Moving text

Mandya District Police

press Note Dated: 24-06-2011.

Press Note Dated: 13-06-2011.

ಪತ್ರಿಕಾ ಪ್ರಕಟಣೆ

ದಿನಾಂಕ:05-06-2011 ರಂದು ಮದ್ದೂರು ತಾಲ್ಲೂಕು, ಸಿ.ಎ.ಕೆರೆ ಹೋಬಳಿ, ಚಂದೂಪುರ ಗ್ರಾಮದ ವಾಸಿ ಲೇ||ಮರೀಗೌಡರವರ ಮಗನಾದ ಸಿ.ಎಂ.ಪ್ರದೀಪಕುಮಾರ್ ರವರು ಮಳವಳ್ಳಿ ಪುರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆರೆ , ಮಳವಳ್ಳಿ ಟೌನ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಿದ್ದರಾಮುರವರ ಬಿಲ್ಡಿಂಗ್ ಮೊದಲನೇ ಅಂತಸ್ತಿನಲ್ಲಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಮೊಬೈಲ್ ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದು, ದಿ:04-06-2011 ರಂದು ರಾತ್ರಿ ತಮ್ಮ ಅಂಗಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಹೊಡೆದು ಅಂಗಡಿಯಲ್ಲಿಟ್ಟಿದ್ದ ಎರಡು ಮೊಬೈಲ್ ಹಾಗೂ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಗಳನ್ನು ಮತ್ತು ಸುಮಾರು 3,500/- ರೂ ನಗದು ಸೇರಿದಂತೆ ಒಟ್ಟು ರೂ.12,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರ ಸಂಬಂಧ ಮಳವಳ್ಳಿ ಪುರ ಠಾಣೆ ಮೊ.ಸಂ.77/2011 ಕಳಂ 457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಕೃತ್ಯ ನಡೆದ ಸ್ಥಳಕ್ಕೆ ಮಂಡ್ಯದ ಬೆರಳಚ್ಚು ತಜ್ಞರು ಭೇಟಿ ಮಾಡಿ ಸ್ಥಳದಲ್ಲಿದ್ದ ಬೆರಳು ಗುರುತುಗಳನ್ನು ಸಂಗ್ರಹಿಸಿಕೊಂಡು ಸೆಂಟ್ರಲ್ ಸರ್ವರ್ ಮುಖಾಂತರ ಶೋಧನೆ ಮಾಡಿ ಕೃತ್ಯ ನಡೆದ ಸ್ಥಳದಲ್ಲಿದ್ದ ಬೆರಳು ಮುದ್ರೆ ಗುರುತುಗಳಿಗೂ ಹಾಗೂ ಬೆಂಗಳೂರಿನ ಹೆಬ್ಬಕವಾಡಿ, ವಿಜಯನಗರ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಆರೋಪಿತರುಗಳಾದ 1.ರವಿ @ ಗುಂಢ ಬಿನ್ ಸುಬ್ರಮಣಿ, 36 ವರ್ಷ, ಬೋವಿ ಜನಾಂಗ, ಆಟೋ ಡ್ರೈವರ್, ವಾಸ ಮನೆ.ನಂ.96, 9 ನೇ ಕ್ರಾಸ್, ಚಿಕ್ಕಣ್ಣ ಬಡಾವಣೆ, ಆಶ್ವತನಗರ, ತಣಿಸಂದ್ರ, ಬೆಂಗಳೂರು, ಹಾಲಿವಾಸ, ಓಂ ಶಕ್ತಿ ದೇವಸ್ಥಾನದ ಪಕ್ಕ, ಶಂಕರ ಬಿಲ್ಡಿಂಗ್, ಇಲಾಲ್ ನಗರ, ಬೆಂಗಳೂರು, 2.ಖಾದರ್ ಬಾಷ ಬಿನ್ ಅಬೀಬ್ ಖಾನ್, 35 ವರ್ಷ, ಮುಸ್ಲಿಂ ಜನಾಂಗ, ಪಂಚರ್ ಅಂಗಡಿ ಕೆಲಸ, ಮನೆ.ನಂ.22, ಬೇಗೂರು ರೋಡ್ ಕ್ರಾಸ್, ಮಸೀದಿ ಹಿಂಭಾಗ, 1 ನೇ ಕ್ರಾಸ್, ಮೌಲ್ವಿ ಬಿಲ್ಡಿಂಗ್, ಬೊಮ್ಮನಹಳ್ಳಿ, ಬೆಂಗಳೂರು-68 ರವರುಗಳ ಬೆರಳು ಗುರುತುಗಳಿಗೆ ಸಾಮತ್ಯೆ ಇರುವುದಾಗಿ ತಿಳಿದುಬಂದ ಮೇರೆಗೆ ಮಳವಳ್ಳಿ ಪುರ ಪೊಲೀಸ್ ಠಾಣೆಯ ಪಿಐ ಎಲ್.ಕೆ.ರಮೇಶ್ ಹಾಗೂ ಸಿಬ್ಬಂದಿಯವರು ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಇಬ್ಬರು ಆರೋಪಿಗಳನ್ನು ದಿ:09-06-2011 ರಂದು ಬೆಂಗಳೂರಿನಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡಿರುತ್ತಾರೆ.

ನಂತರ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ, ಆರೋಪಿಗಳು ಮೇಲ್ಕಂಡ ಮಳವಳ್ಳಿ ಪಟ್ಟಣದಲ್ಲಿ ಕಳ್ಳತನ ಮಾಡಿದ್ದ ಹಾಗೂ ಇತರೆ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ ಚಿನ್ನಾಭರಣ, ಮೊಬೈಲ್, ನಗದು ಹಣ, ಬಟ್ಟೆಗಳು ಹಾಗೂ ಇತರೆ ವಸ್ತುಗಳನ್ನು ಮೇಲ್ಕಂಡ ಆರೋಪಿ ರವಿ @ ಗುಂಡ ಎಂಬುವರ ಬೆಂಗಳೂರಿನಲ್ಲಿರುವ ಅವರ ತಾಯಿ ಮನೆಯಲ್ಲಿ ಹಾಗೂ ಬೆಂಗಳೂರಿನ ಹೊರಮಾವುವಿನ ಶ್ರೀಮಾತಾಜಿ, ಜ್ಯುವೆಲ್ಲರ್ಸ್ ಬ್ಯಾಂಕರ್ಸ್ ಅಂಡ್ ಗಿರವಿ ಅಂಗಡಿಯಲ್ಲಿ ಎರಡು ಚಿನ್ನದ ಬಳೆ, ಒಂದು ಚೈನ್ ಮಾರಾಟ ಮಾಡಲು ಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ ಐದು ಮೊಬೈಲ್, ಎರಡು ಚಿನ್ನದ ಬಳೆ, ಒಂದು ಚಿನ್ನದ ಚೈನ್, 3,500-00 ನಗದು, ನಾಲ್ಕು ಟೀಶರ್ಟ್, ನಾಲ್ಕೂ ಪ್ಯಾಂಟ್, ಒಂದು ಎಲೆಕ್ಷನ್ ಐಡಿ ಕಾರ್ಡ್, ಎರಡು ಮಹಿಳೆಯ ಭಾವಚಿತ್ರ ಇರುವ ಪಾಸ್ ಪೊರ್ಟ್ ಸೈಜಿನ ಪೋಟೋಗಳು, ಮತ್ತು ಒಂದು ಕೆಂಪು ಹರಳಿನ ಚಿನ್ನದ ಉಂಗುರು, ಒಂದು ಜೊತೆ ಮುತ್ತಿನ ಓಲೆ, ಒಂದು ಜೊತೆ ಬಿಳಿ ಹರಳು ಇರುವ ಚಿನ್ನದ ಓಲೆ, ಒಂದು ಜೊತೆ ಕೆಂಪು ಹರಳಿನ ಚಿನ್ನದ ಹ್ಯಾಂಗಿಂಗ್ಸ್, ಒಂದು ಲಕ್ಷ್ಮೀ ಚಿತ್ರವಿರುವ ಚಿನ್ನದ ಡಾಲರ್ ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು ಎರಡು ಲಕ್ಷ ರೂಗಳಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಶ್ರಮವಹಿಸಿದ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಎಲ್.ಕೆ.ರಮೇಶ್ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.

Raid On 11-06-2011

ವೇಶ್ಯಾವಾಟಿಕೆ ಪ್ರಕರಣ

ಮದ್ದೂರು ಪೊಲೀಸ್ ಠಾಣೆ
1] ಮೊ.ಸಂ 250/11 ಕಲಂ 3-4-5-6-7-8 ಮತ್ತು 11 ಐ.ಟಿ.ಪಿ ಕಾಯಿದೆ ದಿನಾಂಕ 11-06-11 ರಂದು 01-15 ಗಂಟೆಯಲ್ಲಿ ಪಿರ್ಯಾದಿ ಶ್ರೀ ಎಂ. ಎಂ. ಪ್ರಶಾಂತ್ ಸಿ.ಪಿ.ಸಿ ಮದ್ದೂರು ವೃತ್ತ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಡನೆ ಮದ್ದೂರು ಟೌನ್ ಪೂಜಿತ್ ಲಾಡ್ಕ್ ನ್ನು ಪರಿಶೀಲಿಸಿದಾಗ ಸದರಿ ಲಾಡ್ಕ್ ನಲ್ಲಿ ಆರೋಪಿಗಳಾದ ಸಿದ್ದರಾಜಿ, ಅಪ್ಪಾಜಿ. ರಾಜು ಮತ್ತು ಇತರರೂ ವೇಶ್ಯಾವಾಟಿಯಲ್ಲಿ ತೊಡಗಿದ್ದು ಸದರಿಯವರ ವಿರುದ್ದ ಕೇಸು ದಾಖಲು ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ ಬಗ್ಗೆ

Raid On 02-06-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಓ 95/11 ಕಲಂ 79-80 ಕೆ.ಪಿ. ಆಕ್ಟ್

ದಿನಾಂಕ 03-06-11 ರಂದು ಜಿ. ಕೃಷ್ಣಮೂರ್ತಿ ಪಿಐ ಡಿ.ಸಿ.ಐಬಿ ಮಂಡ್ಯ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿ ಸಿಬ್ಬಂದಿಗಳೊಡನೆ ಸಂಜೆ 04-00 ಸಮಯದಲ್ಲಿ ಕೆ.ಆರ್. ಸಾಗರ ಪೊಲೀಸ್ ಠಾಣೆ ಸರಹದ್ದಿನ ಮೊಗರಹಳ್ಳಿ ಗ್ರಾಮದ ಬಳಿ ಇರುವ ಹಿರಿದೇವಮ್ಮ ರಿಕ್ರಿಯೇಷನ್ ಸೆಂಟರ್ ನಲ್ಲಿ ಆರೋಪಿಗಳಾದ ಹೊನ್ನೇಗೌಡ ಮತ್ತು ಇತರೆ 22 ಜನರು ಹನವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದು. ಸದರಿಯವರ ಮೇಲೆ ಪಿರ್ಯಾದಿಯವರ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಬಳಿ ಇದ್ದು ನಗದು 59.271/- ರೂ, 22 ಮೋಬೈಲ್ ಪೋನುಗಳು. 10 ಕೈ ಗಡಿಯಾರಗಳು. 3 ಚಿನ್ನದಂತಿರುವ ಉಂಗುರು. 18 ದ್ವಿಚಕ್ರ ವಾಹನಗಳು. 1 ಸ್ಯಾಂಟ್ರೋ ಕಾರ್ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

Daily Crime Report Date: 01-06-2011

ಜಿಲ್ಲೆಯಲ್ಲಿ ಈ ದಿನ ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 7 ರಸ್ತೆ ಅಪಘಾತ ಪ್ರಕರಣ, 3 ಕಳ್ಳತನ ಪ್ರಕರಣ, 1 ದರೋಡೆ ಪ್ರಕರಣ ಹಾಗೂ 1 ಯುಡಿಆರ್ ಪ್ರಕರಣ ಹಾಗೂ ಇತರೆ ಪ್ರಕರಣಗಳು ವರದಿಯಾಗಿರುತ್ತೆ.

ಯು.ಡಿ.ಆರ್. ಪ್ರಕರಣ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ
1] ಯು.ಡಿ.ಆರ್. ನಂ 20/11 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 01-06-11 ರಂದು ಮೃತ ಕೃಷ್ಣ ಬಿನ್ ರಾಚಾಚಾರಿ 31 ವರ್ಷ ಜೀವನಲ್ಲಿ ಜಿಗುಪ್ಸ್ ಗೊಂಡು ಯಾವುದೋ ಕ್ರಿಮನಾಶಕ ಔಷಧಿಯನ್ನು ಸೇವಿಸಿ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ

ಕಳ್ಳತನ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ 265/11 ಕಲಂ 109 ಸಿ.ಆರ್.ಪಿ.ಸಿ ದಿನಾಂಕ 01-06-11 ರಂದು ಪಿರ್ಯಾದಿ ಕಾಳೇಗೌಡ ಸಿಹೆಚ್.ಸಿ. 87 ಪಾಂಡವಪುರ ಪೊಲೀಸ್ ಠಾಣೆ ರವರು ರೈಲ್ವೆ ನಿಲ್ದಾಣದ ಬಳಿ ರಾತ್ರಿ ಗಸ್ತು ಮಾಡುತ್ತಿದ್ದಾಗ ಆರೋಪಿ ರಮೇಶ @ ಲೋಕೇಶನು ಪಿರ್ಯಾದಿಯವರನ್ನು ಕಂಡು ಓಡಿ ಹೋಗಿ ಅಂಗಡಿಯ ಮರೆಯಲ್ಲಿ ಅವಿತುಕೊಳ್ಳು ಪ್ರಯತ್ನಿಸುತ್ತಿದ್ದಾಗ ಕಳ್ಳತನ ಮಾಡಲು ಹೊಂಚು ಹಾಕುತ್ತಿರಬಹುದು ಎಂದು ಅನುಮಾನ ಬಂದು ಠಾಣೆಗೆ ಕರೆತಂದು ಕೇಸು ದಾಖಲಿಸಿದ ಬಗ್ಗೆ

ಕೊಪ್ಪ ಪೊಲೀಸ್ ಠಾಣೆ
2] ಮೊ.ಸಂ 78/11 ಕಲಂ 379 ಐಪಿಸಿ ದಿನಾಂಕ 31-05-11 ರಂದು ಪಿರ್ಯಾದಿ ಜಿ.ವಿ ಪುಟ್ಟಸ್ವಾಮಿ ರವರ ಜೋಗಿಕೊಪ್ಪಲು ಗ್ರಾಮದ ದೇವಸ್ಥಾನದ ಬಳಿ ನಿಲ್ಲಿಸಿದ್ದ ಅವರ ಬಾಬ್ತು ಕೆಎ-11-ವಿ-8174 ಹೀರೊ ಹೊಂಟಾ ಪ್ಯಾಷನ್ ಪ್ರೋ ಬೈಕ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪೂರ್ವ ಪೊಲೀಸ್ ಠಾಣೆ
3] ಮೊ.ಸಂ 152/11 ಕಲಂ 41 ಕ್ಲಾಸ್ [ಎ] ರೆ/ವಿ 109 ಸಿ.ಆರ್.ಪಿ.ಸಿ ದಿನಾಂಕ 31-05-11 ರಂದು ರಾತ್ರಿ ಪಿರ್ಯಾದಿ ಬಿ.ಸಿ. ಲೋಕೇಶ ಸಿ.ಹೆಚ್.ಸಿ 235 ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಹಾಲಹಳ್ಳಿ ಆಟೋ ಸ್ಟಾಂಡ್ ಹತ್ತಿರ ಆರೋಪಿ ಕೆ.ಎಸ್. ಉಮೇಶ ಬಿನ್ ಸಿದ್ದನರಸಯ್ಯ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತ ಪಿರ್ಯಾದಿಯನ್ನು ಕಂಡು ಮರೆಮಾಚಿಕೊಳ್ಳಲು ಪ್ರಯತ್ನಪಟ್ಟಿದ್ದರಿರಂದ ಹಿಡಿದು ಠಾಣೆಗೆ ಹಾಜರು ಪಡಿಸಿದ ಬಗ್ಗೆ

ಇತರೆ ಪ್ರಕರಣ
ಮಂಡ್ಯ ಪೂರ್ವ ಪೊಲೀಸ್ ಠಾಣೆ
1] ಮೊ.ಸಂ 153/11 ಕಲಂ 406-417-420 ರೆ/ವಿ 34 ಐಪಿಸಿ ಮತ್ತು 4.5 ಮತ್ತು 6 Prize Chits and Money Circulation Scheme [Banning] Act 1978, ಆರೋಪಿ 6 ಹನುಮಂತ ಕುಮಾರ್ ಎಂಬುವರು ಪಿರ್ಯಾದಿ ಶಂಕರ್ ರವರಿಗೆ ಪರಿಚಯವಾಗಿದ್ದು ಮಂಡ್ಯ ಸಿಟಿ ಮಮತಾ ನರ್ಸಿಂಗ್ ಹೋಂ ಹತ್ತಿರ ಇದ್ದ ಕ್ವೆಸ್ಟ್ ನೆಟ್ಸ್ ಎಂಟರ್ ಪೈಸಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಬ್ರಾಂಚ್ ಆಪೀಸ್ ನಲ್ಲಿ ಹಣ ತೊಡಗಿಸಿದರೆ ಚಿನ್ನದ ಹಾಗೂ ಬೆಳ್ಳಿಯ ಮಾಡಲ್ ಗಳನ್ನು ಖರೀದಿಸಿದರೆ ಕಂಪನಿಗೆ ಸ್ವತಂತ್ರ ಪ್ರತಿನಿದಿಯಾಗಿ ಕಮಿಷನ್ ರೂಪದಲ್ಲಿ ಹೆಚ್ಚು ಹಣ ಸಂಪಾದಿಸ ಬಗುದೆಂದು ಹೇಳಿದ ಮೇರೆಗೆ ಇತರೆ ಆರೋಪಿಗಳ ಭರವಸೆ ಮೇರೆಗೆ ಪಿರ್ಯಾದಿಯು ದಿನಾಂಕ 07-09-2007 ರಂದು 32.700 ರೂಗಳ ಎಂಡಿ.ಸಿ.ಸಿ. ಬ್ಯಾಂಕಿನಿಂದ ಚಕ್ಕನ್ನು ಪಡೆದು ಕ್ವೆಸ್ಟ್ ನೆಟ್ಸ್ ಕಂಪನಿಗೆ ಕಟ್ಟಿದ್ದ ನಂತರ ೀ ಬಗ್ಗೆ ಸ್ವೇಕೃತಿ ರಶೀತಿಯನ್ನು ಪಡೆದು ಕೊಂಡಿದ್ದಾಗಿ, ನಂತರ ೀ ಬಗ್ಗೆ ಕಂಪನಿಯಿಂದ ಯಾವುದೇ ಹಣದ ಕಮಿಷನ್ ದೊರೆಯಲಿಲ್ಲವೆಂತಲೂ, ನಂತರ ಈ- ಟಿವಿ ಹಾಗೂ ಇತರೆ ಮಾಧ್ಯಮಗಳಲ್ಲಿ ಸದರಿ ಕಂಪನಿ ಗ್ರಾಹಕರಿಗೆ ಮೋಸ ಮಾಡಿರುವ ಬಗ್ಗೆ ತಿಳಿದಿದ್ದ ನಂತರ ಸದರಿ ಆರೋಪಿಗಳನ್ನು ಸಂಪರ್ಕಿಸಿ ತಾನು ತೊಡಗಿಸಿದ್ದ ಹಣದ ಬಗ್ಗೆ ಕೇಳಲಾಗಿ ವಾಪಸ್ಸು ನೀಡಿಲ್ಲವೆಂದು ಸದರಿ ಆರೋಪಿತರುಗಳು ಸಮಾನ ಉದ್ದೇಶದಿಂದ ತಮಗೆ ನಂಬಿಕೆ ದ್ರೋಹ ಮಾಡಿ ವಂಚಿಸಿ ಹಣ ವಾಪಸ್ ನೀಡದೆ ಮೋಸ ಮಾಡಿರುವುದಾಗಿ ಪಿರ್ಯಾದು.

ರಾಬರಿ ಪ್ರಕರಣ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ
1] ಮೊ.ಸಂ 368/11 ಕಲಂ 395 ಐಪಿಸಿ ದಿನಾಂಕ 01-06-11 ರಂದು ಪಿರ್ಯಾದಿ ಕಮಲಮ್ಮ ನವರು ವೈಧ್ಯನಾಥಪುರದಲ್ಲಿ ಬಸ್ ಗೆ ಕಾಯುತ್ತಾ ನಿಂತಿದ್ದಾಗ ಯಾರೋ 5 ಜನ ಆರೋಪಿಗಳು ಎಲ್ಲಿಗೆ ಬರುತ್ತೀರಾ ಎಂದು ಕೇಳಿ ಕಾರು ಹತ್ತಿಸಿಕೊಂಡು ಕಿರುಚಿದರೆ ಕೊಲೆ ಮಾಡುವುದಾಗಿ ಮುಚ್ಚು ತೋರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಪಿರ್ಯಾದಿ ಮತ್ತು ಆಕೆಯ ತಾಯಿಯ ಮೈಮೇಲಿದ್ದ 60 ಗ್ರಾಂ ತೂಕದ ಒಂದು ಚಿನ್ನದ ಮಾಂಗಲ್ಯ ಚೈನು, ಜೋತೆ ಒಟ್ಟು 162 ಗ್ರಾಂ ಚಿನ್ನದ ವಡವೆಗಳನ್ನು ಇದರ ಬೆಲೆ 3 ಲಕ್ಷ, 20 ಸಾವಿರ ರೂ ನಗದು ತೆಗೆದುಕೊಂಡು ಹೋಗಿರುತ್ತಾರೆ.

Press Note 02-06-2011

ಪತ್ರಿಕಾ ಪ್ರಕಟಣೆ

ಈ ಮೂಲಕ ಮಂಡ್ಯ ಜಿಲ್ಲೆಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಇತ್ತೀಚೆಗೆ ಸುಮಾರು 25 ವರ್ಷ ವಯಸ್ಸಿನ ಹಿಂದಿ ಭಾಷೆಯಲ್ಲಿ ಮಾತನಾಡುವ ಯುವಕರು ಮೋಟಾರ್ ಸೈಕಲ್ ಮೇಲೆ ಹಳ್ಳಿಗಳಿಗೆ ಬಂದು ಚಿನ್ನದ ಒಡವೆಗಳನ್ನು ಬಿಸಿ ನೀರಿನಲ್ಲಿ ಹಾಕಿ, ಕುದಿಸಿ ಪಾಲಿಷ್ ಮಾಡಿಕೊಡುವುದಾಗಿ ಹೇಳಿ ಮಹಿಳೆಯರಿಂದ ಒಡವೆಗಳನ್ನು ಬಿಚ್ಚಿಸಿ ಬಿಸಿ ನೀರಿನಲ್ಲಿ ಹಾಕಿ ಕುದಿಸಿದ ಹಾಗೇ ಮಾಡಿ ನಂತರ ಮಹಿಳೆಯರ ಗಮನವನ್ನು ಬೇರೆ ಕಡೆ ಸೆಳೆದು ಒಡವೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅಪರಿಚಿತ ವ್ಯಕ್ತಿಗಳು ಮನೆಯ ಹತ್ತಿರ ಬಂದು ಚಿನ್ನದ ಒಡವೆಗಳನ್ನು ಪಾಲಿಷ್ ಮಾಡಿಕೊಡುವುದಾಗಿ ಹೇಳಿದ್ದನ್ನು ನಂಬಿ ಮೋಸ ಹೋಗಬಾರದಾಗಿ ಮತ್ತು ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದುಬಂದರೆ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.

Raid on 01-06-2011

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 223/11 ಕಲಂ 87 ಕೆ.ಪಿ. ಆಕ್ಟ್

ದಿನಾಂಕ 31-05-11 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಮಂಡ್ಯ ನಗರದಲ್ಲಿ ರೌಂಡ್ಸ್ ನಲ್ಲಿರುವಾಗ ಪಿರ್ಯಾದಿ ಶ್ರೀ ಚನ್ನಬಸವಣ್ಣ ಎಸ್.ಎಲ್ ಡಿ.ವೈಎಸ್.ಪಿ ಮಂಡ್ಯ ಉಪ-ವಿಭಾಗ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಹನಕೆರೆ ಗ್ರಾಮದ ಈಶ್ವೆರ ದೇವಸ್ಥಾನದ ಕೆರೆ ಬಳಿ ಇರುವ ಹುಣೆಸೆ ಮರದ ಕೆಳಗಡೆ ಸುಮಾರು 8-10 ಜನರು ಪ್ಲಾಸ್ಟೀಕ್ ಥಾಟನ್ನು ಹಾಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟವಾಡುತ್ತಿದ್ದಾರೆದು ಬಂದು ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಆರೋಪಿಗಳಾದ ಹೆಚ್.ಟಿ. ರವೀಂದ್ರ ಮತ್ತು ಇತರೆ 10 ಜನರನ್ನು ಮತ್ತು 18.800 ರೂ ನಗದು, ಒಂದು ಚಿನ್ನದ ಉಂಗುರ. 3 ವಾಚ್ ಗಳು, 3 ಮೋಟಾರ್ ಸೈಕಲ್ ಕಳನ್ನು ವಶಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

press Note Dated: 01-06-2011.

ಪತ್ರಿಕಾ ಪ್ರಕಟಣೆ

ಇತ್ತೀಚೆಗೆ ಪಾಂಡವಪುರ ತಾಲ್ಲೋಕಿನಲ್ಲಿ ವರದಿಯಾಗಿರುವ ಕನ್ನ ಕಳವು ಮತ್ತಿತರ ಪ್ರಕರಣಗಳ ಹಿನ್ನೆಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳ ಪತ್ತೆ ಮಾಡಲು ಶ್ರೀರಂಗಪಟ್ಟಣ ಉಪ-ವಿಭಾಗದಲ್ಲಿ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ. ಕೃಷ್ನಮೂರ್ತಿ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು.

ಈ ತಂಡ ಕಾರ್ಯಪ್ರವೃತ್ತರಾಗಿ ದಿನಾಂಕ 31-05-11 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಪಾಂಡವಪುರ ತಾಲ್ಲೋಕು ದೊಡ್ಡಬ್ಯಾಡರಹಳ್ಳಿ ರೈಲ್ವೆ ಗೇಟ್ ಬಳಿ ಸಂಶಯಾಸ್ಪದವಾಗಿ ಸ್ಕೂಟರ್ ತಳ್ಳಿಕೊಂಡು ಹೋಗುತ್ತಿದ್ದ ಪ್ರಸನ್ನಕುಮಾರ್ ಉಃ ಪ್ರಸನ್ನ ಉಃ ಪಚ್ಚಿ ಬಿನ್ ಲಗಳಯ್ಯ 32 ವರ್ಷ ಶಾಂತಿನಗರ ಪಾಂಡವಪುರ ಟೌಣ್ ಎಂಬುವನನ್ನು ದಸ್ತಗಿರಿ ಮಾಡಿ ಈತನು ಕೊಟ್ಟ ಸುಳುವಿನ ಮೇರೆಗೆ ಈ ಕೆಳಕಂಡ ಕೇಸುಗಳಿಗೆ ಸಂಬಂದಪಟ್ಟ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 256/11 ಕಲಂ 379 ಐಪಿಸಿ

ದಿನಾಂಕ 24-05-11 ರ ರಾತ್ರಿ ಪಾಂಡವಪುರ ಟೌನ್ ಮಹಾತ್ನಗಾಂಧಿ ನಗರದ ಶ್ರೀ ಕೆ. ಕೃಷ್ಣಪ್ಪ ಬಿನ್ ಕೃಷ್ಣಪ್ಪ ಎಂವುವರ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ್ ಚೇತಕ್ ಸ್ಕೂಟರ್ ನಂ ಕೆಎ-02-ಎಸ್-6276 ನ್ನು ಕಳವು ಮಾಡಿಕೋಮಡು ಹೋಗಿದ್ದು ಸುಮಾರು ಐದು ಸಾವಿರ ಬೆಲೆ ಬಾಳುವ ಸ್ಕೂಟರನ್ನು ಅಮಾನತ್ತು ಪಡಿಸಿರುತ್ತಾರೆ

ಇದಲ್ಲದೆ ಸದರಿ ಆರೋಫಿ ಕೊಟ್ಟ ಸುಳುವಿನ ಮೇರೆಗೆ ಬನ್ನಘಟ್ಟ ಗ್ರಾಮದ ನಾಲೆ ಬಳಿ ಜಮೀನಿಗಳಿಗೆ ನೀರು ಹೊಡೆದುಕೊಳ್ಳಲು ಅಲವಡಿಸಿದ್ದ ಮೂರು ಪಂಪ್ ಸೆಟ್ ಮೋಟಾರ್ ಗಳನ್ನು ಅಂದರೆ 10 ಹೆಚ್.ಪಿ. ಒಂದು ಪಂಪ್ ಸೆಟ್ ಮೋಟಾರ್ ಮತ್ತು 7.5 ಹೆಚ್.ಪಿ ಯ ಎರಡು ಪಂಪ್ ಸೆಟ್ ಮೋಟಾರ್ ಗಳನ್ನು ಅಂದಾಜು 56000/- ರೂ ಬೆಲೆ ಬಾಳುವ ಪಂಪ್ ಸೆಟ್ ಮೋಟಾರ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ

ಮೇಲ್ಕಂಡ ಆರೋಪಿ ನೀಡಿದ ಸುಳುವಿನ ಮೇರೆಗೆ ಒಟ್ಟು 61000-00 ರೂ ಬೆಲೆ ಮಾಳುವ ಸ್ಕೂಟರ್ ಮತ್ತು ಪಂಪ್ ಸೆಟ್ ಮೋಟಾರ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಶ್ರಮವಹಿಸಿದ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ. ಕೃಷ್ಣ ಮೂರ್ತಿ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ನಂ 144 ಮಹದೇವಯ್ಯ. ಪಿ.ಸಿ 649 ಲಕ್ಷ್ಮಣ ಪಿ.ಸಿ 565 ಮೆಹಬೂಬ್ ಪಾಷ, ಪಿಸಿ 580 ರಮೇಶ. ಪಿ.ಸಿ. 731 ರಾಜೇ ಅರಸ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.