೀಶನನ್ನು ಯಾವುದಾದರು ಲೈಸನ್ಸ್ ಇದೆಯೇ ಎಂದು ಕೇಳಲಾಗಿ ಯಾವುದೇ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿದ,. ನಂತರ ಆತನ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯಲ್ಲಿ ಸೂಪರ್ ಜಾಕ್ 180 ಎಂ.ಎಲ್ ನ 1 ಬಾಟಲ್. ಸೂಪರ್ ಜಾಪ್ ಕ್ಲಾಸಿಕ್ 180 ಎಂ.ಎಲ್ 1 ಬಾಟಲ್. ಸಾವರಿನ್ ಬ್ರಾಂಡಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಟ್ರವಿನ್ ವಿಸ್ಕಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಅಡಿವಿರಲ್ ಬ್ರಾಂಡಿ 3 ಬಾಟಲ್, ಓಲ್ಡ್ ಅಡಿವಿರಲ್ ಬ್ರಾಂಡಿ 90 ಎಂ.ಎಲ್ 1 ಬಾಟಲ್ ಮತ್ತು ಮ್ಯಾಕ್ ಡುವೆಲ್ ಬ್ರಾಂಡಿ 90 ಎಂ.ಎಲ್ ನ 7 ಬಾಟಲ್ ಗಳು ಮತ್ತು ಈ ದಿನ ವ್ಯಾಪಾರ ಮಾಡಿದ ಬಾಬ್ತು ರೂ 2606/- ಹಣವನ್ನು ಸದರಿ ವ್ಯಕ್ತಿಯಿಂದ ವಶಪಡಿಸಿಕೊಂಡು. ಅನಧಿಕೃತವಾಗಿ ಬಾರ್ ನಡೆಸುತ್ತಿದ್ದ ಬಾರ್ ಮಾಲೀಕನಾದ ಸತೀಶನ ವಿರುದ್ದ ಕೆರಗೋಡು ಪೊಲೀಸ್ ಠಾಣೆಯ ಮೊ.ಸಂ 197/11 ಕಲಂ 32-34 ಕೆ.ಇ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿ ನ್ಯಾಯಾಲಕ್ಕೆ ಹಾಜರ್ ಪಡಿಸಿರುತ್ತೆ

No comments:

Post a Comment